ನ್ಯೂ ದೆಹಲಿ:- ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿ ( Prime Minister Narendra Modi) ರವರಿಂದ ದೆಹಲಿಯಲ್ಲಿ ಹೊಸದಾಗಿ ನಿರ್ಮಾಣಗೊಂಡ ಪಾರ್ಲಿಮೆಂಟ್ ( indian parliament)ನನ್ನು ಧಾರ್ಮಿಕ ಕಾರ್ಯದ ಮೂಲಕ ಉದ್ಘಾಟನೆ ನಡೆಸಿದ್ದಾರೆ. ಇದೀಗ ಅಧಿವೇಶನ ಸಹ ನಡೆಯುತ್ತಿದೆ. ಆದ್ರೆ ಇಂದು Barn owl ಪ್ರಭೇದದ ಗೂಬೆಯೊಂದು ತನ್ನ ಬಲಭಾಗದ ರೆಕ್ಕೆಗೆ ಪೆಟ್ಟುಬಿದ್ದ ಪರಿಣಾಮ ಪಾರ್ಲಿಮೆಂಟಿನ ಆವರಣದ ಮರವೊಂದರಿಂದ ಬಿದ್ದು ಇಲ್ಲಿನ ಕೊಠಡಿಯತ್ತ ಸಾಗಿದೆ.ಈ ವೇಳೆ ಇದನ್ನು ಗಮನಿಸಿದ ಪಾರ್ಲಿಮೆಂಟ್ ರಕ್ಷಣಾ ಸಿಬ್ಬಂದಿ Wildlife SOS Rapid Rescue Unit ಗೆ ಕರೆಮಾಡಿ ಕರೆಸಿದ್ದಾರೆ.
ತಕ್ಷಣ ಕಾರ್ಯಪ್ರವೃತ್ತರಾದ ವನ್ಯಜೀವಿ ರಕ್ಷಣಾ ತಂಡ ಈ ಗೂಬೆಯನ್ನು ಹಿಡಿದು ರಕ್ಷಿಸಿದ್ದು ಇದಕ್ಜೆ ಚಿಕಿತ್ಸೆ ನೀಡಿದ್ದಾರೆ. ಇದನ್ನೂ ಓದಿ:- ಹವಾಮಾನ ವರದಿ|ಮಲೆನಾಡಿನಲ್ಲಿ ಮಳೆ ಕುಂಟಿತ ಎಲ್ಲಿ ಹೇಗಿರಲಿದೆ ವಾತಾವರಣ ವಿವರ ನೋಡಿ
ಇನ್ನು ರೆಕ್ಕೆಗೆ ಬಲವಾದ ಪೆಟ್ಟು ಬಿದ್ದಿರುವುದರಿಂದ ಆಹಾರ ಸಹ ಬೇಟೆಯಾಡಲು ಇದರಿಂದ ಸಾಧ್ಯವಾಗದ ಕಾರಣ ಇದು ಚೇತರಿಸಿಕೊಳ್ಳುವ ವರೆಗೂ ತೀವ್ರ ನಿಗಾ ಘಟಕದಲ್ಲಿ ಇಟ್ಟಿದ್ದು ಚೇತರಿಸಿಕೊಂಡ ನಂತರ ವನ್ಯಜೀವಿ ವಲಯಕ್ಕೆ ಬಿಡುವುದಾಗಿ ಮಾಹಿತಿ ನೀಡಿದ್ದಾರೆ.
ಗೂಬೆ ಶುಭ ಫಲವೂ ಅಶುಭವೂ?

ಇನ್ನು ಹೊಸ ಪಾರ್ಲಿಮೆಂಟ್ ಗೆ ಗೂಬೆ ಬಂದಿರುವುದು ಶುಭದ ಸಂಕೇತ ಎಂದು ಕೆಲವರು ಹೇಳಿದರೇ ಇದು ಶುಭ ಎಂದು ಕೆಲವರ ವಾದವಾಗಿದ್ದು ಇದೀಗ ಇದರ ಬಗ್ಗೆ ಚರ್ಚೆ ಶುರುವಾಗಿದೆ.
ಗೂಬೆಯನ್ನು ಲಕ್ಷ್ಮಿ ದೇವಿಯ ವಾಹನವೆಂದು ಪರಿಗಣಿಸಲಾಗಿದೆ. ನಮ್ಮ ಸಮಾಜದಲ್ಲಿ ಗೂಬೆಗಳ ಬಗ್ಗೆ ಅನೇಕ ನಂಬಿಕೆಗಳಿವೆ. ಗೂಬೆಯನ್ನು ಸಾಮಾನ್ಯವಾಗಿ ರಾತ್ರಿಯ ರಾಜ ಎಂದು ಕರೆಯಲಾಗುತ್ತದೆ. ಶಕುನದ ಪ್ರಕಾರ ಗೂಬೆಯ ದೃಷ್ಟಿಯನ್ನು ಕೆಲವು ಸ್ಥಳಗಳಲ್ಲಿ ಮಂಗಳಕರವೆಂದು ಕೆಲವು ಸ್ಥಳಗಳಲ್ಲಿ ಅಶುಭವೆಂದು ಪರಿಗಣಿಸಲಾಗುತ್ತದೆ. ಉದಾಹರಣೆಗೆ, ನೀವು ಪ್ರಯಾಣ ಮಾಡುವ ದಾರಿಯಲ್ಲಿ ಗೂಬೆಯನ್ನು ನೋಡಿದರೆ, ಅದು ಧನ ಪ್ರಾಪ್ತಿಯ ಸಂಕೇತ. ಮತ್ತೊಂದೆಡೆ, ಗೂಬೆ ಮನೆಗೆ ಬಂದರೆ, ಅದನ್ನು ಅಶುಭ ಎಂದು ಪರಿಗಣಿಸಲಾಗುತ್ತದೆ. ಆ ರೀತಿ ಘಟನೆ ನಡೆದರೆ ಅದು ಮನೆಯ ಪ್ರಗತಿಯನ್ನು ನಿಲ್ಲಿಸುತ್ತದೆ ಎಂದು ನಂಬಲಾಗಿದೆ. ಕೆಲವು ಸಮಯದಲ್ಲಿ ಗೂಬೆಯನ್ನು ನೋಡಿದರೆ ಶುಭವೆಂದೂ, ಧನ ಪ್ರಾಪ್ತಿಯಾಗುತ್ತದೆ ಎಂದು ನಂಬಲಾಗಿದೆ.
ಸಂಸತ್ ನಲ್ಲಿ ಕಂಡಿದ್ದು ಬಿಳಿ ಗೂಬೆ!
ಬಿಳಿ ಗೂಬೆ ಕಾಣಿಸಿಕೊಳ್ಳುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಬಿಳಿ ಗೂಬೆಗಳು ವಿರಳವಾಗಿ ಕಂಡುಬರುತ್ತವೆಯಾದರೂ, ಅವು ಕಂಡುಬಂದರೆ, ಜೀವನದ ಸಮಸ್ಯೆಗಳು ಕೊನೆಗೊಳ್ಳುತ್ತವೆ. ನಿಮ್ಮ ಜೀವನ ಸರಿಯಾಗಿ ನಡೆಯದಿದ್ದರೆ ಬಿಳಿ ಗೂಬೆಯನ್ನು ನೋಡುವುದರಿಂದ ಕೆಲವು ಧನಾತ್ಮಕ ಸುದ್ದಿಗಳನ್ನು ನಿರೀಕ್ಷಿಸಬಹುದು ಎನ್ನುತ್ತದೆ ಜ್ಯೋತಿಷ್ಯ. ಬಿಳಿ ಗೂಬೆಯು ಅಗಲಿದವರ ಆತ್ಮದೊಂದಿಗೆ ಸಂಬಂಧ ಹೊಂದಿದೆ. ನೀವು ಬಿಳಿ ಗೂಬೆಯನ್ನು ನೋಡಿದರೆ, ನಿಮ್ಮ ಪೂರ್ವಜರು ನಿಮ್ಮೊಂದಿಗೆ ಇದ್ದಾರೆ ಎಂದರ್ಥ. ಹಾಗಾಗಿ ಭಯಪಡುವ ಅಗತ್ಯವಿಲ್ಲ ಎನ್ನುತ್ತಾರೆ ಹಿರಿಯರು.






