Sirsi| ಬಂಗಾರದ ಆಸೆಗೆ ಮದುವೆಗೆ ಸಿದ್ಧವಾಗಿದ್ದ ವೈದ್ಯನ ಕೊಂದ ಗೆಳೆಯ ಕೊನೆಗೂ ಲಾಕ್ !
ಕಾರವಾರ :- ಉತ್ತರ ಕನ್ನಡ ಜಿಲ್ಲೆಯ ಶಿರಸಿಯ(sirsi) ಕೆ.ಹೆಚ್.ಬಿ ಕಾಲೋನಿಯಲ್ಲಿ ಮದುವೆಗೆ ಸಿದ್ದವಾಗಿದ್ದ ವೈದ್ಯನನ್ನು ಹತ್ಯೆ ಮಾಡಿದ ಆರೋಪಿಯನ್ನು ಶಿರಸಿ ಮಾರುಕಟ್ಟೆ ಠಾಣೆ ಪೊಲೀಸರು ಬಂಗಾರದ ಸಮೇತ ವಶಕ್ಕೆ ಪಡೆದಿದ್ದಾರೆ.
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಮೂಲದ ಮಂಜುನಾಥ್ ಪಾಂಡುರಂಗ ನಾಯ್ಕ (70)ಹತ್ಯೆ ಮಾಡಿದ ಆರೋಪಿತಾಗಿದ್ದು , ಡಾ|ರಮೇಶ್ ಕಲಗುಟಕರ (51) ಹತ್ಯೆಯಾದ ವೈದ್ಯನಾಗಿದ್ದಾನೆ.
Sirsi |ಮದುವೆಗೆ ಸಿದ್ದನಾದ 51 ವರ್ಷದ ವೈದ್ಯನ ಹ**ತ್ಯೆ
ಆರೋಪಿಯಿಂದ 15 ಲಕ್ಷ ಮೌಲ್ಯದ ಬಂಗಾರದ ಆಭರಣ ಹಾಗೂ ₹50 ಸಾವಿರ ನಗದು ಹಣವನ್ನು ವಶಕ್ಕೆ ಪಡೆಯಲಾಗಿದೆ.
ಸೋಮವಾರ ಮದುವೆಗೆ ಸಿದ್ದವಾಗಿದ್ದ ವೈದ್ಯ ತನ್ನ ಸ್ನೇಹಿತನಿಂದಲೇ ಬಂಗಾರದ ಆಸೆಗೆ ಹತ್ಯೆಯಾಗಿರುವುದು ಪ್ರಾಥಮಿಕ ತನಿಖೆಯಿಂದ ಬೆಳಕಿಗೆ ಬಂದಿದೆ.
ಶಿವಮೊಗ್ಗ ಮೂಲದ ಮಂಜುನಾಥ್ ಡಾ| ರಮೇಶ್ ರವರ ಕ್ಲೈಂಟ್ ಆಗಿದ್ದು ಹಲವು ಬಾರಿ ಚಿಕಿತ್ಸೆಗಾಗಿ ಮೈದ್ಯರ ಬಳಿ ಬರುತಿದ್ದನು. ಇಬ್ಬರ ನಡುವೆ ಸ್ನೇಹ ಬೆಳೆದಿದ್ದು ವೈದ್ಯ ರಮೇಶ್ ರವರು ಹಲವು ಬಾರಿ ಮನೆಗೆ ಕರೆದುಕೊಂಡು ಹೋಗುತಿದ್ದರು. ಇಂದು ವೈದ್ಯನ ವಿವಾಹ ಆದ್ದರಿಂದ ಶನಿವಾರ ಬ್ಯಾಂಕ್ ಗೆ ತೆರಳಿ ಬಂಗಾರ ಬಿಡಿಸಿಕೊಂಡು ಬಂದಿದ್ದು, ಆರೋಪಿಯನ್ನ ವಿಶ್ವಾಸದಲ್ಲಿ ಮನೆಯಲ್ಲಿ ಇರಿಸಿಕೊಂಡು ಬಂಗಾರದ ಒಡವೆಯನ್ನು ತೋರಿಸಿದ್ದರು.
ಆದರೇ ರಾತ್ರಿ ವೇಳೆ ವೈದ್ಯರು ಮಲಗಿದ್ದಾಗ ಆರೋಪಿಯು ತಲೆಗೆ ಆಯುಧದಿಂದ ಬಲವಾಗಿ ಹೊಡೆದು ಹತ್ಯೆ ಮಾಡಿ ಮನೆಗೆ ಬೀಗ ಹಾಕಿ ಪರಾರಿಯಾಗಿದ್ದನು.ಘಟನೆ ನಡೆದು 24 ಗಂಟೆಯೊಳಗೆ ಆರೋಪಿಯನ್ನ ಶಿರಸಿ ಮಾರುಕಟ್ಟೆ ಠಾಣೆ ಪೊಲೀಸರು ಮಾಲು ಸಮೇತ ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದು ಆರೋಪಿಯನ್ನು ನ್ಯಾಯಾಲಯದ ಸುಪರ್ಧಿಗೆ ವಹಿಸಿದ್ದಾರೆ.







