Uttarakannada| ಅಬ್ಬರಿಸಿದ ಮಳೆ ಸಿದ್ದಾಪುರ ರಸ್ತೆ ಬಂದ್ ಗೋಕರ್ಣದ ಬೀದಿಗಳು ಜಲಾವೃತ
ಕಾರವಾರ:- ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ 24 ಗಂಟೆಯಲ್ಲಿ ಸುರಿದ ಮಳೆ ಹಲವು ಕಡೆ ಅನಾಹುತ ಸೃಷ್ಟಿಸಿದೆ.
ಜಿಲ್ಲೆಯ ಕುಮಟಾದ (kumta)ಹಲವು ಭಾಗದಲ್ಲಿ ಮಳೆಯಿಂದ ಸಮಸ್ಯೆ ಉದ್ಭವವಾಗಿ ರಸ್ತೆಗಳಲ್ಲಿ ನೀರು ನಿಂತು ಸವಾರರು ಸಂಚಾರ ಮಾಡಲು ಹರಸಾಹಸ ಪಡುವಂತಾಗಿದೆ.
ಕುಮಟಾ ತಾಲೂಕಿನಾದ್ಯಂತ ಅಬ್ಬರದ ಮಳೆಗೆ ಅಬ್ಬರದ ಮಳೆಗೆ ವಾಲಗಳ್ಳಿ ಬಳಿಯ ರಾಜ್ಯ ಹೆದ್ದಾರಿ ಜಲಾವೃತವಾಗಿದೆ.ಇದರಿಂದ ಕುಮಟಾ ದಿಂದ ಸಿದ್ದಾಪುರ ಕ್ಕೆ ಸಂಪರ್ಕ ಕಲ್ಪಿಸುವ ಹೆದ್ದಾರಿ ಹಳ್ಳದಂತಾಗಿ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಪರದಾಡುವಂತಾಯಿತು

ಇನ್ನು ಗೋಕರ್ಣದಲ್ಲಿ (gokarna) ಗಣಪತಿ ದೇವಸ್ಥಾನ ,ರಥಬೀದಿಯ ಸುತ್ತಮುತ್ತ ಚರಂಡಿಯಲ್ಲಿ ನೀರು ಹೋಗದೇ ರಸ್ತೆಯೇ ಕೆರೆಯಂತಾಗಿ ಕೃತಕ ಪ್ರವಾಹ ಸೃಷ್ಟಿಯಾಗಿತ್ತು.ಇನ್ನು ಮಹಾಬಲೇಶ್ಬರ ದೇವಾಲಯದ ಆತ್ಮಲಿಂಗಕ್ಕೆ ಕೊಳಚೆ ನೀರಿನ ಮಜ್ಜನವಾಗಿದ್ದು ಹಲವು ಸಮಯ ದೇವಾಲಯದ ಒಳಗೆ ಕೊಳಚೆ ನೀರು ನಿಂತಿದ್ದು ಭಕ್ತರ ದರ್ಶನಕ್ಕೆ ಅಡ್ಡಿಯಾಯಿತು.


ಉಳಿದಂತೆ ಕರಾವಳಿ ಭಾಗದಲ್ಲಿ ಉತ್ತಮ ಮಳೆ ಸುರಿಯುತಿದ್ದು ಇನ್ನೂ ಒಂದು ವಾರಗಳ ಕಾಲ ಮಳೆ ಬೀಳುವ ಸಾಧ್ಯತೆಯನ್ನ ಹವಾಮಾನ ಇಲಾಖೆ ನೀಡಿದೆ.
ಹೊನ್ನಾವರದಲ್ಲಿ ಅತೀ ಹೆಚ್ಚು ಮಳೆ ದಾಖಲು

ಜಿಲ್ಲೆಯಲ್ಲಿಯೇ ಹೊನ್ನಾವರ ತಾಲೂಕಿನಲ್ಲಿ ಅತೀ ಹೆಚ್ಚು ಮಳೆ ದಾಖಲಾಗಿದೆ.
ಸಾಲ್ಕೋಡ್ – 124.0 ಮಿ.ಮೀ,ಹೊಸಕುಳಿ – 118.0 ಮಿ.ಮೀ,ಹಡಿನಬಾಳ – 114.5 ಮಿ.ಮೀ,ಕಡಲೆ – 114.5 ಮಿ.ಮೀ,ಮುಗ್ವಾ – 108.0 ಮಿ.ಮೀ. ಮಳೆ ದಾಖಲಾಗಿದೆ.






