Yallapur |ನಿದ್ದೆಗೆ ಜಾರಿದ ಬಸ್ ಚಾಲಕ ಧರೆಗೆ ಡಿಕ್ಕಿ

Yallapur:-A private tourist bus met with an accident near Yellapur after the driver reportedly fell asleep.
Private tourist bus accident near Gorsagadde on Chavatti–Ummachagi road in Yellapur taluk, Uttara Kannada. Private tourist bus accident near Gorsagadde on Chavatti–Ummachagi road in Yellapur taluk, Uttara Kannada.
ಅಪಘಾತವಾದ ಮೈಸೂರಿನ ಖಾಸಗಿ ಬಸ್

Yallapur |ನಿದ್ದೆಗೆ ಜಾರಿದ ಬಸ್ ಚಾಲಕ ಧರೆಗೆ ಡಿಕ್ಕಿ.

Yallapur news :-ಉತ್ತರ ಕನ್ನಡ ಜಿಲ್ಲೆಯಯಲ್ಲಾಪುರ (yallapur)ತಾಲೂಕಿನ ಚವತ್ತಿ–ಉಮ್ಮಚ್ಚಗಿ ರಸ್ತೆಯ ಗೊರ್ಸಗದ್ದೆ ಬಳಿ ಖಾಸಗಿ ಬಸ್ ಒಂದು ಚಾಲಕ ನಿದ್ದೆಗೆ ಜಾರಿದ ಪರಿಣಾಮ ನಿಯಂತ್ರಣ ತಪ್ಪಿ ಧರೆಗೆ ಡಿಕ್ಕಿ ಹೊಡೆದ ಘಟನೆ ನಡೆದಿದೆ. ಈ ಅಪಘಾತದಲ್ಲಿ ಹಲವಾರು ಪ್ರಯಾಣಿಕರಿಗೆ ಚಿಕ್ಕಪುಟ್ಟ ಗಾಯಗಳಾಗಿದ್ದು, ಬಸ್ ಚಾಲಕನಿಗೆ ಗಂಭೀರ ಗಾಯಗಳಾಗಿವೆ.

Yallapur |ನಾಲಿಗೆ ಹಾಗೂ ನಡವಳಿಕೆಯಲ್ಲಿ ಜವಾಬ್ದಾರಿ ಇರಬೇಕು-ಹೆಬ್ಬಾರ್

ಮೈಸೂರಿನಿಂದ ದಾಂಡೇಲಿ ಪ್ರವಾಸಕ್ಕೆ ತೆರಳುತ್ತಿದ್ದ ಖಾಸಗಿ ಬಸ್‌ನಲ್ಲಿ ಸುಮಾರು 30 ಮಂದಿ ಪ್ರವಾಸಿಗರು ಪ್ರಯಾಣಿಸುತ್ತಿದ್ದರು. ನಿನ್ನೆ ಮೈಸೂರಿನಿಂದ ಹೊರಟ ಬಸ್ ಇಂದು ಯಲ್ಲಾಪುರ ಮಾರ್ಗವಾಗಿ ದಾಂಡೇಲಿಗೆ ತೆರಳುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ.

Advertisement

Private tourist bus accident near Gorsagadde on Chavatti–Ummachagi road in Yellapur taluk, Uttara Kannada.
ಅಪಘಾತವಾದ ಮೈಸೂರಿನ ಖಾಸಗಿ ಬಸ್

ನಿರಂತರವಾಗಿ ಬಸ್ ಚಾಲನೆ ಮಾಡಿದ್ದರಿಂದ ಚಾಲಕ ನಿದ್ದೆಗೆ ಜಾರಿದ್ದೇ ಅಪಘಾತಕ್ಕೆ ಕಾರಣ ಎನ್ನಲಾಗುತ್ತಿದೆ. ಅಪಘಾತದ ಬಳಿಕ ಸ್ಥಳೀಯರು ಹಾಗೂ ಸಹಪ್ರಯಾಣಿಕರು ಗಾಯಗೊಂಡವರನ್ನು ರಕ್ಷಣೆ ಮಾಡಿದ್ದು, ಗಂಭೀರ ಗಾಯಗೊಂಡ ಚಾಲಕನನ್ನು ತಕ್ಷಣವೇ ಯಲ್ಲಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಘಟನೆ ಯಲ್ಲಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಅಪಘಾತದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement