Mundgod| ರೌಡಿ ಶೀಟರ್ ಸೇರಿ 14 ಜನ ಮೀಟರ್ ಬಡ್ಡಿ ದಂಧೆಕೋರರ ಮನೆಯಮೇಲೆ DYSP ಗೀತಾ ಪಾಟೀಲ್ ತಂಡ ದಾಳಿ.
ಕಾರವಾರ:-ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಮೀಟರ್ ಬಡ್ಡಿ ದಂಧೆ ಹಿನ್ನಲೆಯಲ್ಲಿ ಎಸ್.ಪಿ ದೀಪನ್ ರವರ ಸೂಚನೆಯಂತೆ ಮೀಟರ್ ಬಡ್ಡಿ ದಂಧೆ ಕೋರರ ಹೆಡೆಮುರಿ ಕಟ್ಟಲು ಪೊಲೀಸ್ ಇಲಾಖೆ ಕ್ರಮ ಕೈಗೊಂಡಿದೆ.
ಮುಂಡಗೋಡಿನಲ್ಲಿ ದಾಳಿ
ಜಿಲ್ಲೆಯ ಮುಂಡಗೋಡ (mundgod) ನಲ್ಲಿ ಮೀಟರ್ ಬಡ್ಡಿ ದಂಧೆಯ ಮೂರು ಜನ ರೌಡಿ ಶೀಟರ್ ಸೇರಿ 14 ಮನೆ ಮೇಲೆ ಶಿರಸಿ DYSP ಗೀತಾ ಪಾಟೀಲ್ ನೇತೃತ್ವದಲ್ಲಿ ಇಂದು ಬೆಳಗ್ಗೆ ದಾಳಿ ನಡೆಸಲಾಗಿದೆ.
ಇದನ್ನೂ ಓದಿ:-Mundgod|ಲಂಚ ಪಡೆಯುವಾಗ ಇಬ್ಬರು ಅಧಿಕಾರಿಗಳು ಲೋಕಾಯುಕ್ತ ಬಲೆಗೆ
ರೌಡಿ ಶೀಟರ್ ಗಳಾದ ಕಿರಣ್ ಸೋಳಂಕಿ , ಸಂಜು ನಾವಳೆ ,ಮಲ್ಲಿಕ್ ಜಾನ್ ಮನೆ ಮೇಲೆ ದಾಳಿ ನಡೆಸುವ ಜೊತೆಗೆ ಒಟ್ಟು 14 ಮನೆಗಳ ಮೇಲೆ ಏಕಕಾಲದಲ್ಲಿ ದಾಳಿ ಮಾಡಲಾಗಿದೆ.
ರೌಡಿ ಶೀಟರ್ ಗಳ ಮನೆಯಲ್ಲಿ ಕೆಲವು ಚಕ್ ಹಾಗೂ ದಾಖಲೆಗಳ ವಶ ಪಡಿಸಿಕೊಳ್ಳಲಾಗಿದ್ದು ತನಿಖೆ ಕೈಗೊಳ್ಳಲಾಗಿದೆ.
ಇದನ್ನೂ ಓದಿ:-Mundgod| ಮೀಟರ್ ಬಡ್ಡಿದಂಧೆ ಕಿಂಗ್ ಪಿನ್ ಜಮೀರ್ ಹತ್ಯೆ ಪ್ರಕರಣ – ಮೂರು ಪಿಸ್ತೊಲ್ ವಶಕ್ಕೆ!
ಮೀಟರ್ ಬಡ್ಡಿ ದಂಧೆ ಕಿಂಗ್ ಪಿನ್ ಜಮೀರ್ ಅಹ್ಮದ್ ಕೊಲೆ ಬೆನ್ನಲ್ಲೆ ಮುಂಡಗೋಡ ಮೀಟರ್ ಬಡ್ಡಿ ದಂಧೆಯನ್ನ ಗಂಭೀರವಾಗಿ ಪರಿಗಣಿಸಿರುವ SP ದೀಪನ್ ರವರು
ಮೀಟರ್ ಬಡ್ಡಿ ದಂಧೆ ಕಿಂಗ್ ಪಿನ್ ಜಮೀರ್ ಕೊಲೆ ಬಳಿಕ ಎರಡನೇ ಬಾರಿಗೆ ರೌಡಿ ಶೀಟರ್ ಮನೆ ಮೇಲೆ ದಾಳಿ ನಡೆಸಿದ್ದಾರೆ. ಕೆಲವು ದಿನದ ಹಿಂದೆಯಷ್ಟೇ ಮೀಟರ್ ಬಡ್ಡಿ ದಂಧೆ ನಡೆಸುತಿದ್ಧ ರೌಡಿ ಶೀಟರ್ ಗಳನ್ನ ಗಡಿಪಾರು ಸಹ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.
