Uttrakannada ಜಿಲ್ಲೆಯ BSNLಟವರ್ ಗೆ ಜಾಗ ನೀಡಿದ ಆದೇಶ ವಾಪಾಸ್ ಪಡೆದ ಜಿಲ್ಲಾಧಿಕಾರಿ!

173

ಕಾರವಾರ :- ಮೊಬೈಲ್‌ ನೆಟ್‌ವರ್ಕ್‌ ಸಮಸ್ಯೆ (mobile network problem ) ಹೆಚ್ಚಿರುವ ಉತ್ತರ ಕನ್ನಡ ಜಿಲ್ಲೆಗೆ ಕೇಂದ್ರ ಸರ್ಕಾರ ದೂರಸಂಪರ್ಕ ಇಲಾಖೆಯಿಂದ 232 ಹೊಸ ಮೊಬೈಲ್‌ ಟವರ್‌ಗಳನ್ನು ಮಂಜೂರು ಮಾಡಲಾಗಿತ್ತು.

232 ಟವರ್‌ಗಳ ಪೈಕಿ 18 ಟವರ್‌ಗಳನ್ನು 2G ಇಂದ 3G ಮೇಲ್ದರ್ಜೆಗೆ ಏರಿಸಲಾಗಿದ್ದು, ಇದುವರೆಗೂ ಮೊಬೈಲ್‌ ಸಿಗ್ನಲ್‌ ಸಿಗದ 196 ಹಳ್ಳಿಗಳನ್ನು ಗುರುತಿಸಿ ಟವರ್‌ ನಿರ್ಮಾಣಕ್ಕೆ ಅನುಮೋದನೆ ನೀಡಿತ್ತು. ಇವುಗಳಲ್ಲಿ

ಕಾರವಾರ-08,ಅಂಕೋಲಾ-12,ಜೋಯಿಡಾ – 42
ಕುಮಟಾ-19,ಹೊನ್ನಾವರ-8,ಭಟ್ಕಳ-13
ಸಿದ್ದಾಪುರ -17,ಶಿರಸಿ -24,ಮುಂಡಗೋಡು – 10 ಹೊಸ ಟವರ್ ಗೆ ಮಂಜೂರು ದೊರಕಿದ ನಂತರ ಜಿಲ್ಲಾಡಳಿತ ಉಚಿಯವಾಗಿ ಅರಣ್ಯ ಭೂಮಿಯನ್ನು ಆಯಾ ತಾಲೂಕು ವ್ಯಾಪ್ತಿಯಲ್ಲಿ ಟವರ್ ನಿರ್ಮಾಣಕ್ಕೆ 30 ವರ್ಷದ ಲೀಸ್ ನೊಂದಿಗೆ ನೀಡಿತ್ತು. ಆದರೇ ಇದೀಗ ಅರಣ್ಯ ಕಾಯ್ದೆ ಅಡ್ಡಿಯಾದ್ದರಿಂದ ಮೊದಲ ಹಂತದಲ್ಲಿ ಶಿರಸಿಯ 06 ಸ್ಥಳಗಳಲ್ಲಿ ಹಾಗೂ ಜಿಲ್ಲೆಯ ಒಟ್ಟು 72 ಸ್ಥಳಗಳಲ್ಲಿ ನೀಡಿದ್ದ ಜಾಗದ ಮಂಜೂರಾತಿ ಆದೇಶವನ್ನು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ರವರು ಹಿಂಪಡೆದುಕೊಂಡಿದ್ದಾರೆ.

ಇದರಿಂದ ಹಲವು ವರ್ಷದಿಂದ ನೆಟ್ವರ್ಕ ಸಮಸ್ಯೆ ಎದುರಿಸುತಿದ್ದ ಗ್ರಾಮಗಳಿಗೆ ಟವರ್ ನಿರ್ಮಾಣ ವಾಗುವ ಮುಂಚೆಯೇ ವಿಘ್ನ ಎದುರಾಗಿದೆ.

ನಿರ್ಮಾಣ ಹಂತದಲ್ಲಿರು ಟವರ್ ಕಾಮಗಾರಿ.

ಶಿರಸಿಯ ಹುಲೇಕಲ್ ಭಾಗದ -3,ಸಂಪಖಂಡ ಭಾಗದ 2,ಬನವಾಸಿ ಭಾಗದ -1 ಟವರ್ ಗಳನ್ನು ಜಿಲ್ಲಾಧಿಕಾರಿ ಆದೇಶದಿಂದ ನಿರ್ಮಾಣ ಹಂತದಲ್ಲೇ ಕೈ ಬಿಡಲಾಗಿದೆ.

ಇನ್ನು ಮೊಬೈಲ್ ನೆಟ್ವರ್ಕ ಇಲ್ಲದ ಜೋಯಿಡಾ ಭಾಗಕ್ಕೂ ಈ ಸಮಸ್ಯೆ ಎದುರಾಗಿದ್ದು ಜಿಲ್ಲಾಧಿಕಾರಿಗಳು ಆದೇಶ ಹಿಂಪಡೆದಿದ್ದರಿಂದ ಇಲ್ಲಿನ ಜನತೆಗೂ ಮೊಬೈಲ್ ನೆಟ್ಟರ್ಕ ಸಮಸ್ಯೆ ಎದುರಾಗಿದೆ.

ಶಿರಸಿಯಲ್ಲಿ ಮಂಜೂರಾಗಿದ್ದ ಟವರ್ ಗಳನ್ನು BSNL ಇಲಾಖೆ ಯಿಂದ ಕಾಮಗಾರಿ ಸಹ ಪ್ರಾರಂಭಮಾಡಲಾಗಿತ್ತು.ಆದರೇ ಇದೀಗ ಆದೇಶ ಹಿಂಪಡೆದಿದ್ದರಿಂದ BSNL ಗೂ ದೊಡ್ಡ ನಷ್ಟ ಎದುರಾಗುವ ಜೊತೆ ಮೊಬೈಲ್ ನೆಟ್ಟರ್ಕ ಆಗುವ ಆಸೆ ಹೊಂದಿದ್ದ ಜಿಲ್ಲೆಯ ಜನರು ಇದೀಗ ಬೇಸರ ವ್ಯಕ್ತಪಡಿಸುವಂತಾಗಿದೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!