Uttara kannada police| ಆಪ್ತಮಿತ್ರನಾದ ಪೊಲೀಸ್ -ಅಧಿಕಾರಿಗಳ ಸಂಪರ್ಕಿಸಲು ಇಲ್ಲಿದೆ ಸಂಪರ್ಕ ಸಂಖ್ಯೆ.
ಕಾರವಾರ :- ಉತ್ತರ ಕನ್ನಡ ಜಿಲ್ಲೆಯ ಪೊಲೀಸ್ ಇಲಾಖೆ ( Uttara Kannada Police Department)ಮಹತ್ವದ ಹೆಜ್ಜೆ ಇಟ್ಟಿದ್ದು ಪ್ರತಿಯೊಬ್ಬರಿಗೂ ಆಯಾ ಠಾಣೆಗಳ ಅಧಿಕಾರಿಗಳ ಸಂಪರ್ಕ ಸಂಖ್ಯೆ ( police officer number) ಸಾರ್ವಜನಿಕರಿಗೆ ದೊರಕಬೇಕು ಎಂಬ ಸದುದ್ದೇಶದಿಂದ ಉತ್ತರ ಕನ್ನಡ ಪೊಲೀಸ್ ವರಿಷ್ಠಾಧಿಕಾರಿ ದೀಪನ್ .ಎಂ.ಎನ್ ರವರು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಅಧಿಕಾರಿಗಳ ಭಾವಚಿತ್ರದ ಜೊತೆ ಇಲಾಖೆ ಮೊಬೈಲ್ ಸಂಖ್ಯೆ ಜೊತೆ ಅಧಿಕಾರಿಗಳ ಪ್ರವೇಟ್ ಮೊಬೈಲ್ ಸಂಖ್ಯೆಯನ್ನು ಸಹ ನೀಡಿದೆ.
ಪ್ರವಾಸೋಧ್ಯಮದ ಜಿಲ್ಲೆಯಾಗಿರುವ ಉತ್ತರ ಕನ್ನಡ ಜಿಲ್ಲೆಯಲ್ಲಿ ತಕ್ಷಣ ಸ್ಪಂದಿಸಲು 112 ಕರೆ ಮಾಡಬಹುದು. ಇಲ್ಲವೇ ಇಲಾಖೆ ವೆಬ್ ಸೈಟ್ ಮೂಲಕ ನಂಬರ್ ಪಡೆದು ಸಂಪರ್ಕಿಸಬಹುದು. ಆದರೇ ಇಂದಿನ ದಿನದಲ್ಲಿ ಸೋಷಿಯಲ್ ಮೀಡಿಯಾ ಸಹ ಅತ್ಯಂತ ಪವರ್ ಫುಲ್ ಮಾಧ್ಯಮವಾಗಿದ್ದು ಇದರ ಮೂಲಕ ಇಲಾಖೆ ಅಧಿಕಾರಿಗಳ ಮೊಬೈಲ್ ಸಂಖ್ಯೆ,ಹೆಸರು ಹುದ್ದೆಗಳ ಜೊತೆ ಮಾಹಿತಿ ಶೇರ್ ಮಾಡಲಾಗಿದೆ.
ಇದನ್ನೂ ಓದಿ:-Sirsi police |ಕಳ್ಳತನವಾದ ₹77.21 ಲಕ್ಷ ಮೌಲ್ಯದ ಸ್ವತ್ತುಗಳನ್ನ ಮರಳಿ ಮಾಲೀಕರಿಗೆ ಪೊಲೀಸರಿಂದ ಹಸ್ತಾಂತರ
ಈಗಾಗಲೇ ಜಿಲ್ಲಾ ಪೊಲೀಸ್ ಇಲಾಖೆ ತಕ್ಷಣ ಸ್ಪಂದನೆ , ಅಪರಾಧಿಗಳನ್ನ ತಕ್ಷಣ ಬಂಧಿಸುವಲ್ಲಿ ತನ್ನದೇ ಆದ ಹೆಸರನ್ನು ಹೊಂದಿದೆ. ಇದರ ಜೊತೆಗೆ ಸಾರ್ವಜನಿಕರಿಗೆ ರಸ್ತೆ ಸಂಚಾರ , ಮಾದಕ ವ್ಯಸನಗಳ ಬಗ್ಗೆ ಜಾಗೃತಿ ಮೂಡಿಸುವ ಜೊತೆಗೆ ಅಪರಾಧಿ ಕೃತ್ಯಗಳನ್ನ ತಡೆಯುವಲ್ಲಿ ತನ್ನದೇ ಆದ ಕಾರ್ಯ ಮಾಡುವ ಮೂಲಕ ಯಶಸ್ಸು ಸಾಧಿಸಿದೆ. ಇದೀಗ ಹೊಸ ಪ್ರಯೋಗಗಳ ಮೂಲಕ ಜನರಿಗೆ ಆಪ್ತ ಮಿತ್ರನ ರೀತಿಯಲ್ಲಿ ಸ್ಪಂದಿಸುತ್ತಿದೆ.
ವಿಭಾಗವಾರು ಪೊಲೀಸ್ ಇಲಾಖೆಯ ಸಂಪರ್ಕ ಸಂಖ್ಯೆ:-

ಕಾರವಾರ ವಿಭಾಗ



