Rain| ಅಬ್ಬರದ ಮಳೆಗೆ ರಸ್ತೆಗೆ ಬಂದ ಮೊಸಳೆ,ಹೆಬ್ಬಾವುಗಳು- ವಿಡಿಯೋ ನೋಡಿ.
ವಿಡಿಯೋ:-
ಉತ್ತರ ಕನ್ನಡ (uttara kannada)ಜಿಲ್ಲೆಯ ಮಲೆನಾಡಿನಲ್ಲಿ ಬೆಂಬಿಡದೇ ಮಳೆ ಸುರಿಯುತಿದ್ದು ಜಿಲ್ಲೆಯ ದಾಂಡೇಲಿ ತಾಲೂಕಿನಲ್ಲಿ ಕಾಳಿ ನದಿ ತುಂಬಿ ಹರಿಯುತಿದ್ದು ನದಿ ನೀರಿನ ರಭಸಕ್ಕೆ ಮೊಸಳೆಗಳು ಗ್ರಾಮದತ್ತ ನುಗ್ಗುತಿದ್ದು ಆತಂಕ ಸೃಷ್ಟಿಸಿದೆ. ದಾಂಡೇಲಿ ತಾಲೂಕಿನ ಪಟೇಲ್ ನಗರದಲ್ಲಿ ರಾತ್ರಿ ವೇಳೆಗೆ ನಾಲ್ಕು ಅಡಿ ಉದ್ದದ ಮೊಸಳೆಯ ಮರಿ ರಸ್ತೆ ಮೇಲೆ ಕಾಣಿಸಿಕೊಂಡು ಸ್ಥಳೀಯರಲ್ಲಿ ಕೆಲಕಾಲ ಆತಂಕದ ವಾತಾವರಣ ಉಂಟುಮಾಡಿತು.
ಇದನ್ನೂ ಓದಿ:-Dandeli | ಜಿಪ್‌ಲೈನ್ ದುರಂತ: ಪ್ರವಾಸಿಗ ಗಾಯ ಪ್ರಕರಣ; ರೆಸಾರ್ಟ್ ಮಾಲೀಕ ಸೇರಿ ಮೂವರ ವಿರುದ್ಧ ಪ್ರಕರಣ ದಾಖಲು
ರಸ್ತೆ ಮೇಲೆ ಮೊಸಳೆ ಮರಿ ಕಂಡ ತಕ್ಷಣ ಸ್ಥಳೀಯರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಹಾಗೂ ಊರಿನ ಉರಗ ತಜ್ಞ ರಜಾಕ್ ಶಾ ಅವರಿಗೆ ಮಾಹಿತಿ ನೀಡಿದರು.ಮಾಹಿತಿ ಪಡೆದ ತಕ್ಷಣ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆಯ ಸಿಬ್ಬಂದಿ ಮತ್ತು ರಜಾಕ್ ಶಾ ಅವರು ಕಾರ್ಯಾಚರಣೆ ನಡೆಸಿ ಮೊಸಳೆ ಮರಿಯನ್ನು ಸುರಕ್ಷಿತವಾಗಿ ಹಿಡಿದು, ಬಳಿಕ ಸೂಕ್ತ ಅರಣ್ಯ ಪ್ರದೇಶದಲ್ಲಿ ಬಿಡುವ ಮೂಲಕ ಯಾವುದೇ ಅನಾಹುತ ಸಂಭವಿಸದಂತೆ ಕ್ರಮ ಕೈಗೊಂಡರು.

ಸ್ಥಳೀಯರ ಮಾಹಿತಿಯಂತೆ, ಪಕ್ಕದಲ್ಲಿರುವ ಕಾಳಿ ನದಿಯಿಂದ ತುಂಬಿ ಹರಿಯುವ ನೀರಿನಿಂದ ಗಟಾರದ ಮೂಲಕ ಈ ಮೊಸಳೆ ಮರಿ ರಸ್ತೆ ಮೇಲೆ ಬಂದಿರಬಹುದು ಎಂದು ಶಂಕಿಸಲಾಗಿದೆ.
ಅಘನಾಶಿನಿ ನದಿಯಲ್ಲಿ ತೇಲಿ ಬಂದ ಹೆಬ್ಬಾವು!

ಶಿರಸಿ(sirsi) ಭಾಗದ ಹೊಸಗದ್ದೆಯಲ್ಲಿ ಅಘನಾಶಿನಿ ನದಿಯಲ್ಲಿ ಪ್ರವಾಹ ಸೃಷ್ಟಿಯಾಗಿದ್ದು ನದಿಯಲ್ಲಿ ಹೆಬ್ಬಾವು ಹರಿದು ಬಂದಿದ್ದು ರಕ್ಷಣೆ ಮಾಡಿ ಕಾಡಿಗೆ ಬಿಡಲಾಗಿದೆ.
ಆಹಾರ ಅರಸಿ ನಾಡಿನತ್ತ ಹೆಜ್ಜೆ ಇಟ್ಟ ಕಾಡುಕೋಣಗಳು

ಮಳೆಯಿಂದಾಗಿ ಕಾಡುಪ್ರಾಣಿಗಳು ಆಹಾರ ಅರಸಿ ನಾಡಿನತ್ತ ಬರುವುದು ಸಾಮಾನ್ಯವಾಗಿದ್ದು ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಹನೋಲಿ ಕ್ರಾಸ್ ಬಳಿ ರಸ್ತೆಯ ಪಕ್ಕದಲ್ಲಿ ಕಾಡುಕೋಣಗಳ ಹಿಂಡು ನಾಡಿನತ್ತ ಬರಲು ಸಿದ್ದವಾಗಿದ್ದು ರಸ್ತೆಯ ಅಂಚಿನಲ್ಲಿ ನಿಂತಿರುವ ದೃಶ್ಯ ಸ್ಥಳೀಯರ ಕ್ಯಾಮರಾದಲ್ಲಿ ಸೆರೆಯಾಗಿವೆ. ಹೆಚ್ಚಿನ ಮಳೆ ಬಂತು ಎಂದರೇ ಕಾಡುಕೋಣಗಳು ಸುತ್ತಮುತ್ತಲ ತೋಟ ,ಗದ್ದೆಗಳತ್ತ ಮೇವಿಗಾಗಿ ಬರುತ್ತವೆ. ಗದ್ದೆಗೆ ಹಿಂಡು ಹಿಂಡಾಗಿ ರಾತ್ರಿ ವೇಳೆ ನುಗ್ಗುವ ಕಾಡುಕೋಣಗಳು ಬೆಳಗ್ಗೆಯೇ ರಸ್ತೆಯ ಅಂಚಿನಲ್ಲಿ ನಿಂತುದ್ದು ನೋಡುಗರಿಗೆ ಖುಷಿ ಕೊಟ್ಟರೇ ,ಬೆಳೆ ಬೆಳೆದ ರೈತನಿಗೆ ಮಾತ್ರ ಬೆಳೆ ನಾಶವಾಗುವ ಆತಂಕ ಮೂಡಿಸುತ್ತವೆ.ಇತ್ತೀಚೆಗೆ ದಾಂಡೇಲಿ ಭಾಗದಲ್ಲಿ ಕಾಡುಪ್ರಾಣಿಗಳು ಅರಣ್ಯ ಬಿಟ್ಟು ನಾಡಿನತ್ತ ಬರುವುದು ಸಾಮಾನ್ಯವಾಗಿದ್ದು ಅರಣ್ಯಾಧಿಕಾರಿಗಳು ಕ್ರಮ ವಹಿಸಬೇಕು ಎಂಬುದು ಸ್ಥಳೀಯರ ಆಗ್ರಹವಾಗಿದೆ.
