ಈಶ್ವರಪ್ಪನವರು ಯಾರಿಂದ ಮಂತ್ರಿಯಾದ್ರೂ,ಯಾರಿಂದ ಮಂತ್ರಿ ಪದವಿ ಕಳೆದುಕೊಂಡರು ಎಂಬುದಕ್ಕೆ ಉತ್ತರ ಕಂಡುಕೊಳ್ಳಲಿ- ಬಿಜೆಪಿ ಶಾಸಕ ಶಿವರಾಮ್ ಹೆಬ್ಬಾರ್

kannadavani 1 kannadavani 1

ಕಾರವಾರ :-ಕೆಲವರಿಗೆ ಮಾತನಾಡುವ ಚಟ,ಯಾರದ್ದೂ ತಪ್ಪು ತಿದ್ದಿಕೊಳ್ಳೋಕೆ ,ತಮ್ಮ ತಪ್ಪನ್ನೆಲ್ಲಾ ಮುಚ್ಚಿಕೊಳ್ಳೋಕೆ ಯಾರಮೇಲಾದ್ರೂ ಏನಾದ್ರು ಹೇಳಿದ್ರೆ ತಮ್ಮ ತಪ್ಪು ಮುಚ್ಚಿಕೊಂಡು ಹೋಗುತ್ತೆ ಎಂಬುದಿದೆ.ಈಶ್ವರಪ್ಪನವರಿಗೆ ಟಿಕೆಟ್ ನೀಡದಿರುವುದಕ್ಕೆ ನಾವು ಕಾರಣೀಭೂತರಲ್ಲ,
ಆ ನೋವನ್ನ ಜಾಗನೋಡಿ ಪ್ರತಿಕ್ರಿಯೆ ಕೊಡಬೇಕೇ ಹೊರತು ಯಾರಿಂದ ಅವರು ಮಂತ್ರಿಗಳಾದ್ರು,ಯಾರಿಂದ ಮಂತ್ರಿ ಗಿರಿ ಕಳೆದುಕೊಂಡರು ಎಂಬುದಕ್ಕೆ ಉತ್ತರ ಕಂಡುಕೊಳ್ಳುವುದು ಒಳ್ಳೆಯದು ಎಂದು ಮಾಜಿ ಕಾರ್ಮಿಕ ಸಚಿವ ಹಾಲಿ ಬಿಜೆಪಿ ಯಲ್ಲಾಪುರ ಶಾಸಕ ಶಿವರಾಮ್ ಹೆಬ್ಬಾರ್ ಕಿಡಿಕಾರಿದರು. ಇಂದು ಶಿರಸಿಯಲ್ಲಿ ಮಾತನಾಡಿದ ಅವರು

ಮಾಜಿ ಉಪಮುಖ್ಯಮಂತ್ರಿ ಈಶ್ವರಪ್ಪನವರು ಮುಂಬೈ ಟೀಮ್ ನಿಂದ ಬಿಜೆಪಿ ಪಕ್ಷಕ್ಕೆ ಹಿನ್ನಡೆ ಎಂದು ಹೇಳಿಕೆ ನೀಡಿ ವಾಪಾಸ್ ಪಡೆದಿರುವ ವಿಚಾರ ಪ್ರಸ್ತಾಪಿಸಿ ಮಾತನಾಡಿದ ಅವರು
ನಾವು ಈಶ್ವರಪ್ಪನವರ ಮಾತನ್ನು ಯಾವುದೇ ಕಾರಣಕ್ಕೆ ಒಪ್ಪಿಕೊಳ್ಳಲು ಸಾಧ್ಯವಿಲ್ಲ,ನಮಗೆ ಸ್ಪಷ್ಟತೆ ಇದೆ ನಾವು ನೆಡೆದುಕೊಂಡು ಬಂದ ದಾರಿ ಹೋಗುವ ದಾರಿ ಸ್ಪಷ್ಟವಿದೆ.ಈಶ್ವರಪ್ಪನವರು ಬಾಲಕಟ್ಟುಮಾಡುವಂತ ಕೆಲಸ ನಾವು ಮಾಡಿಲ್ಲ ,ಮಾಡುವುದೂ ಇಲ್ಲ.

Advertisement

ಶಬ್ದಗಳನ್ನು ಬಳಸುವಾಗ ಒಳ್ಳೆಯ ಶಬ್ಧ ಬಳಸುವ ಪರಿಪಾಟ ಇಟ್ಟುಕೊಂಡರೇ ಅವರ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು ಎಂದು ಈಶ್ವರಪ್ಪನವರಿಗೆ ಎಚ್ಚರಿಕೆ ನೀಡಿದರು. ಇದನ್ನೂ ಓದಿ:-ಈ ದೇಶದ ಕಾನೂನೇ ಸರಿ ಇಲ್ಲ- ಸಚಿವ ಮಂಕಾಳು ವೈದ್ಯ

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement