Karwar| ಆಟವಾಡುತಿದ್ದ ಮಗು ಸಾರ್ವಜನಿಕ ಬಾವಿಗೆ ಬಿದ್ದು ಸಾವು.

444

ಕಾರವಾರ:- ರಸ್ತೆಯಲ್ಲಿ ಆಟವಾಡುತಿದ್ದ ಮಗುಆಯಾತಪ್ಪಿ ನಗರಸಭಾ ಬಾವಿಗೆ ಬಿದ್ದು ಮಗು ಸಾವುಕಂಡ ಘಟನೆ
ಕಾರವಾರ ನಗರದ ಹರಿದೇವ ನಗರದಲ್ಲಿ ಇಂದು ಮದ್ಯಹ್ನ ನಡೆದಿದೆ.

ಸ್ತುತಿ (3) ಮೃತಪಟ್ಟ ಹೆಣ್ಣು ಮಗುವಾಗಿದ್ದು ಸೂರಜ್ ಬಂಟ್ ಹಾಗೂ ವಿನುತ ಎಂಬ ದಂಪತಿಗಳ ಮಗುವಾಗಿದ್ದು , ಗಣಪತಿ ಮೂರ್ತಿ ಎಂದು ಮಣ್ಣನ್ನ ಸಾರ್ವಜನಿಕ ಬಾವಿಯಲ್ಲಿ ಹಾಕಲು ಹೋಗಿದ್ದ ಮಗು ಆಯಾ ತಪ್ಪಿ ಬಾವಿಗೆ ಬಿದ್ದು ಘಟನೆ ನಡೆದಿದೆ.

ನಗರಸಭೆಯಿಂದ ತೆಗೆದ ಸಾರ್ವಜನಿಕ ಬಾವಿಯು ರಸ್ತೆಯ ಪಕ್ಕದಲ್ಲೇ ಇದ್ದು ಇದಕ್ಕೆ ಕಟ್ಟಿದ ಕಟ್ಟೆ ತುಂಬಾ ಕೆಳಮಟ್ಟದ್ದಾಗಿದ್ದು ಬಾವಿ ಕಟ್ಟೆಯನ್ನು ಎತ್ತರ ಕಟ್ಟದೇ ಇರುವುದೇ ಘಟನೆಗೆ ಕಾರಣವಾಗಿದೆ. ಇನ್ನು ಮನೆಯಲ್ಲಿದ್ದ ತಾಯಿ ಸಹ ನಿರ್ಲಕ್ಷ ಮಾಡಿ ಮಗುವನ್ನು ಆಟವಾಡಲು ಬಿಟ್ಟಿದ್ದು ಇದೀಗ ಮಗುವಿನ ಪ್ರಾಣವೇ ಹೋಗುವಂತಾಗಿದೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!