ಒತ್ತಡ ,ಖಿನ್ನತೆ ನಿವಾರಣೆಗೆ ಈ ಯೋಗಾಸನ ಮಾಡಿನೋಡಿ|ಮಾನಸಿಕ ಆರೋಗ್ಯಕ್ಕೆ ಇಲ್ಲಿದೆ ಸರಳ ಆಸನ.

TextMaster 06 20 08.57.56 TextMaster 06 20 08.57.56

ಯಾಂತ್ರಿಕ ಜೀವನದಲ್ಲಿ ಎಲ್ಲದಕ್ಕೂ ಸಮಯ ಸಿಗುವುದೇ ಅಪರೂಪ. ದುಡ್ಡಿನ ಹಿಂದೆ ಬಿದ್ದವರಿಗೆ ಆರೋಗ್ಯದ ಮಹತ್ವ ಅರಿವಾಗುವುದು ಆರೋಗ್ಯ ಕೆಟ್ಟಾಗಲೇ. ಹೀಗಾಗಿ ನಿಮ್ಮ ಆರೋಗ್ಯ ಹದಗೆಡುವ ಮುಂಚೆ ಅವುಗಳಿಗೆ ಚೈತನ್ಯ ನೀಡಿ ಆರೋಗ್ಯ ವೃದ್ಧಿಸಿಕೊಳ್ಳಿ .ಹೀಗಾಗಿ ಒತ್ತಡದ ಕೆಲಸದಲ್ಲಿರುವ ಜನರಿಗೆ ಇಲ್ಲಿದೆ ಸರಳ ಯೋಗಾಸನ.

ಪದ್ಮಾಸನ

Advertisement

TextMaster 06 20 08.43.49


ಮೊದಲು ನೆಲದ ಮೇಲೆ ಕುಳಿತು ಎರಡು ಕಾಲುಗಳನ್ನು ಮುಂದಕ್ಕೆ ಚಾಚಬೇಕು. ನಂತರ ನಿಧಾನವಾಗಿ ಬಲಗಾಲನ್ನು ಮಂಡಿಯ ಬಳಿ ಬಗ್ಗಿಸಿ, ಬಲ ಪಾದವನ್ನು ಹಿಡಿದುಕೊಂಡು ಎಡತೊಡೆಯ ಮೇಲೆ ಇಡಬೇಕು. ಇದೇ ರೀತಿ ಎಡಗಾಲನ್ನೂ ನಿಧಾನವಾಗಿ ಮಂಡಿಯ ಬಳಿ ಬಗ್ಗಿಸಿ ಬಲತೊಡೆಯ ಮೇಲಿಡಬೇಕು.ಬಲಗಾಲು ಮತ್ತು ಎಡಗಾಲು ಒಂದು ಇನ್ನೊಂದನ್ನು ಛೇದಿಸಿರುತ್ತೇವೆ. ಎರಡೂ ಕಾಲುಗಳ ಅಂಗಾಲುಗಳು ಮೇಲ್ಮುಖವಾಗಿರಬೇಕು. ಎರಡೂ ಕಾಲುಗಳ ಮಂಡಿಗಳು ಭೂಮಿಯನ್ನು ಸ್ಪರ್ಶಿಸಿರಬೇಕು. ಕೈಗಳನ್ನು ಆಯಾ ಕಾಲಿನ ಮಂಡಿಗಳ ಮೇಲೆ ಇಟ್ಟು ನೀಳವಾಗಿ ಚಾಚಿರಬೇಕು. ಅಂಗೈಗಳೂ ಈ ಸ್ಥಿತಿಯಲ್ಲಿ ಮೇಲ್ಮುಖನಾಗಿದ್ದು ಆಕಾಶವನ್ನು ನೋಡುತ್ತಿರಬೇಕು. ಬೆರಳುಗಳು ಚಿನ್ಮುದ್ರೆಯ ಸ್ಥಿತಿಯಲ್ಲಿ ಇರಬೇಕು. ಈಗ ನಿಮ್ಮ ಕಣ್ಣುಗಳನ್ನು ಮುಚ್ಚಿ ಮತ್ತು ನಿಧಾನವಾಗಿ ಉಸಿರಾಡಿ. ನಿಮ್ಮ ಗಮನವನ್ನು ಉಸಿರಾಟದ ಮೇಲೆ ಇರಿಸಿ. 5 ರಿಂದ 10 ನಿಮಿಷಗಳ ಕಾಲ ಈ ಸ್ಥಿತಿಯಲ್ಲಿದ್ದ ನಂತರ, ನಿಮ್ಮ ಕಣ್ಣುಗಳನ್ನು ತೆರೆಯಿರಿ ಮತ್ತು ಸಾಮಾನ್ಯ ಸ್ಥಿತಿಗೆ ಹಿಂತಿರುಗಿ.

ಲಾಭಗಳು: ಬೆನ್ನುಮೂಳೆ ನೇರವಾಗುವುದರಿಂದ ಜ್ಞಾನತಂತುಗಳು ಸರಿಯಾಗಿ ಕಾರ್ಯ ನಿರ್ವಹಿಸಲಿವೆ. ಇದರಿಂದ ವಿಚಾರಶಕ್ತಿ ಮತ್ತು ಸ್ಮರಣ ಶಕ್ತಿ ವೃದ್ಧಿಯಾಗಲಿದೆ. ದೀರ್ಘ ಉಸಿರಾಟಕ್ಕೆ ಇದು ಬಹಳ ಪ್ರಯೋಜನಕಾರಿ. ಮನಸ್ಸನ್ನು ಕೇಂದ್ರಿಕರಿಸಲು ಪದ್ಮಾಸನ ಸೂಕ್ತ ಆಸನ. ಮಂಡಿ, ಕಾಲುಗಳ ಕೀಲುಗಳಲ್ಲಿನ ನೋವು ಮಾಯವಾಗುವುದರ ಜತೆಗೆ ಸೊಂಟ, ಬೆನ್ನುಗಳಲ್ಲಿ ರಕ್ತಸಂಚಾರ ಸುಗಮವಾಗಲಿದೆ. ಇಡೀ ಶರೀರದಲ್ಲೇ ಹೊಸ ಹುರುಪು ಬರಲಿದೆ.

ವಜ್ರಾಸನ

TextMaster 06 20 08.39.02

ಮೊದಲು ನೆಲದ ಮೇಲೆ ಎರಡೂ ಕಾಲುಗಳನ್ನು ಮುಂದಕ್ಕೆ ಚಾಚಿ ಕುಳಿತುಕೊಳ್ಳಬೇಕು. ಅನಂತರ ಎರಡೂ ಕಾಲುಗಳನ್ನು ಮಂಡಿಯ ಬಳ್ಳಿ ಮಡಚಿಕೊಂಡು, ಅಂದರೆ ಈ ಸ್ಥಿತಿಯಲ್ಲಿ ಮಂಡಿಗಳು ಪರಸ್ಪರ ತಗಲಿರಬೇಕು, ಎರಡೂ ಹಿಮ್ಮಡಿಗಳೂ ಪರಸ್ಪರ ತಗಲಿರುವುದರೊಂದಿಗೆ ಇಡೀ ಶರೀರದ ಭಾರವನ್ನು ಎರಡು ಹಿಮ್ಮಡಿಗಳ ಮೇಲೆ ಹೆಚ್ಚು ಹೊರಿಸಿರಬೇಕು. ಅನಂತರ ಎದೆ ಎತ್ತಿ, ನೇರವಾಗಿ ಕುಳಿತುಕೊಳ್ಳಬೇಕು. ನಿಮ್ಮ ಕುತ್ತಿಗೆ, ಸೊಂಟ, ಬೆನ್ನು ಮತ್ತು ಬೆನ್ನುಮೂಳೆಯು ಸರಳ ರೇಖೆಯಲ್ಲಿರಬೇಕು. ಈ ಸ್ಥಿತಿಯಲ್ಲಿ ಕುಳಿತುಕೊಳ‍್ಳುವುದು ಪ್ರಾರಂಭದಲ್ಲಿ ಕಷ್ಟವೆನಿಸಿದರೂ ಆರೋಗ್ಯಕ್ಕೆ ಹೆಚ್ಚು ಉಪಯೋಗ. ವಜ್ರಾಸನವನ್ನು ಹೆಚ್ಚು ಹೆಚ್ಚು ಸಮಯ ಅಭ್ಯಾಸ ಮಾಡುವುದರಿಂದ ದೇಹ ವಜ್ರದಷ್ಟು ಗಟ್ಟಿಯಾಗುತ್ತದೆ.

ಲಾಭಗಳು: ವಜ್ರಾಸನದ ಅಭ್ಯಾಸದಿಂದ ಕೀಲುನೋವು ಮತ್ತು ಕಾಲು ನೋವು ಗುಣವಾಗುತ್ತದೆ. ಹೊಟ್ಟೆಯ ಬೊಜ್ಜು ಕರಗುತ್ತದೆ. ಆಹಾರ ಸುಲಭವಾಗಿ ಜೀರ್ಣವಾಗುತ್ತದೆ. ಹಿಮ್ಮಡಿ ನೋವು ಸಹ ದೂರವಾಗುತ್ತದೆ. ಹೆಚ್ಚು ಹೊತ್ತು ನಿಂತಿರಬೇಕಾದವರಿಗೆ ಮತ್ತು ಕ್ರೀಡಾಪಟುಗಳಿಗೆ ಈ ಆಸನ ಉಪಕಾರಿ. ಮಾನಸಿಕ ಆರೋಗ್ಯದ ಮೇಲೂ ಈ ಆಸನ ಹೆಚ್ಚು ಉಪಯುಕ್ತ.

ಶವಾಸನ – ರಕ್ತದೊತ್ತಡ ಮತ್ತು ಮಾನಸಿಕ ಒತ್ತಡ ನಿವಾರಣೆಗೆ ಮಾಡಿನೋಡಿ.

shavasana

ರಕ್ತದೊತ್ತಡ ಮತ್ತು ಮಾನಸಿಕ ಒತ್ತಡ ನಿವಾರಣೆಗೆ ಶವಾಸನ ಸಿದ್ದೌಷಧಿ. ಕೈಕಾಲುಗಳನ್ನು ಅಗಲಿಸಿ ಮಲಗಿ ದೇಹದ ಎಲ್ಲಾ ಅಂಗಾಗಳಿಗೆ ಮನಸಿನ ಮೂಲಕ ವಿಶ್ರಾಂತಿಯ ಸಂದೇಶವನ್ನು ನೀಡುವ ಆಸನ ಇದು. ಕೇವಲ ಉಸಿರಿನ ಮೇಲೆಯೇ ಗಮನ ಇಡುವುದರಿಂದ ರಕ್ತ ಪರಿಚಲನೆ ಸರಾಗವಾಗುತ್ತದೆ, ಮನಸು ನಿರಾಳವಾಗುತ್ತದೆ. ಇತರ ಪೂರಕ ಪ್ರಮುಖ ಆಸನಗಳು: ಪದ್ಮಾಸನ, ಹಲಾಸನ, ಪವನ ಮುಕ್ತಾಸನ, ಮಕರಾಸನ, ಪ್ರಾಣಾಯಾಮ, ಧ್ಯಾನ.

ಶಲಭಾಸನ – ಬೆನ್ನುಮೂಳೆ ಪುನಃಶ್ವೇತನಕ್ಕೆ ಮಾಡಿನೋಡಿ.

TextMaster 06 20 08.30.52

ದೇಹದ ಸಮಸ್ತ ಭಾರವನ್ನು ಹೊಟ್ಟೆಯ ಭಾಗದಲ್ಲಿ ಕೇಂದ್ರೀಕರಿಸಿ ಸೊಂಟ ಮತ್ತು ಬೆನ್ನನ್ನು ಸ್ಕೆಚ್ ಮಾಡುವ ವ್ಯಾಯಾಮ ಇದು. ಇದರಿಂದ ಬೆನ್ನು ಮೂಳೆ ಮತ್ತು ಆಸುಪಾಸಿನ ಹಾಗೂ ಸೊಂಟ ಭಾಗದ ಸ್ನಾಯುಗಳ ಒತ್ತಡ ನಿವಾರಣೆಯಾಗುತ್ತದೆ. ಬೆನ್ನುಮೂಳೆ ಪುನಃಶ್ವೇತನ, ಎಲ್ಲ ಕಡೆ ರಕ್ತ ಪರಿಚಲನೆ ಸರಾಗ. ಪೂರಕ ಇತರೆ ಪ್ರಮುಖ ಆಸನಗಳು: ಮಕರಾಸನ, ಸೇತುಬಂಧ ಸರ್ವಾಂಗಾಸನ, ಕಟಿ ಚಕ್ರಾಸನ, ಪೂರ್ವೋತ್ತಾಸನ.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement