Train| ರೈಲಿನಲ್ಲಿ ಹೆರಿಗೆ ನೋವು -ರೈಲಿನಲ್ಲೇ ಹೆರಿಗೆ ಮಾಡಿಸಿದ ಸಹ ಪ್ರಯಾಣಿಕರು.
Train news:-ಕಾರವಾರ – ಮಂಗಳೂರು – ಬೆಂಗಳೂರು ಮಧ್ಯೆ ಚಲಿಸುತ್ತಿದ್ದ ರೈಲಿನಲ್ಲಿ ಮಹಿಳೆಯೊಬ್ಬರಿಗೆ ಹೆರಿಗೆ ನೋವು ಕಾಣಿಸಿದ್ದು, ತಕ್ಷಣ ಕಾರ್ಯಪ್ರವೃತ್ತರಾದ ಅದೇ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯರೇ ಸುರಕ್ಷಿತವಾಗಿ ಹೆರಿಗೆ ಮಾಡಿಸಿ ಮಾನವೀಯತೆ ಮೆರೆದಿದ್ದಾರೆ.
ಘಟನೆ ಏನು?

ಮಂಗಳೂರಿನಿಂದ ಮೈಸೂರಿಗೆ ಹೊರಟ ತುಂಬು ಗರ್ಭಿಣಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ.ತಕ್ಷಣ ರೈಲನ್ನು ಮಂಗಳೂರಿನ ಬಂಟ್ವಾಳ ತಾಲೂಕಿನ ಬಿ.ಸಿ ರೋಡ್ ನಲ್ಲಿ ನಿಲ್ಲಿಸಲಾಗಿದ್ದು ತುರ್ತು ಚಿಕಿತ್ಸೆಗಾಗಿ ವೈದ್ಯರಿಗೆ ಕರೆ ಮಾಡಲಾಗುತ್ತು.
Train news|ಕುಮಟಾಕ್ಕೆ ವಿಸ್ತರಣೆಯಾದ ಕಾಚೆಗುಡ-ಮುರುಡೇಶ್ವರ ಎಕ್ಸ್ಪ್ರೆಸ್ ರೈಲು.
ವೈದ್ಯರಿಲ್ಲದೆ ಹೆರಿಗೆಗಾಗಿ 30 ನಿಮಿಷದವರೆಗೆ ಕಾಯಲಾಯಿತು.ಆದರೇ ತುಂಬು ಗರ್ಭಿಣಿಯ ಸ್ಥಿತಿ ಚಿಂತಾಜನಕವಾಗಿದ್ದು ರಕ್ತಸ್ರಾವವಾಗುತ್ತಿತ್ತು.ಬಳಿಕ ಹೆರಿಗೆಗಾಗಿ ರೈಲಿನಲ್ಲಿ ಪರದೆ ಕಟ್ಟಿ ಬೋಗಿಯಲ್ಲಿದ್ದ ಮಹಿಳೆಯರ ಹರಸಾಹಸ ಪಟ್ಟು ಹೆರಿಗೆ ಮಾಡಿಸಿದ್ದಾರೆ.ತಾಯಿ ಮಗು ಸುರಕ್ಷಿತವಾಗಿದ್ದು ಬಳಿಕ ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಯಿತು.
ಈ ಮೂಲಕ ಒಬ್ಬ ಗರ್ಭಿಣಿಯ ಜೀವವನ್ನು ಸಹ ಪ್ರಯಾಣಿಕರು ಉಳಿಸಿದ್ದು ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ.







