Sirsi news

Sirsi|ಮಹಿಳೆಯರ ಆರೋಗ್ಯ ತಪಾಸಣೆ ಹೆಸರಿನಲ್ಲಿ ಸೆಕ್ಸ್ ವರ್ಕರ್ ಎಂದು ನೊಂದಣಿ ಮಾಡಿ ವಂಚನೆ!

107

ಕಾರವಾರ: ಸಂಸ್ಥೆಯ ಲಾಭಕ್ಕಾಗಿ ಮಹಿಳಾ ಸಂಘ ಸಂಸ್ಥೆಯೊಂದು ಮಹಿಳೆಯರ ಆರೋಗ್ಯ ತಪಾಸಣೆ (health checkup )ಹೆಸರಿನಲ್ಲಿ ಸೆಕ್ಸ್ ವರ್ಕರ್ ಎಂದು ನೊಂದಣಿ ಮಾಡಿಸಿಕೊಳ್ಳುವ ಮೂಲಕ ತಮ್ಮ ಸಂಸ್ಥೆಗೆ ಲಾಭ ಮಾಡಿಕೊಳ್ಳುತ್ತಿದೆ ಎಂದು ಡಬ್ಲೂಎಚ್‌ಆರ್, ಆರ್‌ಕೆ ಫೌಂಡೆಷನ್ ವಿಶ್ವ ಮಾನವ ಹಕ್ಕು ಸಂಸ್ಥೆಯ ಕಾನೂನು ಸಲಹೆಗಾರ್ತಿ ಅರ್ಚನಾ ಜೆ. ನಾಯಕ ಆರೋಪಿಸಿದ್ದಾರೆ.

ಈ ಕುರಿತು ಕಾರವಾರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಶಿರಸಿಯ ಮಹಿಳಾ ಕ್ರಾಂತಿ ಸಂಸ್ಥೆಯು ಆರೋಗ್ಯ ತಪಾಸಣೆಯ ಹೆಸರಿನಲ್ಲಿ ಮಹಿಳೆಯರನ್ನು ಸೆಕ್ಸ ವರ್ಕರ್‌ಗಳಾಗಿ ನೊಂದಣಿ ಮಾಡಿಕೊಳ್ಳುತ್ತಿದೆ.

ಮಹಿಳಾ ಕ್ರಾಂತಿ ಸಂಸ್ಥೆಯು ಕಳೆದ 2008 ರಿಂದ ವಿವಿಧ ಕಾರ್ಯಕ್ರಮದಡಿ ಮಹಿಳೆಯರನ್ನು ಒಂದೆಡೆ ಸೇರಿಸಿ ಮಾಹಿತಿ ಕಲೆಹಾಕುತ್ತಿದೆ. ಸ್ವಸಹಾಯ ಸಂಘದ ಮುಖ್ಯಸ್ಥರನ್ನು ಗುರುತಿಸಿ ಮಹಿಳೆಯರಿಗೆ ಅರಿಶಿಣ ಕುಂಕುಮ, ಆರೋಗ್ಯ ತಪಾಸಣೆ ಹಾಗೂ ಉಚಿತ ಆಧಾರ್ ಕಾರ್ಡ್ ತಿದ್ದುಪಡಿಎಂದು ಕಾರ್ಯಕ್ರಮಗಳನ್ನು ಹಾಕಿಕೊಳ್ಳುತ್ತಾರೆ.

ಕಾರ್ಯಕ್ರಮಕ್ಕೆ ಬಂದ ಮಹಿಳೆಯರಿಂದ ಸಹಿ ಹಾಗೂ ವಿಳಾಸ ಪಡೆದು ಅವರಿಗೆ ತಿಳಿಯದಂತೆ ಸೆಕ್ಸ್ ವರ್ಕರ್ ಎಂದು ನೊಂದಣಿಮಾಡಿ ಸಂಸ್ಥೆಗೆ ಹೆಚ್ಚಿನ ಸಂಖ್ಯೆಯನ್ನು ತೋರಿಸುತ್ತಿದ್ದಾರೆ. ಈ ವರೆಗೆ ಸುಮಾರು ಮೂರು ಸಾವಿರಕ್ಕೂ ಮಹಿಳೆಯರನ್ನು ಸೆಕ್ಸ್ವರ್ಕರ್ ಎಂದು ನೊಂದಣಿಮಾಡಿಸಿರುವ ಬಗ್ಗೆ ಅಲ್ಲಿನ ಸಿಬ್ಬಂದಿ ತಿಳಿಸಿದ್ದಾರೆ ಇವರಿಗೆ ಸಾಮಾಜಿಕ ತೊಂದರೆಗಳು ಉಂಟಾಗುತ್ತಿದ್ದು ಅಧಿಕಾರಿಗಳು ತಪ್ಪಿತಸ್ಥರ ಮೇಲೆಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.

ಇನ್ನು ಮಹಿಳಾ ಕ್ರಾಂತಿ ಸಂಸ್ಥೆಯ ಸಿಬ್ಬಂದಿ ಸೌಮ್ಯ ರಾವ್ ರವರು ಹೇಳುವಂತೆ ಸಂಸ್ಥೆಯಲ್ಲಿ 30 ಕ್ಕೂ ಹೆಚ್ಚು ಸಿಬ್ಬಂದಿಯಿದ್ದಾರೆ. ಕಳೆದ ಕೆಲವು ತಿಂಗಳ ಹಿಂದೆ ಸಂಸ್ಥೆಯ ಕಾರ್ಯ ವೈಖರಿಯ ಬಗ್ಗೆ ಅನುಮಾನ ಬಂದಿದ್ದು, ಈ ಬಗ್ಗೆ ಪ್ರೆಶ್ನೆ ಮಾಡಿದ್ದಕ್ಕೆ ಕೆಲವು ಸಿಬ್ಬಂದಿಯ ವೇತನವನ್ನು ತಡೆ ಹಿಡಿದಿದ್ದಾರೆ. ಜೊತೆಗೆ ಬೆದರಿಕೆ ಹಾಕುತ್ತಿದ್ದು, ನಿಮ್ಮನ್ನು ಕೂಡ ಸೆಕ್ಸ್ ವರ್ಕರ್ ಎಂದು ಪ್ರಚಾರ ಮಾಡುತ್ತೇವೆ ಎನ್ನುತ್ತಾರೆ.

ಈ ಬಗ್ಗೆ ಹಿರಿಯ ಅಧಿಕಾರಿಗಳ ನಮನಕ್ಕೆ ತಂದರೂ ಹಾರಿಕೆಯ ಉತ್ತರ ನೀಡುತ್ತಾರೆ. ಈಗಾಗಲೇ ಜಿಲ್ಲಾಧಿಕಾರಿಗೆ ಮನವಿ ನೀಡಿದ್ದೇವೆ ಆದರೆ ಈವರೆಗೂ ಯಾವುದೇ ಕ್ರಮ ಜರುಗಿಲ್ಲ ಎಂದು ಅವರು ಆರೋಪಿಸಿದ್ದಾರೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!