ಶಿರಸಿ,ದಾಂಡೇಲಿಯಲ್ಲಿ ವಾಹನಗಳ ಅಪಘಾತ| ಮೂರು ಕಿಲೋಮೀಟರ್ ಟ್ರಾಫಿಕ್ ಜಾಮ್!.
ಶಿರಸಿ|ವಾಹನ ತಪ್ಪಿಸಲು ಹೋಗಿ ಗಟಾರಕ್ಕಿಳಿದ ಬಸ್; ಪ್ರಯಾಣಿಕರು ಅಪಾಯದಿಂದ ಪಾರು.

ಶಿರಸಿ: ಇಂದು ಬೆಳಿಗ್ಗೆ ಶಿರಸಿ–ಕಿರುವತ್ತಿ ರಸ್ತೆಯ ಅಚನಳ್ಳಿ ಸಮೀಪದ ಭೂತಪ್ಪ ದೇವಸ್ಥಾನದ ಬಳಿ ಕೆಎಸ್‌ಆರ್‌ಟಿಸಿ ಬಸ್ ರಸ್ತೆ ಬದಿಯ ಗಟಾರಕ್ಕಿಳಿದು ಒಂದು ಬದಿಗೆ ವಾಲಿದ ಘಟನೆ ನಡೆದಿದೆ.
ಕಿರುವತ್ತಿಯಿಂದ ಶಿರಸಿಗೆ(sirsi) ಬರುತ್ತಿದ್ದ ಈ ಬಸ್‌ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಹಲವು ಪ್ರಯಾಣಿಕರು ಇದ್ದರು. ಎದುರಿನಿಂದ ಅತೀವೇಗವಾಗಿ ಬರುತ್ತಿದ್ದ ವಾಹನವನ್ನು ತಪ್ಪಿಸಲು ಹೋಗಿದ್ದ ವೇಳೆ ಚಾಲಕ ಬಸ್ ಅನ್ನು ರಸ್ತೆ ಬದಿಗೆ ತಿರುಗಿಸಿದ್ದು, ನಿಯಂತ್ರಣ ತಪ್ಪಿ ಗಟಾರಕ್ಕಿಳಿದು ಧರೆಗೆ ವಾಲಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ:-Sirsi:20 ಸಾವಿರ ಮೌಲ್ಯದ ಗಾಂಜಾ ವಶ -ಆರೋಪಿ ಬಂಧನ
ಘಟನೆ ನಡೆದ ತಕ್ಷಣ ಸ್ಥಳೀಯರು ಹಾಗೂ ಪ್ರಯಾಣಿಕರು ಸುರಕ್ಷಿತವಾಗಿ ಬಸ್‌ನಿಂದ ಹೊರಬಂದರು. ಅದೃಷ್ಟವಶಾತ್ ಯಾರಿಗೂ ಯಾವುದೇ ರೀತಿಯ ಗಾಯ ಅಥವಾ ಪ್ರಾಣಾಪಾಯ ಸಂಭವಿಸಿಲ್ಲ. ಬಳಿಕ ವಿದ್ಯಾರ್ಥಿಗಳು ಹಾಗೂ ಇತರ ಪ್ರಯಾಣಿಕರು ಪರ್ಯಾಯ ವಾಹನಗಳ ಮೂಲಕ ಶಿರಸಿಗೆ ತೆರಳಿದರು.
ಘಟನೆಯಿಂದ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಹೆಚ್ಚಿನ ಅನಾಹುತ ತಪ್ಪಿದ ಹಿನ್ನೆಲೆಯಲ್ಲಿ ಪ್ರಯಾಣಿಕರು ನಿಟ್ಟುಸಿರು ಬಿಟ್ಟಿದ್ದಾರೆ.
Dandeli|ದಾಂಡೇಲಿ–ಹಳಿಯಾಳ ರಾಜ್ಯ ಹೆದ್ದಾರಿಯ ಅಜ್ಗಾವ್ ಗ್ರಾಮದ ಬಳಿ ರಸ್ತೆಯಲ್ಲಿ ಸಿಲುಕಿಕೊಂಡ ಲಾರಿ -ಟ್ರಾಫಿಕ್ ಜಾಮ್.

ಶುಕ್ರವಾರ ಬೆಳಗ್ಗೆ ಸುಮಾರು 8 ಗಂಟೆಗೆ ನಡೆದ ಘಟನೆ ಎರಡು ಗಂಟೆಗಳ ಕಾಲ ಭಾರೀ ಟ್ರಾಫಿಕ್ ಜಾಮ್‌ಗೆ ಕಾರಣವಾಯಿತು.
ಮಂಗಳೂರಿನಿಂದ ದಾಂಡೇಲಿಯ ಕಾಗದ ಕಾರ್ಖಾನೆಗೆ ಕಟ್ಟಿಗೆ ಪೋಲ್ಸ್‌ಗಳನ್ನು ಸಾಗಿಸುತ್ತಿದ್ದ ಲಾರಿ, ಎದುರು ಬರುತ್ತಿದ್ದ ವಾಹನಕ್ಕೆ ರಸ್ತೆ ಬದಿಗೆ ಜಾಗ ನೀಡುವ ವೇಳೆ ರಸ್ತೆ ಪಕ್ಕದ ಕೆಸರಿನಲ್ಲಿ ಒಂದು ಬದಿಯ ಚಕ್ರಗಳು ಸಿಲುಕಿಕೊಂಡವು. ಇದರಿಂದ ಲಾರಿ ರಸ್ತೆ ಮಧ್ಯಭಾಗದಲ್ಲೇ ಸಿಲುಕಿ ಮುಂದೆ ಸಾಗಲು ಸಾಧ್ಯವಾಗದೆ ಸಂಚಾರಕ್ಕೆ ಅಡ್ಡಿಯಾಯಿತು.
ಇದನ್ನೂ ಓದಿ:-Dandeli | ಜಿಪ್‌ಲೈನ್ ದುರಂತ: ಪ್ರವಾಸಿಗ ಗಾಯ ಪ್ರಕರಣ; ರೆಸಾರ್ಟ್ ಮಾಲೀಕ ಸೇರಿ ಮೂವರ ವಿರುದ್ಧ ಪ್ರಕರಣ ದಾಖಲು
ಪರಿಣಾಮವಾಗಿ ದಾಂಡೇಲಿ–ಹಳಿಯಾಳ(dandelion a lot ala) ರಸ್ತೆಯ ಎರಡೂ ಬದಿಗಳಲ್ಲಿ ಸುಮಾರು 2 ರಿಂದ 3 ಕಿಲೋಮೀಟರ್‌ವರೆಗೆ ವಾಹನಗಳ ಉದ್ದನೆಯ ಸಾಲು ನಿರ್ಮಾಣವಾಗಿ, ಸುಮಾರು ಎರಡು ಗಂಟೆಗಳ ಕಾಲ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿತು. ಕೆಲಸಕ್ಕೆ ತೆರಳುತ್ತಿದ್ದ ಸಾರ್ವಜನಿಕರು, ಶಾಲಾ ವಾಹನಗಳು ಹಾಗೂ ಇತರೆ ಪ್ರಯಾಣಿಕರು ಪರದಾಡುವಂತಾಯಿತು.
ಇದನ್ನೂ ಓದಿ:-Haliyal|ಕಾಡುಪ್ರಾಣಿ ಬೇಟೆಗೆ ಇಟ್ಟಿದ್ದ ನಾಡಬಾಂಬ್ ಸ್ಟೋಟ-ಹಲವು ಮನೆಗಳಿಗೆ ಹಾನಿ
ಮಾಹಿತಿ ತಿಳಿಯುತ್ತಿದ್ದಂತೆಯೇ ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿ, ಕ್ರೇನ್ ಸಹಾಯದಿಂದ ಕೆಸರಿನಲ್ಲಿ ಸಿಲುಕಿದ್ದ ಲಾರಿಯನ್ನು ಹೊರತೆಗೆದರು. ಬಳಿಕ ವಾಹನವನ್ನು ಸ್ಥಳಾಂತರಿಸಿ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಿದರು.
ಪೊಲೀಸರ ತ್ವರಿತ ಕಾರ್ಯಾಚರಣೆಯಿಂದ ಸುಮಾರು ಎರಡು ಗಂಟೆಗಳ ಬಳಿಕ ಸಂಚಾರ ಸಂಪೂರ್ಣವಾಗಿ ಪುನಃ ಆರಂಭಗೊಂಡಿತು.
