Siddapur| ಅಸಲಿ ಬಂಗಾರ ತೋರಿಸಿ 10 ಲಕ್ಷ ದೋಚಿದ ಕಳ್ಳರು

Siddapur: Fake gold scam reported in Kavachur village of Uttara Kannada district. Belagavi man cheated of Rs 10 lakh after fraudsters showed real gold sample and later handed over fake coins. Case registered at Siddapur police station.
Fake gold coins seized in Siddapur scam case Fake gold coins seized in Siddapur scam case
Fake gold coins seized in Siddapur scam case

Siddapur| ಅಸಲಿ ಬಂಗಾರ ತೋರಿಸಿ 10 ಲಕ್ಷ ದೋಚಿದ ಕಳ್ಳರು.

Siddapur:- ನಕಲಿ ಬಂಗಾರ ನೀಡಿ ಬೆಳಗಾವಿ ಮೂಲದ ವ್ಯಕ್ತಿಯೋರ್ವನಿಗೆ 10 ಲಕ್ಷ  ವಂಚಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಕವಚೂರಿನಲ್ಲಿ ಬೆಳಕಿಗೆ ಬಂದಿದ್ದು ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನೆ ಏನು?

ಅನಾಮಿಕನೋರ್ವ ಬೆಳಗಾವಿ ಮೂಲದ ವ್ಯಕ್ತಿಯೋರ್ವನಿಗೆ ಕರೆ ಮಾಡಿ ತನಗೆ ಬಂಗಾರ ಸಿಕ್ಕಿವೆ ನೀವು ತೆಗೆದುಕೊಳ್ಳುತ್ತೀರಾ ಎಂದು ಕರೆ ಮಾಡಿದ್ದಾನೆ.

Siddapur|ವಸಂತ್ ನಾಯ್ಕ ಹತ್ಯೆ ಪ್ರಕರಣ-ಮತ್ತೋರ್ವ ಆರೋಪಿ ಪೊಲೀಸರಿಗೆ ಸೆರೆಂಡರ್

Advertisement

ಬಂಗಾರದ ಆಸೆಗೆ ಬಿದ್ದ ಬೆಳಗಾವಿಯ ವ್ಯಕ್ತಿ ಪರೀಕ್ಷೆಗಾಗಿ ಶಿವಮೊಗ್ಗದ ಹಾರೋಹಳ್ಳಿ ಗೆ ಹೋಗಿದ್ದಾರೆ. ಅಲ್ಲಿ ರವಿ ಎನ್ನುವ ವ್ಯಕ್ತಿ ಬಂಗಾರದ ನಮೂನೆಯ ಒಂದು ಸಣ್ಣ ನಾಣ್ಯ ಕೊಟ್ಟು ಅದನ್ನು ನೀನು ಟೆಸ್ಟ್ ಮಾಡು ಎಂದು ಹೇಳಿದಾಗ ಬೆಳಗಾವಿ ವ್ಯಕ್ತಿ ಊರಿಗೆ ಹೋಗಿ ಅದನ್ನು ಟೆಸ್ಟ್  ಮಾಡಿದಾಗ ಅದು ಬಂಗಾರದ ಎಂದು ಗೊತ್ತಾಗುತ್ತದೆ. ತದನಂತರ ರವಿ ಎಂಬಾತ ಬೆಳಗಾವಿ ಮೂಲದ ವ್ಯಕ್ತಿಗೆ ಕಾಲ್ ಮಾಡಿ 10 ಲಕ್ಷ ಹಣವನ್ನು ತೆಗೆದುಕೊಂಡು ದಿನಾಂಕ: 22-2-2026 ರಂದು ರಾತ್ರಿ ಹೊರಟು ಸೋಮವಾರ ಬೆಳಗ್ಗೆ ಸಿದ್ದಾಪುರಕ್ಕೆ (siddapur)ಬರುವಂತೆ ಹೇಳಿದ್ದಾನೆ.

ಬೆಳಗಾವಿಯ ಆ ವ್ಯಕ್ತಿ ತನ್ನ ಮಾವ ಮತ್ತು ತಮ್ಮನಾದ ಅರುಣ ಮೂವರು ಕೂಡಿಕೊಂಡು ಬಾಡಿಗೆ ಕಾರನ್ನ ಮಾಡಿಕೊಂಡು ಸೋಮವಾರ ಬೆಳಗಿನ ಜಾವ ಸಿದ್ದಾಪುರಕ್ಕೆ ಬರಲು 10 ಲಕ್ಷ ರೂಪಾಯಿ ಹಣವನ್ನು ಕಪ್ಪು ಬ್ಯಾಗ್‌ನಲ್ಲಿ ಇಟ್ಟುಕೊಂಡು ಹೊರಟು ಬೆಳಿಗ್ಗೆ ಸುಮಾರು 8-00 ಗಂಟೆಗೆ ಸಿದ್ದಾಪುರದ ಬಸ್ ನಿಲ್ದಾಣಕ್ಕೆ ಬಂದು ರವಿಗೆ ಪೋನ್ ಮಾಡಿದಾಗ ರವಿ ಈತನು ನಾನು ಸಾಗರದಿಂದ ಬಸ್ಸ್  ಹತ್ತಿದ್ದೇನೆ ಕವಂಚೂರು ಊರಿಗೆ ಬನ್ನಿ ಎಂದು ಹೇಳಿದ್ದು, ಅದರಂತೆ ಬರಳಗಾವಿಯ ವ್ಯಕ್ತಿ ಕವಂಚೂರು ಸರ್ಕಲ್‌ಗೆ ಬಂದು ರವಿ ಎಂಬಾತನಿಗೆ ಕಾಲ್ ಮಾಡಿದಾಗ ರವಿ ಈತನು ಕವಂಚೂರು ಸರ್ಕಲ್‌ನಲ್ಲಿ ಬಹಳ ಜನರು ಇರುತ್ತಾರೆ ಅಲ್ಲಿ ಬೇಡ ಸ್ವಲ್ಪ ಹಿಂದೆ ಸಿದ್ದಾಪುರ ಕಡೆಗೆ ಬರುವಂತೆ ಹೇಳುತ್ತಾನೆ.

ಅದರಂತೆ ಕವಂಚೂರು ಊರನಲ್ಲಿರುವ ಹಿತ್ತಲಕೊಪ್ಪ ಊರಿಗೆ ಹೋಗುವ ಕ್ರಾಸ್‌ಗೆ ಹೋದಾಗ ರವಿ ಈತನೊಂದಿಗೆ ಇನ್ನೂ 5 ಜನರು

ಅವರೆಲ್ಲರೂ ರವಿಯೊಂದಿಗೆ  ಬಂದ ಒಬ್ಬನ ಬಳಿ ಬಿಳಿ ಬಟ್ಟೆಯಲ್ಲಿ ಸುತ್ತಿಕೊಂಡ ಎರಡು ಗಂಟು ಇತ್ತು. ರವಿ ಈತನು ಆ ಎರಡು ಗಂಟನ್ನು ಬೆಳಗಾವಿ ವ್ಯಕ್ತಿಗೆ ಕೊಟ್ಟು ಇದರಲ್ಲಿ ಬಂಗಾರದ ನಾಣ್ಯ ಇರುತ್ತದೆ ಎಂದು ಹೇಳಿ ಕೊಟ್ಟಿದ್ದು ಬೆಳಗಾವಿ ವ್ಯಕ್ತಿ ಬಂಗಾರದ ನಾಣ್ಯ ತೆಗೆದುಕೊಂಡು ತಾನು ತಂದಿದ್ದ 10 ಲಕ್ಷ ರೂಪಾಯಿ ಹಣವನ್ನು ರವಿ ಎಂಬಾತನಿಗೆ ಕೊಟ್ಟ ನಂತರ ಆ ಗಂಟುಗಳನ್ನು ಬಿಚ್ಚಿ ನಾಣ್ಯವನ್ನು ಕಚ್ಚಿ ನೋಡಿದಾಗ ಅವರು ಕೊಟ್ಟ ಬಂಗಾರದ ನಾಣ್ಯವು ನಕಲಿ ಆಗಿತ್ತು.

ಮೊದಲು ಅಸಲಿ ಬಂಗಾರ ನೀಡಿ ಕೊನೆಗೆ ನಕಲಿ ಬಂಗಾರ ಪಡೆದು ಹತ್ತು ಲಕ್ಷ ವಂಚನೆಗೊಳಗಾಗಿದ್ದು ತಿಳಿಯುತಿದ್ದಂತೆ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಬಂಗಾರದ ಆಸೆಗೆ ಬಿದ್ದು ಹತ್ತು ಲಕ್ಷ ಕಳೆದುಕೊಂಡ ಬೆಳಗಾವಿ ವ್ಯಕ್ತಿ ಇದೋಗ ಹಣವೂ ಇಲ್ಲ ಬಂಗಾರವೂ ಇಲ್ಲ ಎನ್ನುವಂತಾಗಿದೆ.

 

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement