ಕಾರವಾರ:- ವಯುಕ್ತಿಕ ಕಾರಣದಿಂದ ರಾಜಕೀಯ ದಿಂದ ದೂರವಿದ್ದೆ,ಚುನಾವಣೆ ರಾಜಕಾರಣ ,ಪಕ್ಷದ ರಾಜಕಾರಣದಿಂದ ಆರೋಗ್ಯದ ಸಮಸ್ಯೆ ಯಿಂದಾಗಿ ದೂರವಿದ್ದೆ ಅಭಿಮಾನಿಗಳು ಚುನಾವಣೆಗೆ ನಿಲ್ಲಬೇಕು ಎಂದು ಕಾರ್ಯಕರ್ತರಿಂದ ಬೇಡಿಕೆ ಬರುತ್ತಿದೆ ಒತ್ತಡ ಬರುತ್ತಿದೆ,ರಾಜಕಾರಣ ಬೇಡ ಎಂದು ದೂರವಿದ್ದೆ ಎಂದು ಪಕ್ಷ ಹಾಗೂ ರಾಜಕಾರಣದಿಂದ ಮೂರು ವರ್ಷದಿಂದ ದೂರ ಉಳಿದಿದ್ದ ಉತ್ತರ ಕನ್ನಡ ಜಿಲ್ಲೆಯ ಬಿಜೆಪಿ ಸಂಸದ ಅನಂತಕುಮಾರ್ ಹೆಗಡೆ ಹೇಳಿದರು.
ಅನಂತಕುಮಾರ್ ಹೆಗಡೆ ಹೇಳಿದ್ದೇನು ? ವಿಡಿಯೋ ನೋಡಿ.
ಇಂದು ಕಾರ್ಯಕರ್ತರು ಶಿರಸಿಯ ಕೆ.ಹೆಚ್.ಬಿ ಕಾಲೋನಿಯ ಶಿವೋಹಂ ನ ಸಂಸದರ ಮನೆಯ ಮುಂದೆ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವಂತೆ ಕಾರ್ಯಕರ್ತರು ಒತ್ತಾಯಿಸಿದ ಹಿನ್ನಲೆಯಲ್ಲಿ ಮಾಧ್ಯಮದೊಂದಿಗೆ ಮಾನನಾಡಿದ ಅವರು ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಕಾರ್ಯಕರ್ತರು ಒತ್ತಾಯ ಮಾಡಿದಾಗ ತಿರಸ್ಕರಿಸುವುದು ಮೂರ್ಖತನ ವಾಗುತ್ತದೆ ಎಂದು ಲೋಕಸಭೆ ಚುನಾವಣೆಗೆ ಸ್ಪರ್ದೀಸುವ ಇಂಗಿತ ವ್ಯಕ್ತಪಡಿಸಿದರು.
ಇದನ್ನೂ ಓದಿ:- BJP ರಾಜ್ಯ ಉಪಾಧ್ಯಕ್ಷರಾಗಿ ರೂಪಾಲಿನಾಯ್ಕ,ಹರತಾಳು ಹಾಲಪ್ಪ ಆಯ್ಕೆ
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುತ್ತೆ,ಅಲ್ಪ ಸಂಖ್ಯಾತರ ಓಟುಗಳು ಇಲ್ಲದೇ ಕಾಂಗ್ರೆಸ್ ಬದುಕಲು ಸಾಧ್ಯವಿಲ್ಲ..ಯಾವತ್ತೂ ಕಾಂಗ್ರೆಸ್ ಬಹುಸಂಖ್ಯಾತರ ರಾಜಕಾರಣ ಮಾಡಿಲ್ಲ,ಕಾಂಗ್ರೆಸ್ ನವರು ಮನಸ್ಸಿಗೆ ಬಂದಂತೆ ರಾಜಕಾರಣ ಮಾಡುತಿದ್ದಾರೆ, ಎಂದರು.






