ಉತ್ತರ ಕನ್ನಡದಲ್ಲಿ ಮಳೆ ಅಬ್ಬರ|ದೋಣಿ ಮೂಲಕ ರಕ್ಷಣೆ.

TextMaster 07 23 12.43.54 TextMaster 07 23 12.43.54

ಕಾರವಾರ :- ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆಯ ಅಬ್ಬರ ಮುಂದುವರೆದಿದ್ದು ಸಾಕಷ್ಟು ಅನಾಹುತ ತಂದೊಡ್ಡಿದೆ.
ಅಬ್ಬರದ ಮಳೆಗೆ ಜೋಯಿಡಾ ತಾಲೂಕಿನ ಕಾತೇಲಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಕುಂಡಲ್ ಸೇತುವೆ ಮುಳುಗಡೆಯಾಗಿ ಕುಂಡಲ್, ಕುರುವಾಲಿ, ನವರ, ಆಂಬಾಳ ಗ್ರಾಮಗಳು ಸಂಪರ್ಕ ಬಂದ್ ಆಗಿದೆ.
ಗ್ರಾಮಸ್ಥರನ್ನ ದೋಣಿ ಮೂಲಕ ರೆಸ್ಕ್ಯೂ ಮಾಡಲಾಗಿದ್ದು ಬೇರೆಡೆ ಸ್ಥಳಾಂತರಿಸಲಾಗಿದೆ.ಇನ್ನು ಜೋಯಿಡಾದ ಕ್ಯಾಸಲರಾಕ್ ಸಂಪರ್ಕದ ಲಕ್ಷ್ಮೀ ವಾಡಾ ಸೇತುವೆ ಮುಳುಗಡೆಯಾಗಿದ್ದು ,ಸೇತುವೆ ಮುಳುಗಡೆಯಿಂದ ಜೊಯಿಡಾ- ಕ್ಯಾಸಲರಾಕ್ ನಡುವಿನ ಸಂಪರ್ಕ ಕಡಿತವಾಗಿದ್ದು ಸುಮಾರು 2000 ಜನರಿಗೆ ನಗರ ಸಂಪರ್ಕ ಕಡಿತವಾಗಿದೆ.ಕ್ಯಾಸಲರಾಕ್ ಗ್ರಾಮದಲ್ಲಿ 281.6 ಈ ವರ್ಷದ ಅತೀ ಗರಿಷ್ಠ ಮಳೆ ದಾಖಲಾಗಿದೆ.

ತುಂಬಿದ ನದಿ ಅಪಾಯದಲ್ಲಿ ಗ್ರಾಮದ ಜನ.

Advertisement

IMG 20230722 132946

ಕಾಳಿ ,ಗಂಗಾವಳಿ ,ಅಘನಾಶಿನಿ,ಗುಂಡ್ಲಬಾಳ ನದಿ ನೀರು ಅಪಾಯದ ಮಟ್ಟ ಮೀರಿ ಹರಿಯುತಿದ್ದು ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ.

ಕಾರವಾರ ತಾಲೂಕಿನ ಕದ್ರ ಗ್ರಾಮದ ಮಹಾಮಾಯಿ ದೇವಸ್ಥಾನ ಸಂಪೂರ್ಣ ಜಲಾವೃತವಾಗಿದೆ.
ಅಂಕೋಲ ,ಕಾರವಾರ ,ಹೊನ್ನಾವರ ಭಾಗದಲ್ಲಿ ಮಳೆಯ ಅಬ್ಬರಕ್ಕೆ ಹಲವು ಮನೆಗಳಿಗೆ ನೀರು ನುಗ್ಗಿ ಅನಾಹುತ ಸೃಷ್ಟಿಸುತ್ತಿದೆ.

ಕಾರವಾರದ ಅಸ್ನೋಟಿ,ಕದ್ರಾ ಭಾಗದ ತಗ್ಗು ಪ್ರದೇಶಕ್ಕೆ ನೀರು ನುಗ್ಗಿದೆ.ಅಂಕೋಲದ ಬಿಳಿ ಹೊಯ್ಕೆ ಗ್ರಾಮದಲ್ಲಿ ಮನೆಗಳಿಗೆ ನೀರು ನುಗ್ಗಿ ಸಾಕಷ್ಟು ಹಾನಿಯಾಗಿದೆ.ಯಲ್ಲಾಪುರದಲ್ಲಿ ಗಂಗಾವಳಿ ನದಿ ನೀರಿನಿಂದ ಪಣಸಗುಳಿ ಸೇತುವೆ ಜಲಾವೃತವಾಗಿ ಹೆಗ್ಗಾರ- ಗುಳ್ಳಾಪುರ ಗ್ರಾಮದ ಸಂಪರ್ಕ ಕಡಿತವಾಗಿದೆ. ಇನ್ನು ಹೊನ್ನಾವರದ ಗುಂಡ್ಲಬಾಳ ನದಿ ಅಪಾಯ ಮಟ್ಟ ಮೀರಿ ಹರಿಯುತಿದ್ದು ನದಿ ಪಾತ್ರದ ಜನರನ್ನು ಬೇರೆಡೆ ಸ್ಥಳಾಂತರ ಮಾಡಲಾಗುತ್ತಿದೆ.

ತುರ್ತು ರಕ್ಷಣೆಗೆ ತಂಡ.

IMG 20230723 WA0010

ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಜನರನ್ನು ಪ್ರವಾಹದಿಂದ ರಕ್ಷಣೆ ಮಾಡಲು ಎಸ್.ಡಿ.ಆರ್.ಎಫ್. ತಂಡವನ್ನು ಜಿಲ್ಲಾಡಳಿತ ನಿಯೋಜನೆ ಮಾಡಿದೆ. ಕದ್ರಾ, ಅಂಕೋಲ,ಹೊನ್ನಾವರ ಭಾಗದಲ್ಲಿ SDRF ತಂಡ ಮೊಕ್ಕಾಂ ಹೂಡಿದ್ದು ರಕ್ಷಣೆ ಕಾರ್ಯದಲ್ಲಿ ಭಾಗಿಯಾಗುತ್ತಿದೆ.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement