ಯಲ್ಲಾಪುರ:- ಜಿಜೆಪಿ (Bjp)ಬಿಟ್ಟು ಕಾಂಗ್ರೆಸ್ (congress)ಸೇರ್ತಾರೆ ಹೆಬ್ಬಾರ್ ಎನ್ನುವ ಸುದ್ದಿ ಇದೀಗ ದೊಡ್ಡ ಸದ್ದು ಮಾಡುತ್ತಿದೆ. ಆದ್ರೆ ಯಲ್ಲಾಪುರ ಶಾಸಕ ಶಿವರಾಮ್ ಹೆಬ್ಬಾರ್ (Shivaram hebbar) ನಾನು ಪಕ್ಷದಲ್ಲೇ ಇದ್ದೀನಿ ಎಂದು ಒತ್ತಿ ಹೇಳಿದ್ದಾರೆ.
ನನಗೆ ಪಕ್ಷದ ಪದಾಧಿಕಾರಿಗಳ ಮೇಲೆ ಅಸಮದಾನವಿದೆ. ಹಿಂದೆ ಚುನಾವಣೆ ಸಂದರ್ಭದಲ್ಲಿ ನನ್ನ ವಿರುದ್ಧವೇ ಕೆಲಸ ಮಾಡಿ ಸೋಲಿಸಲು ಪ್ರಯತ್ನ ಮಾಡಿದ್ರು.ಆದ್ರೆ ಪಕ್ಷದ ವರಿಷ್ಠರು ಇವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಚುನಾವಣಾ ಸಂದರ್ಭದಲ್ಲಿ ಮಾಡಿದ ದ್ರೋಹ ಸಹಿಸಲು ಆಗದು. ಈ ಕುರಿತು ಎಲ್ಲಿ ದೂರು ನೀಡಬೇಕೋ ದೂರು ನೀಡಿದ್ದೇನೆ. ಕ್ರಮ ಕೈಗೊಳ್ಳುತ್ತಾರೆ ಎಂಬ ವಿಶ್ವಾಸ ಇದೆ. ಹೀಗಾಗಿ ಕಾದು ನೋಡ್ತೀನಿ ನಂತರ ಮುಂದಿನ ನಿರ್ಧಾರ ಮಾಡ್ತೀನಿ ಎಂದ್ರು.
ಪಕ್ಷ ಬಿಟ್ಟರೇ ಯಲ್ಲಾಪುರ ಕ್ಷೇತ್ರಕ್ಕೆ ಕಾಗೀರಿ ಸ್ಪರ್ದೆ!
ಇನ್ನು ಅಡ್ಡಗೋಡೆಮೇಲೆ ದೀಪ ಇಟ್ಟಂತೆ ಮಾತನಾಡುವ ಹೆಬ್ಬಾರ್ ಒಂದುವೇಳೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಕಾಂಗ್ರೆಸ್ ಸೇರಿದರೇ ಯಲ್ಲಾಪುರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಾಗೇರಿಯವರನ್ನು ಕಣಕ್ಕಿಳಿಸಬೇಕು ಎಂಬ ಚರ್ಚೆಗಳು ಪಕ್ಷದ ವಲಯದಲ್ಲಿ ಕೇಳಿ ಬರುತ್ತಿದೆ.ಆದ್ರೆ ಹೆಬ್ಬಾರ್ ಲೋಕಸಭಾ ಚುನಾವಣೆ (Loksabha election ) ಮುಗಿಯುವ ವರೆಗೂ ಪಕ್ಷಕ್ಕೆ ಬೆದರಿಸುವ ತಂತ್ರ ಮುಂದುವರೆಸಲಿದ್ದಾರೆ ಎಂದು ಅವರ ಆಪ್ತ ವಲಯದಲ್ಲಿ ಕೇಳಿ ಬರುತ್ತಿದೆ.
ಹೆಬ್ಬಾರ್ ಗೆ ಉರುಳಾಗಲಿದೆ ನಿರ್ಧಾರ!
ಯಲ್ಲಾಪುರದಲ್ಲಿ (yallapura) ಬಿಜೆಪಿಗೆ ತನ್ನದೇಆದ ಹಿಡಿತ ಇದೆ. ಆದ್ರೆ ಹೆಬ್ಬಾರ್ ರವರು ಪಕ್ಷ ಬಿಟ್ಟರೇ ಕ್ಷೇತ್ರದ ಜನ ಇವರನ್ನು ಮತ್ತೆ ಕೈ ಹಿಡಿತಾರಾ ಎಂಬ ಪ್ರಶ್ನೆ ಇದೆ. ಹೀಗಾಗಿ ಹೆಬ್ಬಾರ್ ಸಹ ಹುಲಿ ಬಂತು ಹುಲಿ ಆಟ ಆಡುತಿದ್ದಾರೆ . ಇನ್ನು ಕೆಲವು ಮೂಲಗಳ ಪ್ರಕಾರ ಪಕ್ಷ ಬಿಟ್ಟು ಹೋಗುವುದು ಸುಳ್ಳು ಎನ್ನಲಾಗುತ್ತಿದೆ. ಕಾಂಗ್ರೆಸ್ ನಲ್ಲಿ ಇವರ ಬಗ್ಗೆ ಹೇಳಿಕೊಳ್ಳುವ ಉತ್ತಮ ಅಭಿಪ್ರಾಯ ಇಲ್ಲ.ಸದ್ಯ ಮಗನ ಭವಿಷ್ಯ ಸಹ ರೂಪಿಸಬೇಕಾದ ಅನಿವಾರ್ಯತೆ ಇವರ ಮೇಲಿದೆ. ಹೀಗಿರುವಾಗ ಪಕ್ಷ ಬಿಟ್ಟು ಹೋದರೇ ದೊಡ್ಡ ನಷ್ಟ ಹೆಬ್ಬಾರ್ ಗೆ ಆಗಲಿದೆ.ಕ್ಷೇತ್ರದಲ್ಲಿ ಇರುವ ತಮ್ಮದೇ ಪಕ್ಷದ ವಿರೋಧಿಗಳನ್ನು ಹೆಣೆಯಲು ಬ್ಲಾಕ್ ಮೇಲ್ ತಂತ್ರ ಉಪಯೋಗಿಸುತಿದ್ದಾರೆ ಎನ್ನುತ್ತದೆ ಪಕ್ಷದ ಮೂಲಗಳು.






