Uttara kannada| ಪ್ರವಾಸಕ್ಕೆ ಬರುವ ಪ್ರವಾಸಿಗರೇ ಎಚ್ಚರ! ರೀಲ್ಸ್ ಹುಚ್ಚಲ್ಲಿ ಹೀಗೆಲ್ಲಾ ಮಾಡಿದ್ರೆ ಬೀಳುತ್ತೆ ಕೇಸ್!

Uttara kannada| ಪ್ರವಾಸಕ್ಕೆ ಬರುವ ಪ್ರವಾಸಿಗರೇ ಎಚ್ಚರ! ರೀಲ್ಸ್ ಹುಚ್ಚಲ್ಲಿ ಹೀಗೆಲ್ಲಾ ಮಾಡಿದ್ರೆ ಬೀಳುತ್ತೆ ಕೇಸ್!ಯಾರ ಮೇಲೆ ಪ್ರಕರಣ ವಿವರ ನೋಡಿ
Uttara kannada ರೀಲ್ಸ್ ಮಾಡುವ ವಿರುದ್ಧ ಪ್ರಕರಣ ದಾಖಲು Uttara kannada ರೀಲ್ಸ್ ಮಾಡುವ ವಿರುದ್ಧ ಪ್ರಕರಣ ದಾಖಲು

Uttara kannada| ಪ್ರವಾಸಕ್ಕೆ ಬರುವ ಪ್ರವಾಸಿಗರೇ ಎಚ್ಚರ! ರೀಲ್ಸ್ ಹುಚ್ಚಲ್ಲಿ ಹೀಗೆಲ್ಲಾ ಮಾಡಿದ್ರೆ ಬೀಳುತ್ತೆ ಕೇಸ್!

ಕಾರವಾರ :- ಪ್ರವಾಸೋಧ್ಯಮಕ್ಕೆ ಹೆಸರಾದ ಜಿಲ್ಲೆ ಅಂದ್ರೆ ಅದು ಉತ್ತರ ಕನ್ನಡ ಜಿಲ್ಲೆ. (Uttara kannada)ಇಲ್ಲಿಗೆ ಪ್ರತಿ ತಿಂಗಳು ಮೂರರಿಂದ ಮಾಲ್ಕು ಲಕ್ಷ ಕ್ಕೂ ಹೆಚ್ಚು ಜನ ಪ್ರವಾಸಿಗರು ಬರುತ್ತಾರೆ.

ಗೂಗಲ್ ನಲ್ಲಿ ಪ್ರವಾಸಿ ಸ್ಥಳಗಳ ಜೊತೆ ಹಿಡನ್ಸ್ ಫಾಲ್ಸ್ ಹುಡುಕುವ ಪ್ರವಾಸಿಗರು , ರೀಲ್ಸ್ ಹುಚ್ಚಲ್ಲಿ ಕಾಡು ಮೇಡು ತಿರುಗಾಡಿ ಹಿಡನ್  ಪಾಲ್ಸ್ ಗಳ ಚಿತ್ರೀಕರಣ ಮಾಡಿ ಯೂಟ್ಯೂಬ್ (YouTube)ಫೇಸ್ ಬುಲ್ ,ಇನ್ ಸ್ಟಾ ದಲ್ಲಿ ಹಾಕುತ್ತಾರೆ. ನಾವೇನೋ ಸಾಧನೆ ಮಾಡಿದ್ದೇವೆ ಎನ್ನೋ ಉತ್ಸುಕತೆ ಜೊತೆ ಹಣ ಗಳಿಸುವ ಹಂಬಲದಲ್ಲಿ ತಮ್ಮ ಜೀವಕ್ಕೆ ಕುತ್ತು ತಂದುಕೊಳ್ಳುವ ಜೊತೆ ಬೇರೆಯವರ ಜೀವಕ್ಕೂ ಕುತ್ತು ತರುತಿದ್ದಾರೆ.

ಹೀಗಾಗಿ ಉತ್ತರ ಕನ್ನಡ ಜಿಲ್ಲೆಯ ಅರಣ್ಯ ಇಲಾಖೆ,ಪೊಲೀಸರು ಇಂತವರ ವಿರುದ್ಧ ಕ್ರಮ ಜರುಗಿಸುತಿದ್ದಾರೆ.

Advertisement

ಹೌದು ಕಳೆದ ಎರಡು ದಿನದಲ್ಲಿ ರೀಲ್ಸ್ ಸರದಾರರಿಗೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ.

ಹಿಡನ್ ಫಾಲ್ಸ್’  ಎಂದು ವಿಡಿಯೋ ವೈರಲ್-ಐವರ ವಿರುದ್ಧ ಪ್ರಕರಣ ದಾಖಲು.

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುವ ಉದ್ದೇಶದಿಂದ ಅಪಾಯಕಾರಿ ಜಲಪಾತದ ಕಲ್ಲಿನ ಬಂಡೆಯ ಮೇಲೆ ನಿಂತು ವಿಡಿಯೋ ಚಿತ್ರೀಕರಿಸಿ ಫೇಸ್‌ಬುಕ್‌ನಲ್ಲಿ ಅಪ್‌ಲೋಡ್ ಮಾಡಿದ ಆರೋಪದಡಿ ಐವರು ಅಪರಿಚಿತರ ವಿರುದ್ಧ ಅರಣ್ಯ ಇಲಾಖೆ ದೂರು ನೀಡಿದ್ದು, ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗೇರುಸೊಪ್ಪ ಶಾಖೆಯ ಉಪವಲಯ ಅರಣ್ಯಾಧಿಕಾರಿ ಬಾಲಕೃಷ್ಣ ಈಶ್ವರ ನಾಯ್ಕ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:-Jog|ಜೋಗ ಜಲಪಾತದ ರಾಜಪಾಲ್ಸ್ ನಲ್ಲಿ ಯೂಟ್ಯೂಬರ್ ಹುಚ್ಚಾಟ – ಮೂರು ಜನರ ವಿರುದ್ಧ ಪ್ರಕರಣ ದಾಖಲು

ದೂರಿನ ಪ್ರಕಾರ, ಜುಲೈ 23ರಂದು ‘ಲೋಕಲ್ ಮ್ಯಾಪ್ಸ್’ ಹೆಸರಿನ ಫೇಸ್‌ಬುಕ್ ಖಾತೆಯಲ್ಲಿ ಗೇರುಸೊಪ್ಪ ವಲಯದ ಶರಾವತಿ ಕಣಿವೆ ಸಿಂಗಳಿಕ ಅಭಯಾರಣ್ಯದ ವ್ಯಾಪ್ತಿಯಲ್ಲಿರುವ, ಮೇಲ್ನೋಟಕ್ಕೆ ಕನ್ನಿಕಾ ಜಲಪಾತದಂತೆ ಕಾಣುವ ಅಪಾಯಕಾರಿ ಜಲಪಾತದ ಕಲ್ಲಿನ ಬಂಡೆಯ ಮೇಲೆ ಐವರು ನಿಂತು ಚಿತ್ರೀಕರಿಸಿದ ವಿಡಿಯೋವನ್ನು ಅಪ್‌ಲೋಡ್ ಮಾಡಿದ್ದರು.

ವಿಡಿಯೋದಲ್ಲಿ, ಉತ್ತರ ಕನ್ನಡದ ಮತ್ತೊಂದು ಹಿಡನ್ ಫಾಲ್ಸ್‌ಗೆ ಬಂದಿದ್ದೇವೆ. ಇಲ್ಲಿ ಯಾವುದೇ ರಸ್ತೆ ಇಲ್ಲ. ಕಾಲುದಾರಿಯಲ್ಲೇ ಬರಬೇಕು. ಮಂಜಿನ ದೃಶ್ಯ ತುಂಬಾ ಅದ್ಭುತವಾಗಿದೆ ಎಂದು ಹೇಳಿಕೊಂಡಿದ್ದಾರೆ. ಜೊತೆಗೆ ಜಲಪಾತದ ಮೇಲ್ಭಾಗದಿಂದ ಕೆಳಭಾಗದವರೆಗೆ ದೃಶ್ಯಗಳನ್ನು ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ.

ಇದನ್ನೂ ಓದಿ:-Unchalli Falls :ಮಳೆಯಿಂದ ಸೌಂದರ್ಯ ಹೆಚ್ಚಿಸಿಕೊಂಡ ಉಂಚಳ್ಳಿ ಜಲಪಾತ ವಿಡಿಯೋ ನೋಡಿ

ಅರಣ್ಯ ಇಲಾಖೆ ಈಗಾಗಲೇ ಆ ಪ್ರದೇಶದಲ್ಲಿ ಪ್ರವಾಸಿಗರು ತೆರಳದಂತೆ ಎಚ್ಚರಿಕೆ ಫಲಕಗಳು ಹಾಗೂ ಸೂಚನಾ ಫಲಕಗಳನ್ನು ಅಳವಡಿಸಿದ್ದರೂ, ಅವುಗಳನ್ನು ಲೆಕ್ಕಿಸದೇ ಅಪಾಯಕಾರಿ ಪ್ರದೇಶಕ್ಕೆ ತೆರಳಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ಇತರ ಪ್ರವಾಸಿಗರನ್ನು ಕೂಡ ಅದೇ ಸ್ಥಳಕ್ಕೆ ತೆರಳಲು ಪ್ರೇರೇಪಿಸಿದ್ದಾರೆ.

ಇದನ್ನೂ ಓದಿ:-Sirsi :ನಾಲ್ಕು ದಿನವಾದರೂ ಸಿಗದ ಪವನ್  NDRF ತಂಡದಿಂದ  ಶೋಧ ಕಾರ್ಯ

ಈ ವಿಷಯ ಫೇಸ್‌ಬುಕ್ ವಿಡಿಯೋ ಮೂಲಕ ಅರಣ್ಯ ಇಲಾಖೆಯ ಗಮನಕ್ಕೆ ಬಂದಿದ್ದು,ಘಟನೆ ಸಂಬಂಧ ಹೊನ್ನಾವರ ಪೊಲೀಸ್ ಠಾಣೆಗೆ ದೂರು ಸಲ್ಲಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಐವರು ಅಪರಿಚಿತ ವ್ಯಕ್ತಿಗಳ ವಿರುದ್ಧ ಹೊನ್ನಾವರ ಪೊಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲಿಸಿ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

ರೀಲ್ಸ್‌ಗಾಗಿ ಪ್ರಾಣದೊಂದಿಗೆ ಚೆಲ್ಲಾಟ: ಕ್ರೂಸರ್ ವಾಹನದ ಮೇಲ್ಛಾವಣಿಯಲ್ಲಿ 12 ಜನರೊಂದಿಗೆ ಸ್ಟಂಟ್ : ಪ್ರಕರಣ ದಾಖಲು.

Uttara kannada| ಪ್ರವಾಸಕ್ಕೆ ಬರುವ ಪ್ರವಾಸಿಗರೇ ಎಚ್ಚರ! ರೀಲ್ಸ್ ಹುಚ್ಚಲ್ಲಿ ಹೀಗೆಲ್ಲಾ ಮಾಡಿದ್ರೆ ಬೀಳುತ್ತೆ ಕೇಸ್!ಯಾರ ಮೇಲೆ ಪ್ರಕರಣ ವಿವರ ನೋಡಿ
ರೀಲ್ಸ್ ಮಾಡಿ ವಾಹನ ವಶಕ್ಕೆ ಪಡೆದ ದೃಶ್ಯ

ಇನ್ನು ಸಾಮಾಜಿಕ ಜಾಲತಾಣದಲ್ಲಿ ಲೈಕ್ಸ್ ಮತ್ತು ಫಾಲೋವರ್ಸ್ ಪಡೆಯುವ ಸಲುವಾಗಿ ಸಾರ್ವಜನಿಕರ ಜೀವದೊಂದಿಗೆ ಚೆಲ್ಲಾಟವಾಡಿದ ಚಾಲಕನ ವಿರುದ್ಧ ದಾಂಡೇಲಿ ಗ್ರಾಮೀಣ ಪೊಲೀಸರು ಪ್ರಕರಣ ದಾಖಲಿಸಿ, ಕ್ರೂಸರ್ ವಾಹನವನ್ನು ವಶಪಡಿಸಿಕೊಂಡಿದ್ದಾರೆ.

ಇದನ್ನೂ ಓದಿ:-Magod waterFalls: ಜೀವ ಕಳೆ ಪಡೆದುಕೊಂಡ ಮಾಗೋಡು ಜಲಪಾತ ವಿಡಿಯೋ ನೋಡಿ

ಜೋಯಿಡಾ ತಾಲೂಕಿನ ಪ್ರಧಾನಿ ಗ್ರಾಮದ ಇನ್ಫಿನಿಟಿ ಹೋಂಸ್ಟೇ ಬಳಿ ತೂಫಾನ್ ಕ್ರೂಸರ್ ವಾಹನದ ಚಾಲಕ (KA-24/A-0450) ಸಾರಿಗೆ ನಿಯಮಗಳನ್ನು ಗಾಳಿಗೆ ತೂರಿ ಅಪಾಯಕಾರಿ ಸಾಹಸ ಮಾಡಿದ್ದಾನೆ. ವಾಹನದ ಬಾನೆಟ್ ಮತ್ತು ಮೇಲ್ಛಾವಣಿಯ ಮೇಲೆ 10 ರಿಂದ 12 ಜನರನ್ನು ಕುಳ್ಳಿರಿಸಿಕೊಂಡು ಅತಿವೇಗ ಹಾಗೂ ನಿರ್ಲಕ್ಷ್ಯದಿಂದ ಚಾಲನೆ ಮಾಡಿದ್ದಾನೆ.

ಈ ಅಪಾಯಕಾರಿ ದೃಶ್ಯವನ್ನು ವಿಡಿಯೋ ಮಾಡಿ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾನೆ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದ ಈ ವಿಡಿಯೋ ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆಯ ಸಿಬ್ಬಂದಿ ಸುಭಾಷ ಸಾಲಮಂಟಪ ಅವರ ಗಮನಕ್ಕೆ ಬಂದಿತ್ತು. ಅವರು ನೀಡಿದ ದೂರಿನನ್ವಯ ಚಾಲಕನ ವಿರುದ್ಧ ನೂತನ ಬಿ.ಎನ್.ಎಸ್ ಕಾಯ್ದೆಯಡಿ ಕ್ರಿಮಿನಲ್ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಜೋಗಾದ ರಾಜಾ ಫಾಲ್ಸ್ ನಲ್ಲಿ ರೀಲ್ಸ್-ಮೂರುಜನರ ವಿರುದ್ಧ ಪ್ರಕರಣ.

ಜೋಗ ಜಲಪಾತದ ನಿರ್ಬಂಧಿತ ರಾಜಾಪಾಲ್ಸ್ ಪ್ರದೇಶದಲ್ಲಿ ಅಪಾಯಕಾರಿ ಕಲ್ಲಿನ ತುದಿಯಲ್ಲಿ ಚಿತ್ರೀಕರಣ ನಡೆಸಿದ ಯೂಟ್ಯೂಬರ್‌ಗಳ ವಿರುದ್ಧ ಪ್ರಕರಣ ದಾಖಲಿಸಿದ ಘಟನೆ
ಜೋಗ ಜಲಪಾತದ ನಿರ್ಬಂಧಿತ ರಾಜಾಪಾಲ್ಸ್ ಪ್ರದೇಶದಲ್ಲಿ ಅಪಾಯಕಾರಿ ಕಲ್ಲಿನ ತುದಿಯಲ್ಲಿ ಚಿತ್ರೀಕರಣ ನಡೆಸಿದ ಯೂಟ್ಯೂಬರ್‌ಗಳ ವಿರುದ್ಧ ಪ್ರಕರಣ ದಾಖಲಿಸಿದ ಘಟನೆ

ಇನ್ನು ಸಿದ್ದಾಪುರ  ಠಾಣೆ ವ್ಯಾಪ್ತಿಯ ಜೋಗದ (jog)ರಾಜಾ ಫಾಲ್ಸ್ ಬಳಿ ಶಿವಮೊಗ್ಗ ಮೂಲದ ಮೂವರು ಯೂಟ್ಯೂಬರ್ ಗಳು ಅಪಾಯಕಾರಿ ಬಂಡೆ ಮೇಲೆ ನಿಂತು ರೀಲ್ಸ್ ಮಾಡಿ ಹಾಕಿದ್ದು ಇವರ ವಿರುದ್ಧ ಪ್ರಕರಣ ದಾಖಲಾಗಿದ್ದು ,ರಾಜಾ ಫಾಲ್ಸ್ ಬಳಿಯ ಬಂಡೆಯ ಬಳಿ ತೆರಳಲು ಉ.ಕ ಜಿಲ್ಲಾಡಳಿತ ನಿರ್ಬಂಧ ವಿಧಿಸಿದೆ.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement