ಸರ್ಕಾರಿ ಆಸ್ಪತ್ರೆಗೆ ಬರುವ ಜನರು ಡ್ರಾಮ ಮಾಡಿ ಖಾಸಗಿ ಆಸ್ಪತ್ರೆಗೆ ಹೋಗ್ತಾರೆ- ಸಚಿವರ ಎದುರು ನಾಲಿಗೆ ಹೊರಳಿಸಿದ ಉತ್ತರ ಕನ್ನಡ ಜಿಲ್ಲಾ ಸರ್ಜನ್

TextMaster 08 04 03.00.50 TextMaster 08 04 03.00.50

ಕಾರವಾರ :-ಸರ್ಕಾರಿ ಆಸ್ಪತ್ರೆಗೆ ಬರುವ ಜನರು ಡ್ರಾಮ ಮಾಡಿ ಹೋಗ್ತಾರೆ ,ಇಲ್ಲಿ ಐಸಿಯು ನಲ್ಲಿ ಪೇಷೆಂಟ್ ಇದ್ರೆ ಒಂದೇಸಾರಿ ಮೆಡಿಸಿನ್ ಕೊಡ್ತೀವಿ, ಖಾಸಗಿ ಆಸ್ಪತ್ರೆಯಲ್ಲಿ ಅರ್ಥ ಘಂಟೆಗೊಮ್ಮೆ ಮೆಡಿಸಿನ್ ಕೊಡ್ತಾರೆ ಹೀಗಾಗಿ ಖಾಸಗಿ ಆಸ್ಪತ್ರೆಗೆ ಜನ ಹೋಗುತ್ತಾರೆ ಎಂದು ಕಾರವಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯರ ನೇತ್ರತ್ವದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಜಿಲ್ಲಾ ಸರ್ಜನ್ ಶಿವಾನಂದ ಕುಡ್ತಾಲಕರ್ ವಿವಾದಿತ ಹೇಳಿಕೆ ನೀಡುವ ಮೂಲಕ ಸಭೆಯಲ್ಲಿದ್ದ ಶಾಸಕರು ಹಾಗೂ ಸಚಿವರ ಕೆಂಗಣ್ಣಿಗೆ ಗುರಿಯಾದರು.

ಇಂದು ಆರೋಗ್ಯ ಇಲಾಖೆ ಸಂಬಂಧಿಸಿದಂತೆ ಕುಮಟಾ ಶಾಸಕ ದಿನಕರ್ ಶಟ್ಟಿ ರವರು ಜಿಲ್ಲಾಸ್ಪತ್ರೆಗೆ ಬರುವ ರೋಗಿಗಳಿಗೆ ಚಿಕಿತ್ಸೆ ನೀಡದೇ ಬೇರೆ ಆಸ್ಪತ್ರೆಗೆ ಕಳುಹಿಸಲಾಗುತ್ತಿದೆ.ಹೀಗೆ ದಿನಕ್ಕೆ ಎಷ್ಟು ರೋಗಿಗಳನ್ನು ಬೇರೆಡೆ ಕಳುಹಿಸುತಿದ್ದೀರಿ, ಏನು ಸಮಸ್ಯೆ ಇದೆ ಎಂದು ಕೇಳಿದ ಪ್ರಶ್ನೆ ಗೆ ಜಿಲ್ಲಾ ಸರ್ಜನ್ ಕೊಟ್ಟ ಉತ್ತರವಿದು.

Advertisement

ಜಿಲ್ಲೆಯಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಬೇಕು ಎಂಬ ಕೂಗು ಮೊದಲಿನಿಂದಲೂ ಇದೆ. ಇನ್ನು ಕಾರವಾರದಲ್ಲಿ ಕ್ರಿಮ್ಸ್ ಮೆಡಿಕಲ್ ಕಾಲೇಜು ಇದ್ದು ಇಲ್ಲಿ ಸುಸಜ್ಜಿತ ಆಸ್ಪತ್ರೆ ಸಹ ಇದೆ. ಆದರೇ ಆಸ್ಪತ್ರೆಗೆ ಚಿಕಿತ್ಸೆಗೆ ಬರುವ ರೋಗಿಗಳನ್ನು ಮಣಿಮಾಲ್,ಮಂಗಳೂರಿಗೆ ಕಳುಹಿಸಲಾಗುತ್ತಿದೆ.ಈ ಕುರಿತು ಕುಮಟಾ ಶಾಸಕ ದಿನಕರ್ ಶಟ್ಟಿ ರವರು ಸಭೆಯಲ್ಲಿ ಪ್ರಶ್ನೆ ಮಾಡಿದ್ದರು.

ಆದ್ರೆ ಜಿಲ್ಲಾ ಸರ್ಜನ್ ರವರು ಕೊಟ್ಟ ಉತ್ತರ ಸಭೆಯಲ್ಲಿದ್ದವರನ್ನೇ ದಂಗು ಬಡಿಸುವಂತೆ ಮಾಡಿತ್ತು.
ಜನ ಡ್ರಾಮ ಮಾಡುತ್ತಾರೆ ಎಂಬ ಮಾತಿಗೆ ಜಿಲ್ಲಾ ಉಸ್ತುವಾಗಿ ಸಚಿವರು ಸಹ ತರಾಟೆ ತೆಗೆದುಕೊಂಡರು‌‌.

ಇದನ್ನೂ ಓದಿ:- ಪುರಾಣ ಪ್ರಸಿದ್ದ ಚಂದ್ರಗುತ್ತಿ ರೇಣುಕಾಂಬ ದೇವರನ್ನೇ ಕದಿಯಲು ಹೋದ ಕಳ್ಳರು

ಇನ್ನು ಕಾರವಾರದ ಶಾಸಕ ಸತೀಶ್ ಸೈಲ್ ಸಹ ಜಿಲ್ಲಾ ಸರ್ಜನ್ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿ ಹಿಂದೆ ನೀವು ಸರ್ಕಾರಕ್ಕೆ ಕೊಟ್ಟ ಬಿಲ್ ಗಳಲ್ಲಿ ಹೊಸ ಆಸ್ಪತ್ರೆ ನಿರ್ಮಿಸಬಹುದಿತ್ತು. ವೈದ್ಯಕೀಯ ಆಸ್ಪತ್ರೆಯಲ್ಲಿ ಪ್ರತಿ ವಸ್ತುಗಳ ಮೇಲೆ ದುಪ್ಪಟ್ಟು ಬಿಲ್ ಮಾಡಿ ಪಡೆಯಲಾಗುತ್ತಿದೆ. ಅಂಬುಲೆನ್ಸ್ ಸಹ ಸಮರ್ಪಕವಾಗಿಲ್ಲ ಎಂದು ಜಿಲ್ಲಾಸ್ಪತ್ರೆಯ ಅವ್ಯವಹಾರದ ಬಗ್ಗೆ ತಕರಾರು ತೆಗೆದರು.ನಂತರ ತಾವು ಆಡಿದ ಮಾತಿಗೆ ಸಮಜಾಯಿಸಿ ನೀಡಿದ ಜಿಲ್ಲಾ ಸರ್ಜನ್ ಶಿವಾನಂದ ಕುಡ್ತಾಲಕರ್ ನಾನು ಡಾಮ (D.A.M.A) ಎಂದಿದ್ದೇನೇ ಡ್ರಾಮ ಎಂದಿಲ್ಲ ಡಾಮ ಎಂದರೇ ಡಿಸ್ಟಚಾರ್ಜ ಎಗನೆಸ್ಟ್ ಮೆಡಿಕಲ್ ಅಡ್ವೈಸ್ ಎಂಬುದಕ್ಕೆ ಡಾಮ ಎನ್ನುತ್ತಾರೆ ಎಂದು ತಮ್ಮ ಮಾತಿಗೆ ಸ್ಪಷ್ಟನೆ ನೀಡಿದರು.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement