Yallapur |ರಿಯಾಲಿಟಿ ಶೋ ನಟ ಬಾವತೀಸ್ ಸಿದ್ದಿ ಅಪಘಾತದಲ್ಲಿ ಸಾವು
Yallapur /ಕಾರವಾರ :- ಖಾಸಗಿ ವಾಹಿನಿಯ ರಿಯಾಲಿಟಿ ಶೋ ಸೆಲಬ್ರೆಟಿ ನಟ ಬಾವತೀಸ್ ಅಪಘಾತದಲ್ಲಿ ಸಾವುಕಂಡಿದ್ದಾರೆ.ಹಳ್ಳಿ ಹೈದ ಪ್ಯಾಟೆಗೆ ಬಂದ ಸೀಸನ್ -3 ರಿಯಾಲಿಟಿ ಶೋನಲ್ಲಿ ಹಳಿಯಾಳ(haliyala) ತಾಲೂಕಿನ ವಾಡಗರಡೊಳ್ಳಿ ನಿವಾಸಿ ಬಾವತೀಸ್ ಭಾಗಿಯಾಗಿದ್ದನು. ಮೂಲತಹ ಸಿದ್ದಿ ಜನಾಂಗದ ಈ ಪ್ರತಿಭೆ ಖಾಸಗಿ ವಾಹಿನಿಯ ರಿಯಾಲಿಟಿ ಶೋ ಮೂಲಕ ಪ್ರಸಿದ್ದಿ ಪಡೆದಿದ್ದನು.
Karnataka| ಜನರ ದುಡ್ಡಲ್ಲಿ ಅಧಿಕಾರಿಗಳ ವಿದೇಶಿ ಪ್ರವಾಸ 20 ಕೋಟಿಗೂ ಅಧಿಕ ವೆಚ್ಚ!
ಯಲ್ಲಾಪುರ (yallapur) ತಾಲೂಕಿನ ಕೋಳಿಕೆರೆ ಸಮೀಪ ನಿಂತಿದ್ದ KSRTC ಬಸ್ ಗೆ ಅತೀ ವೇಗದಲ್ಲಿ ಬಂದು ಡಿಕ್ಕಿ ಹೊಡೆಸಿದ್ದ ಬಾವತೀಸ್ ಸ್ಥಳದಲ್ಲೇ ಸಾವು ಕಂಡಿದ್ದಾನೆ.
ಡಿಕ್ಕಿಹೊಡೆದ ರಭಸಕ್ಕೆ ಟಿವಿಎಸ್ ಮೊಫೆಡ್ ಗೆ ಬೆಂಕಿ ತಗಲಿದ್ದು ಬಸ್ ಚಾಲಕ ,ನಿರ್ವಾಹಕರೇ ಬೆಂಕಿ ನಂದಿಸಿದ್ದರು.
ಸ್ಥಳದಲ್ಲೇ ಕುಸಿದು ಬಿದ್ದಿದ್ದ ಬಾವತೀಸ್ಸಾ ವುಕಂಡಿದ್ದು ,ಘಟನೆ ಸಂಬಂಧ ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಂಕಷ್ಟಗಳ ನಡುವೆ ಬದುಕಿದ ‘ಹಳ್ಳಿ ಹೈದ ಪ್ಯಾಟೆಗೆ ಬಂದ ಸ್ಪರ್ಧಿ ಬಾವತೀಸ್
ಜೀವನದಲ್ಲಿ ಒಂದರ ಹಿಂದೆ ಒಂದಾಗಿ ಬಂದ ಸಂಕಷ್ಟಗಳನ್ನು ಎದುರಿಸುತ್ತಾ ಬದುಕು ಕಟ್ಟಿಕೊಂಡಿದ್ದ ತಾಲೂಕಿನ ಗರಡೊಳ್ಳಿ ಗ್ರಾಮದ ಬಾವತೀಸ್ ಘಾಡಿ (ಸಿದ್ದಿ) ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವುದು ಗ್ರಾಮದಲ್ಲಿ ಆಘಾತ ಮೂಡಿಸಿದೆ. ಯಲ್ಲಾಪುರ ತಾಲೂಕಿನ ಕೋಳಿಕೆರೆ ಸಮೀಪ ನಡೆದ ಅಪಘಾತದಲ್ಲಿ ಅವರ ಜೀವ ಕಳೆದುಕೊಂಡಿದ್ದು, ಸ್ಥಳೀಯರು ದುಃಖ ವ್ಯಕ್ತಪಡಿಸಿದ್ದಾರೆ.
ಬಾವತೀಸ್ ಘಾಡಿ ಅವರು ಜನಪ್ರಿಯ ರಿಯಾಲಿಟಿ ಶೋ ಹಳ್ಳಿ ಹೈದ ಪ್ಯಾಟೆಗ್ ಸೀಸನ್ 3ರಲ್ಲಿ ಭಾಗವಹಿಸಿ ಮೂರನೇ ಸ್ಥಾನ ಪಡೆದು ಗುರುತಿಸಿಕೊಂಡಿದ್ದರು. ಕುಣಿತದ ಚಟಕ್ಕೆ ದಾಸರಾಗಿದ್ದ ಬಡತನದಲ್ಲೇ ಬದುಕು ನೂಕುತಿದ್ದರು.
Yallapur |KSRTC ಬಸ್ ಮತ್ತು ಕಾರಿನ ನಡುವೆ ಅಪಘಾತ |ಚಾಲಕ ಸಾವು
ಮೂರು ವರ್ಷಗಳ ಹಿಂದೆ ಪತ್ನಿ ಅನಾರೋಗ್ಯದಿಂದ ಮೃತಪಟ್ಟಿದ್ದರೆ, ಎರಡು ವರ್ಷಗಳ ಹಿಂದೆ ಮಗ ಬಾವಿಗೆ ಬಿದ್ದು ಸಾವನ್ನಪ್ಪಿದ್ದ. ಇದೀಗ ಬಾವತೀಸ್ ಇಹಲೋಕ ತ್ಯಜಿಸಿದ್ದಾರೆ.
