Siddapur|ಭಿಕ್ಷುಕನಾಗಿ 4 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ವಶಕ್ಕೆ
ಕಾರವಾರ:-ತಾನು ಮಾಡಿದ ಕೃತ್ಯದಿಂದ ಜೈಲವಾಸ ತಪ್ಪಿಸಿಕೊಳ್ಳಲು ಆರೋಪಿಯೊಬ್ಬ ತಲೆಮರಸಿಕೊಂಡು ಭಿಕ್ಷುಕನಂತೆ ಜೀವನ ಸಾಗಿಸುತಿದ್ದವನ ಹೆಡೆಮುರಿ ಕಟ್ಟಿದ ಸಿದ್ದಾಪುರ (siddapur)ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.
Siddapur| ಶೇರ್ ಮಾರ್ಕೇಟ್ ನಲ್ಲಿ ನಷ್ಟ -ಯುವಕ ಆತ್ಮಹತ್ಯೆ
ಆರೋಪಿತನಾದ ಫಾರುಖ್ ಯಾನೆ ಫಾರುಖ್ ಉಲ್ಲಾ ತಂದೆ ಬೋಗಿ ಬಾಷಾಸಾಬ ವಯಾ/24 ಸಾ//ಹಳ್ಳೂರಕೇರಿ ಶಿರಾಳಕೊಪ್ಪ ಶಿವಮೊಗ್ಗ ಜಿಲ್ಲೆ ಇತನ ವಿರುದ್ದ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 03/2017 u/s 457,380 IPC ಕಾಯಿದೆಯಡಿಯಲ್ಲಿ ಮನೆಕಳ್ಳತನ ಪ್ರಕರಣ ದಾಖಲಾಗಿತ್ತು,ತನಿಖೆ ನಡೆಸಿದ ಸಿದ್ದಾಪುರ ಠಾಣೆ ಪೊಲೀಸರು ಇತನ ವಿರುದ್ದ ನ್ಯಾಯಾಲಯಕ್ಕೆ ದೋಷಾರೋಪಣೆ ಪತ್ರ ಸಲ್ಲಿಸಿದ್ದರು.ಈತ ಬೇರೆ ಜಿಲ್ಲೆಯವನಾಗಿದ್ದರಿಂದ ಶಿಕ್ಷೆಯಿಂದ ಬಚಾವ್ ಆಗಲು ಕಳೆದ 4 ವರ್ಷಗಳಿಂದ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ಕಣ್ತಪ್ಪಿಸಿಕೊಂಡಿದ್ದನು.
ಸಿದ್ದಾಪುರ ನ್ಯಾಯಾಲಯವು ಇತನ ವಿರುದ್ದ ದಸ್ತಗಿರಿ ವಾರಂಟು ಹೊರಡಿಸಿತ್ತು,ಸಿದ್ದಾಪುರ ಪೊಲೀಸರು ಆರೋಪಿತನ ಪತ್ತೆಗಾಗಿ ಶಿವಮೊಗ್ಗ,ಹಾವೇರಿ
ಮಂಗಳೂರು ಮುಂತಾದ ಕಡೆ ತಿರುಗಾಡಿ ಮಾಹಿತಿ ಸಂಗ್ರಹಿಸಿ ಉಡುಪಿ ಜಿಲ್ಲೆಯ ತ್ರಾಸಿಯಲ್ಲಿ ವೇಷ ಬದಲಾಯಿಸಿಕೊಂಡು ಬಿಕ್ಷಾಟನೆಯಲ್ಲಿ ತೊಡಗಿಕೊಂಡಿದ್ದ ಆರೋಪಿತನನ್ನು
ಪತ್ತೆ ಮಾಡಿ ವಶಕ್ಕೆ ಪಡೆದುಕೊಂಡು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ,ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ ಅಲ್ಲದೆ ಶಿವಮೊಗ್ಗ ಮತ್ತು ಉತ್ತರ ಕನ್ನಡದ ಹಲವಾರು ಪೊಲೀಸ್ ಸ್ಟೇಷನ್ ಗಳಲ್ಲಿ ಪ್ರಕರಣಗಳು ಇರುವುದಾಗಿ ತಿಳಿದು ಬಂದಿದೆ.
