Yallapur|ನಿಯಂತ್ರಣ ತಪ್ಪಿದ ಸಿಮೆಂಟ್ ಲಾರಿ ಹೆದ್ದಾರಿಯಲ್ಲಿ ಪಲ್ಟಿ|ಚಾಲಕ ಪಾರು

Yallapur news (21 December 2025) :-ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ತುಂಬಿದ ಲಾರಿ ಪಲ್ಟಿಯಾಗಿ ಹೆದ್ದಾರಿಯಲ್ಲಿ ಅಪಘಾತವಾದ ಘಟನೆ ಉತ್ತರ ಕನ್ನಡ ಜಿಲ್ಲೆಯ
ಹುಬ್ಬಳ್ಳಿ -ಅಂಕೋಲಾ ರಾಷ್ಟ್ರೀಯ ಹೆದ್ದಾರಿ ಮಾರ್ಗದ ಯಲ್ಲಾಪುರದ (yallapur)ಕೆ ಮಿಲಿನ್ ಹೊಟೇಲ್ ಬಳಿ ನಡೆದಿದೆ.
Yallapur | ksrtc ಬಸ್ ಪಲ್ಟಿ |ವಿಡಿಯೋ ನೋಡಿ
ಬಳ್ಳಾರಿಯಿಂದ ಎಸಿಸಿ ಸಿಮೆಂಟ್ ಚೀಲಗಳನ್ನು ಕೊಂಡೊಯ್ಯುತಿದ್ದ ಲಾರಿ ಇದಾಗುದ್ದು ,ಅಂಕೋಲ -ಹುಬ್ಬಳ್ಳಿ ಮಾರ್ಗದ ಮೂಲಕ ಕೇರಳಕ್ಕೆ ತೆರಳುತಿತ್ತು.
ಯಲ್ಲಾಪುರ ಬಳಿಯ ಹೆದ್ದಾರಿಯಲ್ಲಿ ಹೊಂಡ ವಿದ್ದ ಕಾರಣ ಅದನ್ನು ತಪ್ಪುಸಲು ಹೋದ ಚಾಲಕನಿಗೆ ಲಾರಿಯ ನಿಯಂತ್ರಣ ತಪ್ಪಿದ್ದು, ಅಪಘಾತದ ರಭಸಕ್ಕೆ ಲಾರಿಯೊಳಗಿದ್ದ ಸಿಮೆಂಟ್ ಚೀಲಗಳೆಲ್ಲವೂ ಹೆದ್ದಾರಿ ಮೇಲೆ ಬಿದ್ದವು. ಇದರಿಂದ ಸಂಚಾರಕ್ಕೆ ಅಡ್ಡಿ ಉಂಟಾಯಿತು.
ಸಂಚಾರ ಸುಗಮಗೊಳಿಸಿದ ಪೊಲೀಸರು.

ಅಪಘಾತದಿಂದ ಹೆದ್ದಾರಿ ಸಂಚಾರಕ್ಕೆ ತೊಂದರೆಯಾಗಿದ್ದು ನಂತರ ಸ್ಥಳಕ್ಕೆ ಆಗಮಿಸಿದ ಯಲ್ಲಾಪುರ ಪೊಲೀಸರು ಏಕಮುಖ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು.
ನಂತರ ಕ್ರೇನ್ ಮೂಲಕ ಲಾರಿಯನ್ನು ಮೇಲೆತ್ತಲಾಗಿದೆ. ಅಪಘಾತದಲ್ಲಿ ಲಾರಿ ಚಾಲಕನ ಕೈಗೆ ಚಿಕ್ಕಪುಟ್ಟ ಗಾಯಗಳಾಗಿದ್ದು ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








