Sirsi| ಸಾಲ ಮರುಪಾವತಿ ಕೇಳಲು ಹೋದ ಮಹಿಳೆಯರಿಗೆ ಥಳಿಸಿದ ಅನ್ಯಕೋಮಿನ ಯುವಕರು -ದೂರು ದಾಕಲು.
Sirsi/ಕಾರವಾರ :-ಹಲವು ವರ್ಷದಿಂದ ವ್ಯಾಪಾರಕ್ಕೆ ನೀಡಿದ ಸಾಲವನ್ನು ಮರುಪಾವತಿಸುವಂತೆ ಕೇಳಿದಕ್ಕೆ ಮಹಿಳೆಗೆ ಥಳಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ (sirsi)ನೆಹರು ನಗರದಲ್ಲಿ ನಡೆದಿದೆ.
ಯಲ್ಲಾಪುರ ಅಯಿಷಾ ಮತ್ತು ಗೀತಾ ಎಂಬ ಮಹಿಳೆಯರಿಗೆ ಮೊಹ್ಮದ್ ಸಲ್ಮಾನ್ ಎಂಬ ಗ್ಯಾಂಗ್ ಥಳಿಸಿ ಅವಾಚ್ಯವಾಗಿ ನಿಂದಿಸಿ ಮಹಿಳೆಯರೆನ್ನದೆ ಎದೆ ಭಾಗಕ್ಕೆ ಒದ್ದು ಹಲ್ಲೆ ಮಾಡಿದ್ದಾರೆ.
ಇದನ್ನೂ ಓದಿ:-Sirsi |ಬಸ್ ಗಳ ನಡುವೆ ಮುಖಾಮುಖಿ ಡಿಕ್ಕಿ 40 ಪ್ರಯಾಣಿಕರಿಗೆ ಗಾಯ
ಅಂಗಡಿ ಹಾಕಲು ಸಲ್ಮಾನ್ ಎಂಬುವವನಿಗೆ 3,80,000 ರೂಪಾಯಿ ಅಯಿಷಾ ಎಂಬುವವರು ಸಾಲ ನೀಡಿದ್ದರು.
ಪತಿ ಮೃತರಾದ ನಂತರ ಕೆಲವು ದಿನ ಹುಬ್ಬಳ್ಳಿಯಲ್ಲಿ ವಾಸವಾಗಿದ್ದ ಅವರು ಎರಡು ತಿಂಗಳ ಬಳಿಕ ಯಲ್ಲಾಪುರಕ್ಕೆ ಬಂದಾಗ ಸಾಲ ಪಡೆದ ಆಸಾಮಿ ಊರಲ್ಲಿ ಇರಲಿಲ್ಲ.ಈತ ಯಲ್ಲಾಪುರ ಬಿಟ್ಟು ಶಿರಸಿಯಲ್ಲಿ ವ್ಯಾಪಾರ ಮಾಡುತ್ತಿದ್ದ ಬಗ್ಗೆ ಮಾಹಿತಿ ಪಡೆದ ಆಯಿಷಾ ಶಿರಸಿ ಗೆ ತೆರಳಿ ಹಣ ಹಿಂತಿರುಗಿಸುವಂತೆ ಕೇಳಿದ್ದಾರೆ.
ಇದನ್ನೂ ಓದಿ:-Sirsi| ಆಕಸ್ಮಿಕವಾಗಿ ಬಾವಿಗೆ ಬಿದ್ದ ಮಗು ರಕ್ಷಣೆ |ವಿಡಿಯೋ ನೋಡಿ
ಹಣ ಹಿಂತಿರುಗಿಸವ ಬಗ್ಗೆ ಮಾತುಕತೆ ನಡೆಯುವ ಸಂದರ್ಭದಲ್ಲಿ ಒಮ್ಮೆಲೆ ಬಂದ ನಾಲ್ಕೈದು ಜನ ಮುಸ್ಲಿಂ ಯುವಕರು
ಅವಾಚ್ಯ ಶಬ್ದಗಳಿಂದ ನಿಂದಿಸಿ ಹಿಗ್ಗಾ ಮುಗ್ಗಾ ಥಳಿಸಿದ್ದಾರೆ.ಮಹಿಳೆ ಎನ್ನುವುದನ್ನು ಸಹ ನೋಡದೇ ಎದೆಗೆ ಒದ್ದು ಬಟ್ಟೆ ಹರಿದಿದ್ದಾರೆ. ಈ ಘಟನೆ ಸಂಬಂಧ ಶಿರಸಿ ಹೊಸ ಮಾರುಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .







