BREAKING NEWS
Search

Tourism day:ಗೋಪಿ ಕಣ್ಣಲ್ಲಿ ಕಂಡ “ಉತ್ತರ” ಸೊಬಗು.

127

ಉತ್ತರ ಕನ್ನಡ ಜಿಲ್ಲೆ ಎಂದಾಕ್ಷಣ ಪ್ರಕೃತಿ,ಧಾರ್ಮಿಕತೆಯ ತವರೂರು.ಇಲ್ಲಿನ ಹವಾಗುಣ ಕೂಡ ಅಪೂರ್ವ. ಒಂದೆಡೆ ಕರಾವಳಿ,ಮಲೆನಾಡು,ಬಯಲುಸೀಮೆಗಳನ್ನು ಆಲಂಗಿಸಿ ಪಶ್ಚಿಮ ಘಟ್ಟವನ್ನು ಹೊದ್ದು ನಿಂತಿರುವ ಅಪೂರ್ವ ಜಿಲ್ಲೆ ಉತ್ತರ ಕನ್ನಡ. ಇಲ್ಲಿ ಪರಿಸರ ,ಧಾರ್ಮಿಕ ಪ್ರವಾಸೋಧ್ಯಮ ಉತೃಷ್ಟದಲ್ಲಿದೆ.
ಇಂದು ವಿಶ್ವ ಪ್ರವಾಸೋಧ್ಯಮದ ( world tourism day ) ದಿನ ಉತ್ತರ ಕನ್ನಡ ಜಿಲ್ಲೆಯ ಕುಮಟಾದವರಾದ ಪ್ರಸಿದ್ಧ ಛಾಯಾಗ್ರಾಹಣ ಗೋಪಿ ಜಾಲಿಯವರು ಸೆರೆಹಿಡಿದ ಜಿಲ್ಲೆಯ ಪ್ರಸಿದ್ದ ಸ್ಥಳಗಳ ಕುರಿತು ಒಂದು ಝಲಕ್ ಇಲ್ಲಿದೆ.

ವಿಭೂತಿ ಜಲಪಾತ.

ಪಶ್ಚಿಮ ಘಟ್ಟದ ಅನೇಕ ಜಲಪಾತಗಳಲ್ಲಿ ವಿಭೂತಿ ಜಲಪಾತ ಕೂಡ ಒಂದು. ದೊಡ್ಡ ಬಂಡೆಗಳು ಮತ್ತು ಸುಣ್ಣದ ಕಲ್ಲು ನಿಕ್ಷೇಪಗಳಿಂದ ಆವೃತವಾದ ಈ ಜಲಪಾತವು ಒಂದು ಸುಂದರವಾದ ತಾಣವಾಗಿದೆ. ನೀರು ಹಂತಗಳಲ್ಲಿ ಹರಿಯುತ್ತದೆ, ಇದು ಬೇಸಿಗೆಯಲ್ಲಿ ಸೂಕ್ತವಾದ ಆಶ್ರಯ ತಾಣವಾಗಿದೆ.

ವಿಭೂತಿ ಜಲಪಾತ, ಯಾಣ ರಾಕ್ಸ್ ಮತ್ತು ಮಿರ್ಜನ್ ಕೋಟೆ ಉತ್ತರ ಕನ್ನಡದ ಶಿರಸಿಯಿಂದ ಗೋಕರ್ಣಕ್ಕೆ ರಸ್ತೆ ಪ್ರಯಾಣವು ಪರಿಶೋಧಕರು ಮತ್ತು ಪ್ರವಾಸಿಗರಿಗೆ ಬೈಕ್‌ ಸವಾರರಿಗೆ ಉತ್ತಮವಾಗಿದೆ. ವಿಭೂತಿ ಜಲಪಾತ, ಯಾಣ ಗುಹೆಗಳು ಹಾಗೂ ಸಹಸ್ರಲಿಂಗ ದೇವಾಲಯ ಶಿರಸಿಗೆ ಸಮೀಪದಲ್ಲಿದೆ. ಚಳಿಗಾಲದಲ್ಲಿ ನೀವು ಈ ಪ್ರದೇಶಕ್ಕೆ ಭೇಟಿ ನೀಡುತ್ತಿದ್ದರೆ, ವಿಭೂತಿ ಜಲಪಾತ, ಯಾಣ ಗುಹೆಗಳು ಮತ್ತು ಕಾಡುಗಳಿಗೆ ಭೇಟಿ ನೀಡಬಹುದು.

ಸಾತೋಡಿ ಜಲಪಾತ.


ಜಿಲ್ಲೆಯ ಪ್ರಸಿದ್ಧ ಜಲಪಾತಗಳ ಪಟ್ಟಿಯಲ್ಲಿ ಬರುವ ಮತ್ತೊಂದು ಹೆಸರು ಸಾತೊಡ್ಡಿ ಜಲಪಾತ. ಎತ್ತರದಿಂದ ಕ್ಷೀರಧಾರೆಯಂತೆ ಧುಮಕುವ ನೀರನ್ನು ನೋಡಲು ಎರಡು ಕಣ್ಣು ಸಾಲದು.
ಯಲ್ಲಾಪುರದಿಂದ ಸುಮಾರು 22 ಕಿಲೋಮೀಟರ್‌ ದೂರದಲ್ಲಿದೆ ಸಾತೊಡ್ಡಿ ಜಲಪಾತ ವಿದೆ. ಕಿರಿದಾದ ದಾರಿ, ತಿರುವುಗಳಿಂದ ಕೂಡಿದ ಘಾಟ್‌, ಕಲ್ಲು ಮಣ್ಣುಗಳಿಂದ ಕೂಡಿದ ಕಚ್ಚಾ ರಸ್ತೆಯಾಗಿದ್ದರೂ ಹಚ್ಚ ಹಸುರಿನಿಂದ ಕಂಗೊಳಿಸುವ ಪ್ರಕೃತಿ ಸೌಂದರ್ಯ ಇಲ್ಲಿನ ಸ್ಪೆಷಲ್.

ಮಾಗೋಡು ಪಾಲ್ಸ್.

ಮಾಗೋಡು ಜಲಪಾತ ಯಲ್ಲಾಪುರದಿಂದ ನೈಋತ್ಯದಲ್ಲಿ 20 ಕಿಲೋಮೀಟರ್ ದೂರದಲ್ಲಿದೆ. ಬೇಡ್ತಿ ನದಿ (ಗಂಗಾವಳಿ) ಯು ಸುಮಾರು 200 ಮೀಟರ್ ಎತ್ತರದಿಂದ ಎರಡು ಘಟ್ಟಗಳಲ್ಲಿ ಧುಮುಕುತ್ತದೆ.

ಈ ಜಲಪಾತದ ಮೂಲ ಬೇಡ್ತಿ ನದಿ.ಮಳೆಗಾಲದುದ್ಡಕ್ಕೂ ಹಸಿರು ಕಾವ್ಯ ಮೈದಳೆಯುತ್ತದೆ.ಯಲ್ಲಾಪುರದಿಂದ ೨೦ ಕಿ.ಮೀ ದೂರ.ಜಲಪಾತದ ಬಳಿಯವರೆಗೂ ವಾಹನವನ್ನು ಒಯ್ಯಬಹುದು.ತಂಗುವ ವಿಚಾರವಿದ್ದರೆ ಮತ್ತೆ ಯಲ್ಲಾಪುರ ಪಟ್ಟಣಕ್ಕೆ ಬರಬೇಕಾಗುತ್ತದೆ.

ಶರಾವತಿ ವೀವ್ ಪಾಯಂಟ್.


ಜಿಲ್ಲೆಯ ಹೊನ್ನಾವರ ನಗರದಿಂದ ಸಾಗರ ಮಾರ್ಗಕ್ಕೆ ಹೋಗುವ ಹೆದ್ದಾರಿಯಲ್ಲಿ ಗೇರುಸೊಪ್ಪದಿಂದ ಅಲ್ಪ ದೂರದಲ್ಲಿದೆ. ಶರಾವತಿ ನದಿಯ ವಿಹಂಗಮ ನೋಟ,ಪ್ರಕೃತಿ ಸೌಂದರ್ಯ ಸವಯಬಹುದು.

ಮುರುಡೇಶ್ವರ ಕ್ಷೇತ್ರ.

ಮುರುಡೇಶ್ವರ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನಲ್ಲಿದೆ. ಇಲ್ಲಿರುವ ಮುರುಡೇಶ್ವರ ಸ್ವಾಮಿಯ ದೇವಸ್ಥಾನವು ಧಾರ್ಮಿಕ ಪುಣ್ಯ ಸ್ಠಳವಾಗಿದ್ದು, ಐತಿಹಾಸಿಕವಾಗಿ ಪ್ರಖ್ಯಾತಿಯನ್ನು ಹೊಂದಿದೆ. ಅರಬ್ಬೀ ಸಮುದ್ರದ ತೀರದಲ್ಲಿರುವ ಈ ಊರು, ಪ್ರಪಂಚದ ಅತ್ಯಂತ ಎತ್ತರದ ಶಿವನ ವಿಗ್ರಹಕ್ಕೆ ಹೆಸರುವಾಸಿ ಯಾಗಿದೆ. ಮುರುಡೇಶ್ವರ ಕೇವಲ ಧಾರ್ಮಿಕ ಕ್ಷೇತ್ರ ಮಾತ್ರವಲ್ಲ, ಪ್ರವಾಸಿ ತಾಣವೂ ಆಗಿದೆ.

ನೇತ್ರಾಣಿ ದ್ವೀಪ.


ಮುರುಡೇಶ್ವರ ದಿಂದ ಅರಬ್ಬಿ ಸಮುದ್ರದಲ್ಲಿ ಸಾಗಿದರೇ ಹೃದಯಾಕಾರವಾಗಿ ಕಾಣುವ ಅಪರೂಪದ ದ್ವೀಪವೇ ನೇತ್ರಾಣಿ ದ್ವೀಪ. ಇಲ್ಲಿ ಅಪರೂಪದ ಜಲಚರಗಳು,ಪಕ್ಷಿಗಳ ಜೊತೆ ಸಮುದ್ರದಾಳದಲ್ಲಿ ಸ್ಕೂಬಾ ಡೈವ್ ಮಾಡಿ ಜಲಚರಗಳನ್ನು ವೀಕ್ಷಿಸಬಹುದಾಗಿದೆ. ನೇತ್ರಾಣಿ ಅಡ್ವೆಂಚರ್ಸ್ ಎಂಬ ಜಲಸಾಹಸ ಸಂಸ್ಥೆ ಪ್ರವಾಸಿಗರಿಗೆ ಇಲ್ಲಿ ಸ್ಕೂಬಾ ಡೈವ್ ಮಾಡಲು ವ್ಯವಸ್ಥೆ ಮಾಡುತ್ತದೆ.

ಜೋಯಿಡಾ-ದಾಂಡೇಲಿ ಪರಿಸರ ಪ್ರವಾಸೋಧ್ಯಮ.

ದಾಂಡೇಲಿ ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಒಂದು ಕೈಗಾರಿಕೆ ಸಾಂದ್ರಿತ ಊರು. ಕಾಳಿ ನದಿಯ ದಡದಲ್ಲಿರುವ ಪುಟ್ಟ ನಗರ ಪರಿಸರ ಪ್ರವಾಸೋಧ್ಯಮಕ್ಕೆ ಹೆಸರು ಮಾಡಿದೆ. ಇಲ್ಲಿನ ಗಣೇಶ ಗುಡಿ ಭಾಗದಲ್ಲಿ ಜಲಸಾಹಸ ಕ್ರೀಡೆಗಳು ,ಟ್ರಕ್ಕಿಂಗ್ , ಪ್ರಾಣಿ ಪಕ್ಷಿ ಗಳ ವೀಕ್ಷಣೆಗೆ ಅವಕಾಶಗಳಿವೆ. ಇಲ್ಲಿ ಮೊಸಳೆ ಪಾರ್ಕ ಸಹ ಇದ್ದು ಇಡೀ ತಾಲೂಕು ಪರಿಸರ ಪ್ರವಾಸೋಧ್ಯಮಕ್ಕೆ ಹೆಸರು ಗಳಿಸಿದೆ. ಕಾಳಿ ಹುಲಿ ಸಂರಕ್ಷಿತ ಪ್ರದೇಶವಾಗಿದ್ದು ಆನೆಗಳು,ಹುಲಿ,ಬ್ಲಾಕ್ ಪ್ಯಾಂತರ್ ಸೇರಿದಂತೆ ಹಲವು ಜೀವವೈವಿದ್ಯಗಳ ಆವಾಸ ಸ್ಥಾನ ಸಹ ಹೌದು.

ಜಿಲ್ಲೆಯ ಪ್ರಮುಖ ದೇವಸ್ಥಾನಗಳು.

ಜಿಲ್ಲೆಯಲ್ಲಿ ಸಾಕಷ್ಟು ಪ್ರವಾಸೋಧ್ಯಮ ಹಾಗೂ ಧಾರ್ಮಿಕ ಕ್ಷೇತ್ರಗಳಿವೆ. ಇಲ್ಲಿ ಕೆಲವು ಕ್ಷೇತ್ರದ ಬಗ್ಗೆ ಅಲ್ಪ ಮಾಹಿತಿಗಳನ್ನು ನೀಡಲಾಗಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!