Siddapur| ಕಾನಸೂರು ವಿದ್ಯಾರ್ಥಿ ಸಾವಿಗೆ ಟ್ವಿಷ್ಟ್ -ಶಿಕ್ಷಕನ ಅಕ್ರಮ ಸಂಬಂಧ ನೋಡಿದ್ದಕ್ಕೆ ಹತ್ಯೆ!? 

ಸಿದ್ದಾಪುರ ತಾಲೂಕಿನ ಕಾನಸೂರಿನ ಇಂದಿರಾಗಾಂಧಿ ವಸತಿ ಶಾಲೆಯ ವಿದ್ಯಾರ್ಥಿ ಕೃಷ್ಣಗೌಡ ಸಾವಿನ ಪ್ರಕರಣಕ್ಕೆ ಹೊಸ ತಿರುವು. ಆತ್ಮಹತ್ಯೆಯಲ್ಲ, ಶಿಕ್ಷಕನ ಅನೈತಿಕ ವರ್ತನೆ ಕಂಡಿದ್ದಕ್ಕೆ ಕೊಲೆ ಮಾಡಲಾಗಿದೆ ಎಂದು ತಾಯಿ ದೂರು ನೀಡಿದ್ದಾರೆ.
ಸಿದ್ದಾಪುರ ಕಾನಸೂರಿನ ಇಂದಿರಾಗಾಂಧಿ ವಸತಿ ಶಾಲೆಯ ವಿದ್ಯಾರ್ಥಿ ಕೃಷ್ಣಗೌಡ ಸಾವಿನ ಪ್ರಕರಣದಲ್ಲಿ ಕೊಲೆ ಆರೋಪದ ಹಿನ್ನೆಲೆ ತನಿಖೆ ನಡೆಸುತ್ತಿರುವ ಪೊಲೀಸರು ಸಿದ್ದಾಪುರ ಕಾನಸೂರಿನ ಇಂದಿರಾಗಾಂಧಿ ವಸತಿ ಶಾಲೆಯ ವಿದ್ಯಾರ್ಥಿ ಕೃಷ್ಣಗೌಡ ಸಾವಿನ ಪ್ರಕರಣದಲ್ಲಿ ಕೊಲೆ ಆರೋಪದ ಹಿನ್ನೆಲೆ ತನಿಖೆ ನಡೆಸುತ್ತಿರುವ ಪೊಲೀಸರು
ದೂರುದಾರ ಕುಟುಂಬ ಹಾಗೂ ಮೃತ ಬಾಲಕ

Siddapur| ಕಾನಸೂರು ವಿದ್ಯಾರ್ಥಿ ಸಾವಿಗೆ ಟ್ವಿಷ್ಟ್ -ಶಿಕ್ಷಕನ ಅಕ್ರಮ ಸಂಬಂಧ ನೋಡಿದ್ದಕ್ಕೆ ಹತ್ಯೆ!?

 

Siddapur ‘-ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ(siddapur) ತಾಲೂಕಿನ ಕಾನಸೂರಿನ ಇಂದಿರಾಗಾಂಧಿ ವಸತಿ ಶಾಲೆಯಲ್ಲಿ ಹತ್ತನೇ ತರಗತಿ ವಿದ್ಯಾರ್ಥಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಪ್ರಕರಣಕ್ಕೆ ಇದೀಗ್ ಬಿಗ್ ಟ್ಟಿಷ್ಟ್ ಸಿಕ್ಕಿದ್ದು ವಸತಿ ಶಾಲೆಯ ಶಿಕ್ಷಕನ ಕಾಮ ಪುರಾಣ ಕಂಡ ವಿದ್ಯಾರ್ಥಿಯನ್ನ ಕೊಲೆಮಾಡಲಾಗಿದೆ ಎಂದು ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:-Siddapur |ಕಾಡುಪ್ರಾಣಿಗಳ ಬೇಟೆ-ಮಸಾಲೆ ಅರೆದವರು ಜೈಲುಪಾಲು

Advertisement

ವಸತಿ ಶಾಲೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ವಿದ್ಯಾರ್ಥಿ ಕೃಷ್ಣ ಗೌಡನ(14) ಜೂನ್ 9 ರಂದು ಪತ್ತೆಯಾಗಿದ್ದನು. ಈತನ ಸಾವಿನ ಕುರಿತು ಕುಟುಂಬಸ್ತರು ಅನುಮಾನ ವ್ಯಕ್ತಪಡಿಸಿದ್ದರು. ಇನ್ನು ವಸತಿ ಶಾಲೆಯಲ್ಲಿ ಸಿಬ್ಬಂದಿ ಹಾಗೂ ಶಿಕ್ಷಕರ ಲೋಪದಿಂದ ವಸತಿ ಶಾಲೆಯ ಪ್ರಭಾರ ಪ್ರಾಂಶುಪಾಲ ಜಾವೇದ್ , ಪ್ರಭಾರ ವಸತಿ ನಿಲಯದ ಪಾಲಕ ಆರೋಪಿ ಅಬ್ಬುತಲಹ ರನ್ನ ಸಾಮಾಜ ಕಲ್ಯಾಣ ಇಲಾಖೆಯ ನಿರ್ದೇಶಕರು ಅಮಾನತು ಮಾಡಿದ್ದರು.ಇನ್ನು ಸಿದ್ದಾಪುರ ಠಾಣೆಯಲ್ಲಿ ಮೃತ ವಿದ್ಯಾರ್ಥಿಯ ತಾಯಿ ಜಯಶ್ರೀ ಇದೀಗ ಮಗನ ಸಾವಿನ ಕುರಿತು ತನ್ನ ಮಗನದ್ದು ಆತ್ಮಹತ್ಯೆ ಅಲ್ಲ ಕೊಲೆ ಎಂದು ಸಿದ್ದಾಪುರ ಠಾಣೆಯಲ್ಲಿ ದೂರು ನೀಡಿದ್ದಾರೆ.

ಈ ದೂರಿನಲ್ಲಿ ವಾರ್ಡನ್ ಅಬ್ಬುತಲಹ ನ ಅನೈತಿಕ ವರ್ತನೆಯನ್ನು ಮಗ ನೋಡಿದ್ದನು,9 ನೇ ತರಗತಿ ವಿದ್ಯಾರ್ಥಿನಿ  ಜೊತೆ ಶಿಕ್ಷಕ ಅಬ್ಬು ದುರ್ವರ್ತನೆ ಮಾಡುತಿದ್ದನು.

ಈ ವಿಷಯ ಬಾಯಿ ಬಿಟ್ರೆ ಕೊಲೆ ಮಾಡುವುದಾಗಿ ಮಗನಿಗೆ ವಾರ್ಡನ್ ಅಬ್ಬು ವಾರ್ನ ಮಾಡಿದ್ದನು.ಈ ಹಿಂದೆ ನನ್ನ ಮಗನಿಗೆ ಕತ್ತು ಹಿಸುಕಿ ಹಿಂಸೆ ನೀಡಿದ್ದನು.

ಶಿಕ್ಷಕನ ಕಾಮ ಪುರಾಣ  ಬಗ್ಗೆ ಸ್ನೇಹಿತರ ಬಳಿ ಮಗ ಕೃಷ್ಣಗೌಡ ಹೇಳಿಕೊಂಡಿದ್ದ.ನಾನು ಕೇಳಿದಾಗ ಮನೆಗೆ ಬಂದಾಗ ಎಲ್ಲ ಹೇಳುವೆ ಎಂದಿದ್ದನು.ಈಗ ಮತ್ತೆ ಅನೈತಿಕ ವರ್ತನೆ ಕಂಡಿದಕ್ಕೆ ಹಿಂಸಿಸಿ ಕೊಲೆ ಎಂದು ಮೃತನ ತಾಯಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.ಇನ್ನು ದೂರು ಬೆನ್ನಲ್ಲೇ ವಾರ್ಡನ್ ಅಬ್ಬುತಲಹ ನನ್ನು ತನಿಖೆ ನಡೆಸುತ್ತಿರುವ ಕಾರವಾರದ ಡಿ.ವೈ.ಎಸ್.ಪಿ ಗಿರೀಶ್ ನೇತ್ರತ್ವದ ತಂಡ ವಶಕ್ಕೆ ಪಡೆದು ವಿಚಾರಣೆ ನಡೆಸುತಿದ್ದಾರೆ.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement