ಹವಾಮಾನ ವರದಿ|ಮಲೆನಾಡಿನಲ್ಲಿ ಮಳೆ ಕುಂಟಿತ ಎಲ್ಲಿ ಹೇಗಿರಲಿದೆ ವಾತಾವರಣ ವಿವರ ನೋಡಿ.

weather report weather report

ರಾಜ್ಯದಲ್ಲಿ ಮುಂಗಾರು ಚುರುಕುಗೊಂಡ ಹಿನ್ನೆಲೆ ಹಲವು ಜಿಲ್ಲೆಗಳಲ್ಲಿ ಮಳೆಯಾಗುತ್ತಿದೆ. ಇಂದು ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣವಿರಲಿದ್ದು, ಮಂಗಳೂರು ಸೇರಿದಂತೆ ಕರಾವಳಿಯ ಭಾಗಗಳಾದ ಉಡುಪಿ ಮತ್ತು ಕಾರವಾರ ಜಿಲ್ಲೆಗಳಲ್ಲಿ ಗುಡುಗು, ಮಿಂಚು ಸಹಿತ ಮಳೆಯಾಗುವ ಸಾಧ್ಯತೆಗಳಿವೆ. ಇದನ್ನೂ ಓದಿ:-ಇಂದಿನ ಅಡಿಕೆ ಧಾರಣೆ.

ಹಲವು ಜಿಲ್ಲೆಯಲ್ಲಿ ಕಳೆದ ಕೆಲ ದಿನಗಳಿಂದ ವಿರಾಮ ಪಡೆದಿದ್ದ ಮಳೆರಾಯ ಮತ್ತೆ ಅರ್ಭಟಿಸಲಿದ್ದಾನೆ. ಕರ್ನಾಟಕದ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಆಗಸ್ಟ್ ಮೂರರಿಂದ ಮಳೆ ಸುರಿಯಲಿದೆ. ಇನ್ನೂ ವಿಜಯಪುರ, ರಾಯಚೂರು, ಬೆಳಗಾವಿ, ಧಾರವಾಡ, ಗದಗ, ಕೊಪ್ಪಳ, ಹಾವೇರಿ, ಬೀದರ್, ಬಾಗಲಕೋಟೆ, ಕಲಬುರಗಿ, ಬಳ್ಳಾರಿ, ಯಾದಗಿರಿ, ಬೆಂಗಳೂರು ನಗರ, ಮೈಸೂರು, ಮಂಡ್ಯ, ಬೆಂಗಳೂರು ಗ್ರಾಮಾಂತರ, ದಾವಣಗೆರೆ, ಚಿತ್ರದುರ್ಗ, ಕೋಲಾರ, ಶಿವಮೊಗ್ಗ, ಹಾಸನ, ಕೊಡಗು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ(IMD) ಮಾಹಿತಿ ನೀಡಿದೆ.

Advertisement

ಎಲ್ಲಿ ಹೆಚ್ಚು ಮಳೆಯಾಗಿದೆ?

ಜೇವರ್ಗಿ, ತಾಳಗುಪ್ಪ, ಸುಳ್ಯ, ಮುಲ್ಕಿ, ಕೋಟ, ಗುಂಜಿ, ಕಮಲಾಪುರ, ಅಫಜಲಪುರ, ಬಿಳಗಿ, ಹಾವೇರಿ, ಸಿದ್ದಾಪುರ, ಕ್ಯಾಸಲ್ ರಾಕ್, ಗೇರುಸೊಪ್ಪ, ಶೃಂಗೇರಿ, ಕಾರ್ಕಳ, ಬೆಳ್ತಂಗಡಿ, ಕದ್ರಾ, ಕೊಟ್ಟಿಗೆಹಾರ, ಕಮ್ಮರಡಿ, ಕೊಪ್ಪ, ಜಯಪುರ, ಕುಂದಾಪುರ, ಕೊಲ್ಲೂರು, ಹೊನ್ನಾವರದಲ್ಲಿ ಮಳೆಯಾಗಿದೆ.

ಬಸವನ ಬಾಗೇವಾಡಿ, ಸೋಮವಾರಪೇಟೆ, ಭಾಗಮಂಡಲ, ಶನಿವಾರಸಂತೆ, ಕಳಸ, ಬಾಳೆಹೊನ್ನೂರು, ಸಕಲೇಶಪುರ, ಹುಂಚದಕಟ್ಟೆ, ಸುಬ್ರಹ್ಮಣ್ಯ, ಉಪ್ಪಿನಂಗಡಿ, ಪುತ್ತೂರು, ಮಂಚಿಕೆರೆ, ಕುಮಟಾ, ಶಿರಾಲಿ, ಮಂಕಿ, ಬೇಲಿಕೇರಿ, ಲೋಂಡಾದಲ್ಲಿ ಮಳೆಯಾಗಿದೆ. ಇದನ್ನೂ ಓದಿ:- ದಸರ ಉತ್ಸವಕ್ಕೆ ದಿನಾಂಕ ನಿಗದಿ| ಹೇಗಿರಲಿದೆ ಈಬಾರಿ ದಸರ ವಿವರ ನೋಡಿ.

ಇಂದು ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 20 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ 21 ಡಿಗ್ರಿ, ಕನಿಷ್ಠ 17 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದೆ.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement