ಹಲವು ಪ್ರಕರಣದ ಆರೋಪಿ ರೌಡಿ ಶೀಟರ್ ಫಯಾಜ್ ಚೌಟಿ ಕಾಗೇರಿ ಕಚೇರಿಯಲ್ಲಿ! ನಂತರ ಬಂಧನ? ಏನಿದು ಕಥೆ.

TextMaster 04 06 09.53.38 TextMaster 04 06 09.53.38

ಶಿರಸಿ :- ಶಿರಸಿಯ ರೌಡಿ ಶೀಟರ್ ಪಯ್ಯು ಅಲಿಯಾಸ್ ಫಯಾಜ್ ಚೌಟಿ ಭೂಗತ ಲೋಕದಲ್ಲಿ ಹೆಸರುಮಾಡಿದವರೊಂದಿಗೆ ಸಂಪರ್ಕ ಇರುವ ವ್ಯಕ್ತಿ ಎಂಬುದು ಬಹುತೇಕ ಶಿರಸಿ ಜನರಿಗೆ ತಿಳಿದಿರುವ ವಿಚಾರ,ಹಿಂದೆ ರೌಡಿಸಂ ,ಬ್ಲಾಕ್ ಮೇಲ್ ,ಹಣ ವಂಚನೆ ,ಹತ್ಯೆಗೆ ಯತ್ನ ಹೀಗೆ ಅನೇಕ ಪ್ರಕರಣಗಳು ಈತನ ಮೇಲೆ 17 ಕ್ಕೂ ಹೆಚ್ಚು ಪ್ರಕರಣಗಳಿವೆ. ಆದ್ರೆ ಇದೀಗ ಒಬ್ಬ ರೌಡಿ ಶೀಟರ್ ಸ್ವಚ್ಛ ಚಾರಿತ್ರ್ಯ ಹೊಂದಿದ ಸ್ಪೀಕರ್ ಕಾಗೇರಿ ಕಚೇರಿಗೆ ತನ್ನ ಬೆಂಬಲಿಗರೊಂದಿಗೆ 5ದಿನದ ಹಿಂದೆ ತೆರಳಿ ಕಾಗೇರಿ ಪಕ್ಕದಲ್ಲೇ ಕುಳಿತು ಚುನಾವಣೆ ಸಂದರ್ಭದಲ್ಲಿ ಸಭೆ ನಡೆಸಿರುವುದು ಶಿರಸಿ ಕ್ಷೇತ್ರದ ಜನರಲ್ಲಿ ಆಶ್ಚರ್ಯ ಮೂಡಿಸಿದೆ.

ಕಾಗೇರಿ ಕಚೇರಿ ಮೂಲಗಳ ಪ್ರಕಾರ ಈತ ಕ್ಷೇತ್ರದ ಯಾವುದೋ ಸಮಸ್ಯೆ ಇಟ್ಟುಕೊಂಡು ಕಾಗೇರಿ ಬಳಿ ಚರ್ಚೆಗೆ ಬಂದಿದ್ದರು ಎಂದು ಹೇಳಲಾಗಿದೆ. ಆದರೇ ಕಾಗೇರಿ ಕಚೇರಿಯಲ್ಲಿ ಆಪ್ತನಂತೆ ಪಕ್ಕದಲ್ಲಿ ಕುಳಿತು ರಾತ್ರಿ ವೇಳೆ ಅಂತದ್ದೇನು ಚರ್ಚೆ ನಡೆಯಿತು ಎಂಬುದು ಕುದ್ದು ಅಲ್ಲಿದ್ದವರೇ ಹೇಳಬೇಕು. ಕಾಗೇರಿಯವರು ಪಕ್ಕದಲ್ಲಿ ಕುಳ್ಳಿರಿಸಿಕೊಂಡು ಮಾತನಾಡುವಷ್ಟು ಆಪ್ತರೇ ಎಂಬ ಪ್ರಶ್ನೆ ಕ್ಷೇತ್ರದ ಜನರಲ್ಲಿ ಮೂಡುವಂತಾಗಿದೆ. ಆದರೇ ಕಾಗೇರಿಯವರು ರೌಡಿ ಶೀಟರ್ ಮುಂತಾದ ಸಮಾಜ ಘಾತುಕ ವ್ಯಕ್ತಿಗಳಿಂದ ಸಾಕಷ್ಟು ಅಂತರ ಕಾಯ್ದುಕೊಳ್ಳುವವರು. ಹೀಗಿರುವಾಗ ಇದೀಗ ಚುನಾವಣೆ ಸಂದರ್ಭದಲ್ಲಿ ಹೀಗೆ ಪಕ್ಕದಲ್ಲಿ ಕೂರಿಸಿಕೊಂಡು ಚರ್ಚೆ ಮಾಡಿರುವುದು ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

Advertisement

IMG 20230406 WA0039

(ಹಿಂದೆ ಕಾರ್ಯಕ್ರಮವೊಂದರಲ್ಲಿ ಕಾಗೇರಿ ಜೊತೆ ಫಯಾಜ್)

ಇನ್ನು ಈತ ಕಾಗೇರಿ ಜೊತೆ ಸಭೆ ನಡೆಸಿ ಎರಡು ದಿನದ ನಂತರ ದಾವಣಗೆರೆ ಪೊಲೀಸರು ರೌಡಿ ಹಂದಿ ಅಣ್ಣಿ ಕೊಲೆ ಆರೋಪಿಗಳನ್ನು ಹತ್ಯೆ ಮಾಡಿದ ಆರೋಪಿಗಳನ್ನು ತನ್ನ ಅಂಬುಲೆನ್ಸ್ ಮೂಲಕ ಎಸ್ಕೇಪ್ ಮಾಡಿಸಿದ ಆರೋಪದಡಿ ಬಂಧನ ಮಾಡಿದ್ದು ,ಈ ಕುರಿತು ದಾವಣಗೆರೆ ಎಸ್.ಪಿ ಬಂಧಿಸಿರುವ ಕುರಿತು ಮಾಹಿತಿ ದೃಡೀಕರಿಸಿದ್ದಾರೆ‌

ಇನ್ನು ಫಯಾಜ್ ರೌಡಿಸಂ ಬಿಟ್ಟು ಸಮಾಜಸೇವೆ ಮೂಲಕ ಶಿರಸಿಯಲ್ಲಿ ಪರಿಚಿತನಾದವನು.ಆದರೇ ರೌಡಿಸಂ ಬಿಟ್ಟಿರುವುದಾಗಿ ಹೇಳಿಕೊಂಡಿದ್ದರೂ ಈತನ ವಿರುದ್ಧ ಹಲವು ವಂಚನೆ,ಬ್ಲಾಕ್ ಮೇಲ್ ಪ್ರಕರಣಗಳು ದಾಖಲಾಗಿವೆ. ಈತನ ಮೇಲೆ ರೌಡಿಶೀಟರ್ ಪಟ್ಟ ಸಹ ಇದೆ. ಶಿರಸಿ ಪೊಲೀಸರು ಈತನನ್ನು ನೋಡುವ ರೀತಿ ಸಹ ಬೇರೆ. ಇನ್ನು ಹಿಂದೆ ವಿಧಾನಸಭಾ ಚುನಾವಣೆ ಕಣಕ್ಕೂ ಸಹ ದುಮಿಕಿದ್ದ‌.ಆದರೇ ಪೊಲೀಸ್ ಮೂಲಗಳ ಪ್ರಕಾರ ಈತ ತನ್ನ ಹಳೆಯ ಚಾಳಿಯನ್ನು ಮುಂದುವರೆಸಿದ್ದಾನೆ. ಜೊತೆಗೆ ಭೂಗತ ಪಾತಕಿಗಳ ನಿರಂತರ ನಂಟು ಸಹ ಇರುವುದು ತಿಳಿದುಬಂದಿದೆ. ಹೀಗಿರುವಾಗ ಕಾಗೇರಿ ಕಚೇರಿಯಲ್ಲಿ ಚರ್ಚೆ ನಡೆಸಿದ ಫೋಟೋಗಳು ಹೊರಬಂದಿದೆ. ಇನ್ನು ಈ ಹಿಂದೆ ಸಂಸದ ಅನಂತಕುಮಾರ್ ಹೆಗಡೆ ಜೊತೆ ಕಾಣಿಸಿಕೊಂಡು ಅವರಿಗೆ ಬೆಂಬಲ ನೀಡುವ ಕುರಿತು ಭಹಿರಂಗ ಹೇಳಿಕೆ ಸಹ ನೀಡಿದ್ದ.ಇದೀಗ ಕಾಗೇರಿ ಸರದಿ ಆಗಿರುವುದು ಪ್ರಜ್ಞಾವಂತ ಶಿರಸಿ ಜನರಲ್ಲಿ ಚರ್ಚೆಗೆ ಗ್ರಾಸವಾಗಿದೆ.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement