Yallapur |KSRTC ಬಸ್ ಮತ್ತು ಕಾರಿನ ನಡುವೆ ಅಪಘಾತ |ಚಾಲಕ ಸಾವು.
Yallapur /ಕಾರವಾರ :- ಕೆ.ಎಸ್ .ಆರ್.ಟಿ.ಸಿ ಬಸ್ ಮತ್ತು ಕಾರಿನ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕಾರಿನ ಚಾಲಕ ತೀವ್ರ ಗಾಯಗೊಂಡು ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮೃತಪಟ್ಟಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ (Yellapur ) ತಾಲೂಕಿನ ಮಳಲಗಾವ್ ಬಳಿ ನಡೆದಿದೆ.
ಅಪಘಾತದಲ್ಲಿ ಕುಂದಾಪುರ ಮೂಲದ ಮುಕೇಶ್ ಶೆಟ್ಟಿ ಮೃತಪಟ್ಟ ದುರ್ದೈವಿ ಎಂದು ತಿಳಿದು ಬಂದಿದೆ.
ಬಸ್‌ನಲ್ಲಿದ್ದ ಕೆಲ ಪ್ರಯಾಣಿಕರಿಗೆ ಚಿಕ್ಕಪುಟ್ಟ ಗಾಯಗಳಾಗಿದ್ದು,ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ.
ಇದನ್ನೂ ಓದಿ:-Yallapur| ರಂಜಿತಾ ಹತ್ಯೆ ಬೆಂಕಿಯ ಕಿಡಿಯ ನಡುವೆ ಬಾಲಕನ ಬಾಳಿಗೆ ಬೆಳಕಾದ ಬಿಜೆಪಿ ,ಕಾಂಗ್ರೆಸ್ ನಾಯಕರು |ಏನಿದು ಸುದ್ದಿ?
ಸಿದ್ದಾಪುರದಿಂದ ಬೆಳಗಾವಿಗೆ ಮದುವೆ ಸಂಬಂಧ ಒಪ್ಪಂದದ ನಿಮಿತ್ತ ತೆರಳುತ್ತಿದ್ದ ಕೆ.ಎಸ್.ಆರ್.ಟಿ.ಸಿ (Karnataka State Road Transport Corporation) ಬಸ್ ಹಾಗೂ ಯಲ್ಲಾಪುರ ಕಡೆಯಿಂದ ಶಿರಸಿ ಮಾರ್ಗವಾಗಿ ಬರುತ್ತಿದ್ದ ಕಾರಿನ ನಡುವೆ ಈ ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ:-Yallapur |ನಿದ್ದೆಗೆ ಜಾರಿದ ಬಸ್ ಚಾಲಕ ಧರೆಗೆ ಡಿಕ್ಕಿ
ಘಟನೆ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ಯಲ್ಲಾಪುರ (Yellapur )ಠಾಣೆಯ ಪಿ.ಎಸ್.ಐ ಸಿದ್ದಪ್ಪ ಗುಡಿ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಘಟನೆ ಸಂಬಂಧ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ
