ಶಿವಮೊಗ್ಗ /ಸೊರಬ:-ರಾಜ್ಯದ ಪುರಾಣ ಪ್ರಸಿದ್ಧ ಮತ್ತು ಐತಿಹಾಸಿಕ ದೇವಸ್ಥಾನ ದಲ್ಲಿ ಒಂದಾದ ಚಂದ್ರಗುತ್ತಿ ಶ್ರೀ ರೇಣುಕಾಂಬ ದೇವಸ್ಥಾನದ (Chandragutti Renukamba temple )ಕಾಣಿಕೆ ಹುಂಡಿ ಮತ್ತು ದೇವರ ಮೂರ್ತಿ ಕಳ್ಳತನಕ್ಕೆ ವಿಫಲ ಯತ್ನ ನಡೆಸಲಾಗಿದ್ದು ,ಬಾಗಿಲಿನ ಬೀಗ ಒಡೆಯಲು ಸಾಧ್ಯವಾಗದೆ ಕಳ್ಳರು ಎಲ್ಲವನ್ನು ಬಿಟ್ಟು ಪರಾರಿಯಾಗಿದ್ದಾರೆ.( Temple theft)
ಇದನ್ನೂ ಓದಿ:-ಹೊಸ ಸಂಸತ್ ಭವನಕ್ಕೆ ನುಗ್ಗಿದ ಗೂಬೆ! ಆಮೇಲೇನಾಯ್ತು ಗೊತ್ತಾ? (ಅಕ್ಷರದ ಮೇಲೆ ಕ್ಲಿಕ್ ಮಾಡಿ)
ಬುಧವಾರ ಸಂಜೆ 6 ಗಂಟೆಗೆ ಪುರೋಹಿತರು ಎಂದಿನಂತೆ ಪೂಜೆ ಮುಗಿಸಿ ಬೀಗ ಹಾಕಿ ತೆರಳಿದ್ದರು. ಆ ನಂತರ ಕಳ್ಳರು ದೇವಸ್ಥಾನಕ್ಕೆ ನುಗ್ಗಿದ್ದು ಕಳ್ಳತನಕ್ಕೆ ಪ್ರಯತ್ನಿಸಿದ್ದಾರೆ.
ಕಳ್ಳರು ಮೊದಲು ಸೂಲದ ಭೀರಪ್ಪ ದೇವಸ್ಥಾನದ ಬಾಗಿಲ ಬೀಗ ಒಡೆದು ಕಳ್ಳತನಕ್ಕೆ ಮುಂದಾಗಿದ್ದಾರೆ. ಅಲ್ಲಿ ಏನು ಸಿಗದಿದ್ದಾಗ ಗುಡ್ಡದ ಮೇಲಿರುವ ರೇಣುಕಾಂಬ ದೇವಿ ದೇವಸ್ಥಾನಕ್ಕೆ ನುಗ್ಗಿದ್ದಾರೆ. ಪೂರ್ವದಲ್ಲಿರುವ ಬಾಗಿಲಿನ ಬೀಗ ಒಡೆದು ಒಳಗೆ ನುಗ್ಗಿದ್ದಾರೆ. ಕಾಣಿಕೆ ಹುಂಡಿ ಹೊತ್ತೊಯ್ಯಲು ಪ್ರಯತ್ನ ಮಾಡಿ ಪಶ್ಚಿಮದ ಬಾಗಿಲಿನಿಂದ ಹುಂಡಿ ಹೊರಗೆ ಕೊಂಡೊಯ್ಯಲು ಯತ್ನಿಸಿದ್ದಾರೆ. ಪೂರ್ವದ ಬಾಗಿಲಿನಿಂದ ಹುಂಡಿ ಕೊಂಡೊಯ್ದರೆ ಮೆಟ್ಟಿಲು ಏರಿ ಬಂದವರಿಗೆ ಕಾಣಿಸಬಹುದು ಎಂದು ಕಳ್ಳರು ಯೋಚಿಸಿದ್ದಾರೆ. ಹಾಗಾಗಿ ಪೂಶ್ಚಿಮದ ಬಾಗಿಲಿನ ಬೀಗ ಮುರಿಯಲು ಮುಂದಾಗಿದ್ದಾರೆ.

ಪರಾರಿಯಾದ ಕಳ್ಳರು!
ದೇವಸ್ಥಾನದ ಮುಂಭಾಗ ಮಲಗುವ ಮಂಜಪ್ಪ ಎಂಬುವವರು ಮೆಟ್ಟಿಲು ಹತ್ತಿ ಬಂದಿದ್ದಾರೆ. ಇದನ್ನು ಗಮನಿಸಿದ ಕಳ್ಳರು ಹುಂಡಿ ಬಿಟ್ಟು, ದೇವಿಯ ಬೆಳ್ಳಿ ವಿಗ್ರಹವನ್ನು ಹೊರ ಆವರಣದಲ್ಲಿ ಇಟ್ಟು ಪರಾರಿಯಾಗಿದ್ದಾರೆ. ದೇವಸ್ಥಾನದ ಸಮೀಪಕ್ಕೆ ಬಂದ ಮಂಜಪ್ಪ ಅವರಿಗೆ ಕಳ್ಳತನದ ಯತ್ನ ಗೊತ್ತಾಗಿದೆ. ಕೂಡಲೆ ಸಂಬಂಧಿಸಿದವರಿಗೆ ವಿಚಾರ ತಿಳಿಸಿದ್ದಾರೆ. ತಹಶೀಲ್ದಾರ್ ಹುಸೇನ್ ಸರಕಾವತ್, ದೇವಾಲಯ ಸಮಿತಿ ಸದಸ್ಯರು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಚಂದ್ರಗುತ್ತಿ ದೇವಸ್ಥಾನ ಪ್ರತಿ ವರ್ಷ ಸರ್ಕಾರಕ್ಕೆ 1.5 ಕೋಟಿ ರೂ. ಅದಾಯ ತಂದುಕೊಡಲಿದೆ. ಆದರೆ ಈ ದೇವಸ್ಥಾನಕ್ಕೆ ಸೂಕ್ತ ಭದ್ರತಾ ವ್ಯವಸ್ಥೆ ಇಲ್ಲ. ಭದ್ರತಾ ಸಿಬ್ಬಂದಿ ನೇಮಿಸಿಲ್ಲ, ಸಿಸಿಟಿವಿಗಳನ್ನು ಅಳವಡಿಸಿಲ್ಲ. ಇದೆಲ್ಲವು ಗೊತ್ತಿರುವುದರಿಂದಲೆ ಹುಂಡಿ ಕಳ್ಳತನಕ್ಕೆ ಯತ್ನಿಸಲಾಗಿದೆ ಎಂದು ಭಕ್ತರು ಆಕ್ರೋಶ ವ್ಯಕ್ತಪಡಿಸುತ್ತಾರೆ. ಸದ್ಯ ಕಳ್ಳರು ದೇವಿಯ ವಿಗ್ರಹದೊಂದಿಗೆ ಕಾಣಿಕೆ ಹುಂಡಿ ಸಹ ಕದ್ದೊಯ್ಯುತಿದ್ದು ಅದೃಷ್ಟವಶಾತ್ ಎಲ್ಲವೂ ಅಲ್ಲಿಯೇ ಉಳಿದಿದ್ದೇ ಪವಾಡ ಎನ್ನುವಂತಾಗಿದೆ.






