ಕಾರವಾರ:- ನಾಳೆ ವಿಧಾನಪರಿಷತ್ ಚುನಾವಣೆ ನಡೆಯಲಿದೆ. ಈ ಹಿನ್ನಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಚುನಾವಣಾ ಕಾವು ಏರಿದ್ದು, ಉತ್ತರ ಕನ್ನಡ ಜಿಲ್ಲೆಯ ಜನಪ್ರತಿನಿಧಿಗಳ ಕುದುರೆ ವ್ಯಾಪಾರದ ಜೊತೆ ರೆಸಾರ್ಟ ರಾಜಕೀಯ ಬಲು ಜೋರಾಗಿದೆ.
ಬಿಜೆಪಿಯ ಗಣಪತಿ ಉಳ್ವೇಕರ್ ,ಕಾಂಗ್ರೆಸ್ ನ ಬೀಮಣ್ಣನವರ ಹಣಾ ಹಣೆ ಬಲು ಜೋರಾಗಿದ್ದು ಹಳಿಯಾಳ ,ದಾಂಡೇಲಿ ಭಾಗದ ಜನಪ್ರತಿನಿಧಿಗಳ ರೆಸಾರ್ಟ ರಾಜಕೀಯ ಪ್ರಾರಂಭವಾಗಿದೆ.

ಕಾಂಗ್ರೆಸ್ ತನ್ನ ಬೆಂಬಲಿತ ಮತದಾರರನ್ನು ಬಿಜೆಪಿ ಕರೀದಿಸದಂತೆ ರೆಸಾರ್ಟ ನಲ್ಲಿ ಇರಿಸಿದೆ. ಇದರ ಜೊತೆಗೆ ಬಿಜೆಪಿ ಸಹ ರೆಸಾರ್ಟ ನಲ್ಲಿ ತಮ್ಮ ಬೆಂಬಲಿತರನ್ನು ಇರಿಸಿದೆ.
ಸದ್ಯ ಜಿಲ್ಲೆಯಲ್ಲಿ ಕಾಂಗ್ರೆಸ್ ,ಬಿಜೆಪಿ ಜಟಾಪಟಿ ಪ್ರತಿಷ್ಟೆ ಪಡೆದುಕೊಂಡಿದ್ದು ಇಬ್ಬರಿಗೂ ಅಸ್ತಿತ್ವದ ಪ್ರಶ್ನೆ ಎಂಬಂತಾಗಿದೆ.
ಜಿಲ್ಲೆಯಲ್ಲಿ ಹಳಿಯಾಳ ಎರಡು ಪಕ್ಷದ ಸಮ ಬಲ ಇದ್ದರೆ, ದಾಂಡೇಲಿ ಕಾಂಗ್ರೆಸ್ ನ ಹಿಡಿತದಲ್ಲಿದೆ. ಸಿದ್ದಾಪುರ,ಮುಂಡಗೋಡು,ಬನವಾಸಿ,ಶಿರಸಿ ಭಾಗದಲ್ಲಿ ಸಮ ಬಲ ಎದ್ದು ಕಾಣುತಿದ್ದು ,ಭಟ್ಕಳ,ಹೊನ್ನಾವರ ಕಾಂಗ್ರೆಸ್ ನ ಒಂದು ಕೈ ಮೇಲಿದೆ. ಕುಮಟಾ,ಅಂಕೋಲ,ಕಾರವಾರ ಎರಡು ಪಕ್ಷದ ಸಮಬಲ ವಿದೆ.ಜೋಯಿಡಾ ಬಿಜೆಪಿ,ಕಾಂಗ್ರೆಸ್ ಹೊಯ್ದಾಟದಲ್ಲಿದೆ.ಯಲ್ಲಾಪುರ ಬಿಜೆಪಿ ಕಪಿ ಮುಷ್ಟಿಯಲ್ಲಿದೆ. ಹೀಗಾಗಿ ಈ ಬಾರಿ ಇಂತವರೇ ಗೆಲ್ಲಬಗುದು ಎಂಬುದು ರಾಜಕೀಯ ಪರಿಣಿತರಿಗೆ ತೊಡಕಾಗಿದೆ. ಆದ್ರೆ ಈ ಚುನಾವಣೆ ಮುಂದಿನ ದಿನದ ದಿಕ್ಸೂಚಿ ಇದ್ದಂತಿದೆ.
ಚುನಾವಣಾ ಸಿದ್ದತೆ ಹೇಗಿದೆ? ಮತದಾರರ ವಿವರ ಇಲ್ಲಿದೆ.
ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ನಾಳೆ ಬೆಳಿಗ್ಗೆ 8ರಿಂದ ಸಂಜೆ 4 ಗಂಟೆಯವರೆಗೆ ಚುನಾವಣೆ ನಡೆಯಲಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಒಟ್ಟು 227 ಗ್ರಾಮ ಪಂಚಾಯತ್ ಮತ್ತು 11 ಸ್ಥಳೀಯ ಸಂಸ್ಥೆಗಳ ಸದಸ್ಯರಿಂದ ಮತದಾನ ನಡೆಯಲಿದೆ.
ಜಿಲ್ಲೆಯಲ್ಲಿ 1380 ಪುರುಷರು ಹಾಗೂ 1534 ಮಹಿಳೆಯರು ಸೇರಿ
ಒಟ್ಟು 2914 ಜನರಿಂದ ಮತದಾನ ಮಾಡಲಿದ್ದಾರೆ
ಜಿಲ್ಲೆಯಲ್ಲಿ ಒಟ್ಟು 238 ಮತಗಟ್ಟೆಗಳಿದ್ದು, ಈ ಪೈಕಿ 28 ಮತಗಟ್ಟೆಗಳು ಸೂಕ್ಷ್ಮ ಹಾಗೂ 210 ಮತಗಟ್ಟೆಗಳು ಸಾಮಾನ್ಯ ಎಂದು ಗುರುತು ಮಾಡಲಾಗಿದೆ.
ಎಲ್ಲಾ ಮತಗಟ್ಟೆಗಳಲ್ಲಿ ಮುಂಜಾಗ್ರತಾ ಕ್ರಮವಾಗಿ 238 ವಿಡಿಯೋಗ್ರಾಫರ್ ಗಳನ್ನು ನೇಮಿಸಿ ವಿಡಿಯೋ ಚಿತ್ರಿಕರಣವನ್ನು ಮಾಡಲಾಗುತಿದ್ದು ,ಮತದಾರರಿಗೆ ನೇರಳೆ ಬಣ್ಣದ ಸ್ಕೆಚ್ ಪೆನ್ನನ್ನು ಮಾತ್ರ ಬಳಸಿ ಮತ ಚಲಾಯಿಸಲು ಅವಕಾಶಮಾಡಿಕೊಡಲಾಗಿದೆ.
ಬೇರೆ ಯಾವುದೇ ಪೆನ್ನು, ಪೆನ್ಸಿಲ್, ಇತರೆ ಸಾಧನವನ್ನು ಬಳಸಿ ಮತ ಚಲಾಯಿಸಿದಲ್ಲಿ ಮತ ಅಸಿಂಧುವಾಗಲಿದೆ.
ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲೂ ಭಿಗಿ ಪೋಲಿಸ್ ಬಂದೋಬಸ್ತ್ ಕಲ್ಪಿಸಲಾಗಿದ್ದು ,ಪ್ರತಿಯೊಂದು ಮತಗಟ್ಟೆಗೂ ಒರ್ವ ಪೊಲೀಸ್ ಕಾನ್ಸಟೇಬಲ್ ಮತ್ತು ಮುಖ್ಯ ಪೊಲೀಸ್ ಕಾನ್ಸಟೇಬಲ್ ನೇಮಕ ಮಾಡಲಾಗಿದೆ.
ಭಟ್ಕಳ ತಾಲ್ಲೂಕಿಗೆ ವಿಶೇಷವಾಗಿ ಒಂದು ಕೆ.ಎಸ್.ಆರ್.ಪಿ. ತುಕಡಿ ನಿಯೋಜನೆ ಮಾಡಲಾಗಿದ್ದು,ಜಿಲ್ಲೆಯ ಉಳಿದ ತಾಲ್ಲೂಕುಗಳಿಗೆ ಒಂದು ಸ್ಟ್ರೈಕಿಂಗ್ ಫೋರ್ಸ್ ನಿಯೋಜನೆ ಮಾಡಲಾಗಿದೆ.
ಜಿಲ್ಲಾಯಾದ್ಯಂತ 4 ಡಿವೈಎಸ್ಪಿ, ತಾಲ್ಲೂಕುವಾರು 16 ಸಿಪಿಐ/ಪಿಐ, 31ಪೋಲಿಸ್ ಸಬ್ ಇನ್ಸ್‌ಪೆಕ್ಟರ್‌ಗಳು,14 ಎಎಸ್ಐಗಳು, 312 ಪೋಲಿಸ್ ಪೇದೆಗಳು, 12 ಡಿಎಆರ್ ಪೇದೆಗಳನ್ನು ಬಂದೋಬಸ್ತ್‌ಗೆ ನಿಯೋಜನೆ ಮಾಡಲಾಗಿದೆ.