ಉತ್ತರ ಕನ್ನಡ ಜಿಲ್ಲೆಗೆ ಮೊದಲಬಾರಿ ಮಹಿಳಾ ಎಸ್.ಪಿ ಯಾಗಿ ವರ್ತಿಕಾ ಕಟಿಯಾರ್.

3467

ಕಾರವಾರ:- ಉತ್ತರ ಕನ್ನಡ ಜಿಲ್ಲೆಗೆ ಹೊಸ ಎಸ್.ಪಿ ಯಾಗಿ ವರ್ತಿಕಾ ಕಟಿಯಾರ್ ರವರನ್ನು ವರ್ಗಾವಣೆ ಮಾಡಲಾಗಿದೆ. ಜಿಲ್ಲೆಗೆ ಇದೇ ಮೊದಲಬಾರಿ ಮಹಿಳಾ ಎಸ್.ಪಿ ಯಾಗಿ ವರ್ತಿಕಾ ಕಟಿಯಾರ್ ರವರು ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ಇವರು ಮೊದಲು ಧಾರವಾಡ ನಂತರ ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತಿದ್ದರು.

ಧಾರವಾಡದಲ್ಲಿ ಕಳೆದ ವರ್ಷ ಲಾಕ್ ಡೌನ್ ಸಂದರ್ಭದಲ್ಲಿ ದೂರದೂರಿಗೆ ತೆರಳುವ ಜನರಿಗೆ ಸಹಾಯ ಮಾಡುವ ಮೂಲಕ ಎಲ್ಲರ ಮೆಚ್ಚುಗೆಗೆ ಕಾರಣವಾಗಿದ್ದರು.

ಶಿವಪ್ರಕಾಶ್ ದೇವರಾಜು ರವರು ಜಿಲ್ಲೆಗೆ ಬಂದಾಗಿನಿಂದ ದಕ್ಷ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದಾರೆ‌ . ಮಾಧಕ ವಸ್ತುಗಳ ವಿರುದ್ಧ ಕಾರ್ಯಚರಣೆ, ಮಟ್ಕಾ ಕಾರ್ಯಾಚರಣೆ ಯಲ್ಲಿ ಉತ್ತಮ ಹೆಸರನ್ನು ಸಂಪಾದಿಸಿದ್ದಾರೆ. ಇಲಾಖೆಯಲ್ಲಿ ಯಾವುದೇ ವಿವಾಧ ವಿಲ್ಲದೇ ಬ್ರಷ್ಟತನವಿಲ್ಲದೇ ಪ್ರಮಾಣಿಕ ಕರ್ತವ್ಯ ನಿರ್ವಹಿಸಿದ ಅಧಿಕಾರಿಗಳಲ್ಲಿ ಇವರೂ ಒಬ್ಬರು. ಇದೀಗ ಇವರನ್ನು ವರ್ಗಾವಣೆ ಮಾಡಲಾಗಿದ್ದು ಇದುವರೆಗೂ ಯಾವುದೇ ಸ್ಥಾನವನ್ನು ನೀಡಿಲ್ಲ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!