Siddapur| ಕಳೆದುಹೋದ ಅಜ್ಜಿಯ ನಾಲ್ಕು ಲಕ್ಷ ಬೆಲೆಯ ಚಿನ್ನದ ಸರ ಪೊಲೀಸರು ಹುಡಕಿ ಕೊಟ್ಟಿದ್ದು ಹೇಗೆ ಗೊತ್ತಾ? 

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ಕಣ್ಣು ಕಾಣದ ಅಜ್ಜಿಯ ₹4.5 ಲಕ್ಷ ಮೌಲ್ಯದ ಚಿನ್ನದ ಸರ ಕಳೆದುಹೋಗಿದ್ದು, ಶ್ವಾನದಳ ಸಹಾಯದಿಂದ ಪೊಲೀಸರು ಪತ್ತೆ ಮಾಡಿ ಕುಟುಂಬಕ್ಕೆ ಹಸ್ತಾಂತರಿಸಿದ ಘಟನೆ ನಡೆದಿದೆ
ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಕಳೆದುಹೋದ ಚಿನ್ನದ ಸರವನ್ನು ಪತ್ತೆ ಮಾಡಿ ಕುಟುಂಬಕ್ಕೆ ಹಸ್ತಾಂತರಿಸಿದ ಪೊಲೀಸರು ಮತ್ತು ಸಿಬ್ಬಂದಿ. ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಕಳೆದುಹೋದ ಚಿನ್ನದ ಸರವನ್ನು ಪತ್ತೆ ಮಾಡಿ ಕುಟುಂಬಕ್ಕೆ ಹಸ್ತಾಂತರಿಸಿದ ಪೊಲೀಸರು ಮತ್ತು ಸಿಬ್ಬಂದಿ.
Siddapur news

Siddapur| ಕಳೆದುಹೋದ ಅಜ್ಜಿಯ ನಾಲ್ಕು ಲಕ್ಷ ಬೆಲೆಯ ಚಿನ್ನದ ಸರ ಪೊಲೀಸರು ಹುಡಕಿ ಕೊಟ್ಟಿದ್ದು ಹೇಗೆ ಗೊತ್ತಾ?

 

Siddapur :- ಆ ಅಜ್ಜಿಗೆ ಕಣ್ಣು ಕಾಣೋದಿಲ್ಲ ,ಮನೆಯಲ್ಲಿದ್ದ ಅಜ್ಜಿ ಚಿನ್ನದ ಸರ ಏಕಾ ಏಕಿ ಕಳೆದುಹೋಯ್ತು. ಆದ್ರೆ ಪೊಲೀಸರು ಈ ಕಳೆದುಹೋದ ಚಿನ್ನದ ಸರವನ್ನ ಪತ್ತೆ ಮಾಡಿ ಹುಡಿಕಿ ಕುಟುಂಬಸ್ತರಿಗೆ ನೀಡಿದ್ದಾರೆ. ಅರೇ ಇದರಲ್ಲೇನಿದೆ ಸ್ಪೆಷಲ್ ಅಂತೀರಾ ಖಂಡಿತಾ ಇದೆ.

Advertisement

ಹೌದು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ (siddapur) ತಾಲೂಕಿನ ನೆಲ್ಲಿಕೊಪ್ಪ  ಗ್ರಾಮದ ಕಣ್ಣು ಸರಿಯಾಗಿ ಕಾಣದ ಚೌಡಮ್ಮ(75) ಏ.3 ರಂದು 38 ಗ್ರಾಮ್ ತೂಕದ ₹4,50,000 ಮೌಲ್ಯದ ಚಿನ್ನದ ಸರ ಕುತ್ತಿಗೆಯಿಂದ ನಾಪತ್ತೆಯಾಗಿತ್ತು.

ಇದನ್ನೂ ಓದಿ:-Uttara kannada| ಇಂದು ಏನು ಸುದ್ದಿ?

ಇದನ್ನ ಗಮನಿಸಿದ ಕುಟುಂಬಸ್ತರು ಅಜ್ಜಿ ಬಳಿ ಕೇಳಿದ್ದಾರೆ.ಮೊದಲೇ ಕಣ್ಣು ಕಾಣದ ಅಜ್ಜಿಗೆ ಏನಾಯ್ತು ಎಂಬ ಬಗ್ಗೆ ಅರಿವೇ ಇರಲಿಲ್ಲ. ಕೊನೆಗೆ ಸಿದ್ದಾಪುರ ಠಾಣೆಗೆ ಚಿನ್ನದ ಸರ ಕಳೆದುಹೋದ ಬಗ್ಗೆ ಮೌಕಿಕ ದೂರು ನೀಡಿದರು.

Siddapur|ಭಿಕ್ಷುಕನಾಗಿ 4 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ವಶಕ್ಕೆ

ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಜೆ.ಬಿ ಸೀತಾರಾಮ ರವರ ಮಾರ್ಗದರ್ಶನದಲ್ಲಿ ಸಿದ್ದಾಪುರ ಠಾಣೆಯ ತನಿಖಾ ವಿಭಾಗದ ಪಿಎಸ್ಐ ನಾಗಪ್ಪ ಬಿ ಹಾಗೂ ಶಾಂತಿನಾಥ ಪಾಸಾನೆ  ಪಿಎಸ್ಐ ಗಳ ನೇತೃತ್ವದಲ್ಲಿ ಸಿಬ್ಬಂದಿಗಳಾದ ಮಣಿಕಂಠ,ಸಂದೀಪ್ ನಾಯ್ಕ,ಗಿರೀಶಯ್ಯ,ಮೋಹನ ಗಾವಡಿ,ಚೇತನ ಹಲಗೇರಿ ರವರು ಕಾರ್ಯಪ್ರವೃತ್ತರಾಗಿ ಡಾಗ್ ಸ್ವಾಡ್ ಅನ್ನು ಕರೆಯಿಸಿದರು. ಮೊದಲು ಕಳೆದ ಜಾಗದಲ್ಲಿ ಸಾಕಷ್ಟು ಹುಡುಕಿದರು ಎಲ್ಲಿ ಪೊಲೀಸರು ಈ ವಿಷಯವನ್ನ ಗಂಭೀರವಾಗಿ ತೆಗೆದುಕೊಂಡು ಗ್ರಾಮದಲ್ಲಿ ಶ್ವಾನದೊಂದಿಗೆ ಹುಡುಕಾಡಿದರೋ ಕೊನೆಗೆ ಅಜ್ಜಿ ಕಳೆದುಕೊಂಡ ಜಾಗದಲ್ಲಿ ಬಂಗಾರದ ಸರ ಪತ್ತೆಯಾಗಿದೆ .

ಇನ್ನು ಯಾರೋ ಸ್ಥಳೀಯರೇ ಅಜ್ಜಿಯ ಬಂಗಾರದ ಸರ ಸಿಕ್ಕು ತೆಗೆದುಕೊಂಡು ಹೋಗಿದ್ದು ಪೊಲೀಸರು(police) ಬಂದಿದ್ದರಿಂದ ಹೆದರಿ ಎಲ್ಲಿ ಸಿಕ್ಕಿತ್ತೋ ಅಲ್ಲಿಯೇ ಇಟ್ಟು ಹೋಗಿರುವುದು ದೃಢವಾಗಿದೆ. ಚಿಕ್ಕ ವಿಷಯ ಎಂದು ಅಸಡ್ಡೆ ಮಾಡದೇ ಶ್ವಾನ ದಳದೊಂದಿಗೆ ಹೋದ ಪೊಲೀಸರಿಗೆ ಹೆದರಿದ ಚಿನ್ನದ ಕಳ್ಳರು ಮರಳಿ ಇಟ್ಟುಹೋಗಿದ್ದಾರೆ.ಒಟ್ಟಿನಲ್ಲಿ ಅಜ್ಜಿಯ ನಾಲ್ಕು ಲಕ್ಷ ಮೌಲ್ಯದ ಚಿನ್ನದ ಸರ ಪೊಲೀಸರ ಶ್ರಮದಿಂದ ಮತ್ತೆ ಅಜ್ಜಿಯ ಕೈಸೇರಿದ್ದು ಕುಟುಂಬಸ್ತರು ಧನ್ಯವಾದ ಅರ್ಪಿಸಿದ್ದಾರೆ.

 

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement