ಕಾರವಾರ :- ಧ್ವಜಾರೋಹಣಕ್ಕೆ ಶಾಲೆಗೆ ತೆರಳುತ್ತಿದ್ದ ಶಿಕ್ಷಕ ರಸ್ತೆ ಅಪಘಾತದಲ್ಲಿ ಸಾವುಕಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ ನಡೆದಿದೆ.
ಗುಡೆಅಂಗಡಿ ಶಾಲೆಗೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಶಿಕ್ಷಕನಿಗೆ ಬುಲೆರೊ ವಾಹನ ಡಿಕ್ಕಿ ಹೊಡೆದ ಪರಿಣಾಮ ಈ ಘಟನೆ ನಡೆದಿದ್ದು ಮೃತ ಶಿಕ್ಷಕ ಗೋಪಾಲ ಪಟಗಾರ(50) ಅಗಿದ್ದು ಈತ ಕುಮಟಾದ ಗುಡೆಅಂಗಡಿ ಸರ್ಕಾರಿ ಶಾಲೆ ಶಿಕ್ಷಕನಾಗಿ ಕಾರ್ಯನಿರ್ವಹಿಸುತಿದ್ದ.ಘಟನೆ ಸಂಬಂಧ
ಕುಮಟಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಥಸಂಚನ ವೇಳೆ ಕುಸಿದು ಬಿದ್ದ ಪಿ.ಎಸ್.ಐ.

ಕಾರವಾರ ನಗರದ ಪೊಲೀಸ್ ಪೆರೇಡ್ ಮೈದಾನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ರವರು “ಸುದೀರ್ಘ ಭಾಷಣ” ಮಾಡುವ ವೇಳೆ ಪಥ ಸಂಚಲ ಮುಗಿಸಿ ಬಿಸಿಲಿನಲ್ಲಿ ನಿರ್ಗಮನ ಪಥಸಂಚಲನದ ಆದೇಶಕ್ಕಾಗಿ ಕಾದು ನಿಂತಿದ್ದ ಪೊಲೀಸ್ ಮಹಿಳಾ ತಂಡದ ನಾಯಕಿ ಕಾರವಾರದ ಸೈಬರ್ ಠಾಣೆಯ ಪಿಎಸ್ಐ ಕೋಕಿಲಾರವರು ತಲೆ ಸುತ್ತಿ ಬಿದ್ದರು.ತಕ್ಷಣ ಸಹ ಸಿಬ್ಬಂದಿ ಗಳು ಅವರನ್ನು ಮೇಲೆತ್ತಿ ಉಪಚರಿಸಿದರು.ನಂತರ ನಿರ್ಗಮನ ಪಥಸಂಚಲನದಲ್ಲಿ ಭಾಗಿಯಾದರು.
ಜಿಲ್ಲಾ ಉಸ್ತುವಾರಿ ಸಚಿವರಿಂದ ದ್ವಜಾರೋಹಣ

77 ನೇ ಸ್ವಾತಂತ್ರ್ಯೋತ್ಸವ ಹಿನ್ನಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಪೊಲೀಸ್ ಪರೇಡ್ ಮೈದಾನದಲ್ಲಿ ಜಿಲ್ಲಾಉಸ್ತುವಾರಿ ಸಚಿವ ಮಂಕಾಳ ವೈದ್ಯರಿಂದ ಧ್ವಜಾರೋಹಣ ನೆರವೇರಿತು. ನಂತರ ಸಚಿವರು ದ್ವಜ ವಂದನೆ ಸ್ವೀಕರಿಸಿದರು. ಬಳಿಕ ಮೈದಾನದಲ್ಲಿ ಪೊಲೀಸ್,ಅರಣ್ಯ, ಹೋಂ ಗಾರ್ಡ್, ಎನ್‌ಸಿಸಿ ಸೇರಿ ವಿವಿಧ ತಂಡಗಳು ಆಕರ್ಷಕ ಪಥಸಂಚಲನ ನಡೆಯಿತು.