Uttrakannada|E-KYC ಮಾಡಿಸದ 42 ಸಾವಿರ ರೈತರಿಗೆ ಈಬಾರಿ ಸಿಗದು ಕಿಸಾನ್ ನಿಧಿ| ಹಣ ಪಡೆಯಲು ಏನು ಮಾಡಬೇಕು ವಿವರ ನೋಡಿ.

TextMaster 06 26 07.59.06 TextMaster 06 26 07.59.06

ಕಾರವಾರ :- ಭೂ ಹಿಡುವಳಿ ಹೊಂದಿದ ರೈತರಿಗೆ ಕೃಷಿ ಚಟುವಟಿಕೆ ನಡೆಸಲು ಪ್ರೋತ್ಸಾಹಿಸಲು ಕೇಂದ್ರ ಸರ್ಕಾರ ಪಿ.ಎನ್ .ಕಿಸಾನ್ ಸಮ್ಮಾನ್ ನಿಧಿಯೋಜನೆಯನ್ನು Kisan Samman Yojane.)ಜಾರಿಗೆ ತಂದಿದೆ.ಈ ಯೋಜನೆಯಲ್ಲಿ ಮೂರು ಕಂತುಗಳಲ್ಲಿ ಆರು ಸಾವಿರ ರುಪಾಯಿಗಳನ್ನು ರೈತರ ಖಾತೆಗೆ ಹಾಕಲಾಗುತ್ತದೆ.

ಆದ್ರೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಮಾತ್ರ ಈವರೆಗೆ 42228 ರೈತರು ಪಿ.ಎಮ್.ಕಿಸಾನ ಸಮ್ಮಾನ ಯೋಜನೆಯಡಿ E-KYC ಮಾಡಿಸಲು ಬಾಕಿ ಉಳಿದಿದೆ. ಇನ್ನು ಜಿಲ್ಲೆಯಲ್ಲಿ ಒಂದುಲಕ್ಷದ ಅರವತ್ತೆಂಟು ಸಾವಿರ ಫಲಾನುಭವಿಗಳಿದ್ದು ,13 ಕಂತುಗಳ ಹಣ ರೈತರ ಖಾತೆಗೆ ಹಾಕಲಾಗಿದೆ. ಆದ್ರೆ ಕೇಂದ್ರ ಸರ್ಕಾರ ವಂಚನೆಯನ್ನು ತಪ್ಪಿಸಲು E-KYC ಯನ್ನು ಕಡ್ಡಾಯ ಗೊಳಿಸಿದೆ.

Advertisement

ಹೀಗಾಗಿ ಹಲವು ರೈತರಿಗೆ ಈ ಬಗ್ಗೆ ಮಾಹಿತಿ ಸಹ ಇಲ್ಲ. ಇನ್ನು 01-04-2023 ರಿಂದ ಬಾಕಿ ಇರುವ 14ನೇ ಕಂತಿನ ಪಿ.ಎಮ್.ಕಿಸಾನ ಸಮ್ಮಾನ ನಿಧಿ ಜುಲೈ ಮೊದಲನೆ ಪಾಕ್ಷಿಕ ಅವಧಿಯಲ್ಲಿ ಬಿಡುಗಡೆಯಾಗುವ ನಿರೀಕ್ಷೆ ಇದ್ದು, E-KYC ಮಾಡಿಸದ ರೈತರಿಗೆ ಮುಂದೆ ₹6000/- ಗಳು ಆರ್ಥಿಕ ನೆರವು ದೊರೆಯುವುದಿಲ್ಲವೆಂದು ಕೇಂದ್ರ ಸರ್ಕಾರದ ಕೃಷಿ ಮತ್ತು ರೈತ ಕಲ್ಯಾಣ ಇಲಾಖೆ ಪ್ರಕಟಿಸಿದೆ.

E-KYC ಮಾಡಿಸಲು 30-06-2023 ಕೊನೆಯ ದಿನಾಂಕವಾಗಿದ್ದು E-KYC ಮಾಡಿಸದಿದ್ದಲ್ಲಿ ರೈತರ ಖಾತೆಗೆ ಹಣ ಜಮೆ ಆಗುವುದಿಲ್ಲ. ಹೀಗಾಗಿ ರೈತ ಫಲಾನುಭವಿಗಳು ಈಗಲೇ E-KYC ಮಾಡಿಸಿಕೊಳ್ಳಬೇಕಿದೆ. ಇದರ ಜೊತೆಗೆ 2019 ಹಿಂದೆ ಆಸ್ತಿ ಕರೀದಿ ಮಾಡಿದವರು ಸಹ ಹೊಸದಾಗಿ ಅರ್ಜಿ ಸಲ್ಲಿಸಿ ತಮ್ಮ ಖಾತೆಗೆ ಹಣ ಪಡೆಯಬಹುದಾಗಿದೆ.

E-KYC ಮಾಡಿಸದಿರುವ ರೈತ ಫಲಾನುಭವಿಗಳು ತಮ್ಮ ಆಧಾರ ಸಂಖ್ಯೆ ಹಾಗೂ ಆಧಾರ ಸಂಖ್ಯೆಗೆ ಜೋಡಣೆಯಾಗಿರುವ ಮೊಬೈಲ್ ಸಂಖ್ಯೆಯೊಂದಿಗೆ E-KYC ಮಾಡಿಸಿಕೊಳ್ಳಬಹುದು.

ಇದನ್ನೂ ಓದಿ:- ನಾಳೆಯಿಂದ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಅವಕಾಶ|ದಾಖಲೆಗಳು ಏನು ಬೇಕು(ಅಕ್ಷರದ ಮೇಲೆ ಕ್ಲಿಕ್ ಮಾಡಿ ಓದಿ)

TextMaster 06 26 08.05.04
  1. ತಮ್ಮ ಸಮೀಪದ ರೈತ ಸಂಪರ್ಕ ಕೇಂದ್ರ, ಗ್ರಾಮ, ಒನ್ ಕೇಂದ್ರ, ಸಾಮಾನ್ಯ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ ಬಯೋ ಮೆಟ್ರಿಕ್‌ ಅಥವಾ ಒ.ಟಿ.ಪಿ ಮೂಲಕ E-KYC ಮಾಡಿಸಬಹುದು.
  2. ತಮ್ಮ ಹತ್ತಿರದ ಅಂಚೆ ಕಛೇರಿಗೆ ಭೇಟಿ ಮಾಡಿ ಪೋಸ್ಟಲ್ ಅಕೌಂಟ್ ಮಾಡುವ ಮೂಲಕ ಪಿ.ಎಮ್.ಕಿಸಾನ E-KYC ತ್ವರಿತವಾಗಿ ಮಾಡಿಕೊಳ್ಳುವುದು.
  3. ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ಪಿ.ಎಮ್.ಕಿಸಾನ MOBILE APP ನ್ನು ನಲ್ಲಿ ಡೌನಲೋಡ್ ಮಾಡಿಕೊಂಡು APP ಮೂಲಕ ಸ್ವತಃ ಫಲಾನುಭವಿಗಳೇ ತಮ್ಮ ಮುಖಚಹರೆ ತೋರಿಸುವ ಮೂಲಕ (FACIAL AUTHENTICATION) E-KYC ಮಾಡಿಕೊಳ್ಳಬಹುದು.

ತ್ವರಿತವಾಗಿ E-KYC ಮಾಡಿಸಿದಲ್ಲಿ ಮಾತ್ರ 14ನೇ ಕಂತಿಗೆ ಅರ್ಹರಾಗಿರುತ್ತಾರೆ ಎಂದು ಉತ್ತರ ಕನ್ನಡ ಜಿಲ್ಲೆಯ ಪ್ರಭಾರ ಜಂಟಿ ಕೃಷಿ ನಿರ್ದೇಶಕರಾದ ಟಿ.ಹೆಚ್.ನಟರಾಜ್ ರವರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:-ಹೊನ್ನಾವರ ಠಾಣೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಪ್ರಕರಣ ಸಿಐಡಿಗೆ. ವಿವರ ನೋಡಿ.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement