ಕಾರವಾರ:- ಇಂದಿನ ದಿನಗಳಲ್ಲಿ ತಂತ್ರಜ್ಞಾನ ಅಭಿವೃದ್ಧಿಯಾದಂತೆ ಸೈಬರ್ ಅಪರಾಧ ಗಳ cyber crime )ಸಂಖ್ಯೆ ಸಹ ಹೆಚ್ಚಾಗುತ್ತಲೇ ಇದೆ. ಇದರಿಂದಾಗಿ ಅನೇಕ ಜನರು ತೊಂದರೆಗೊಳಗಾಗುತ್ತಿದ್ದಾರೆ. ಸೈಬರ್ ಅಪರಾಧಗಳನ್ನು ಜಾಗೃತಿ ( cyber crime awareness) ಕಾರ್ಯಗಳ ಮೂಲಕ ತಡೆಗಟ್ಟಲು ಪೊಲೀಸ್ ಇಲಾಖೆ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಲೇ ಇದೆ.ಆದ್ರೆ ಜನರಲ್ಲಿ ಇರುವ ಮಾಹಿತಿ ಕೊರತೆಯಿಂದಾಗಿ ಮೋಸ ಹೋಗುವವರ ಸಂಖ್ಯೆ ಸಹ ಹೆಚ್ಚಾಗಿದೆ.
ಆದ್ರೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ (sirsi) ಬನವಾಸಿಯ(Banavasi) ಪೊಲೀಸ್ ಠಾಣೆಯಲ್ಲಿ ಕಾನ್ಸ್ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಹಾವೇರಿ ಮೂಲದ ನಾರಾಯಣ ಎಮ್.ಎಸ್ ಅವರು ತಮ್ಮ ಮಗನ ನಾಮಕರಣ ಸಮಾರಂಭ ಆಹ್ವಾನ ಪತ್ರಿಕೆಯಲ್ಲಿ ಸೈಬರ್ ಅಪರಾಧಗಳು, ತುರ್ತು ಪರಿಸ್ಥಿತಿ ಮತ್ತು ಮಕ್ಕಳ ಸಹಾಯವಾಣಿ, ಹಾಗೂ ಕಳೆದು ಹೋದ ಮೊಬೈಗಳ ದುರ್ಬಳಕೆ ತಡೆಯುವ ಕುರಿತು ಜಾಗೃತಿ ಮೂಡಿಸುವ ಮೂಲಕ ಸಾಮಾಜಿಕ ಕಾಳಜಿ ಮೆರೆದಿದ್ದಾರೆ.
ಈ ಹಿಂದೆ ತಮ್ಮ ಮದುವೆಯ ಆಮಂತ್ರಣ ಪತ್ರಿಕೆಯಲ್ಲೂ ಸಹ ಸೈಬರ್ ಅಪರಾಧಗಳು ಮತ್ತು ಮುನ್ನೆಚ್ಚರಿಕೆ ಕ್ರಮಗಳ ಮೂಲಕ ಜಾಗೃತಿಯನ್ನು ( awareness program) ಮೂಡಿಸಿ ಸಾಮಾಜಿಕ ಕಾಳಜಿ ಮೆರೆದಿದ್ದು ,ಇದಕ್ಕಾಗಿ ಕರ್ನಾಟಕ ಅಚೀವರ್ಸ ಬುಕ್ ಆಫ್ ರೆಕಾರ್ಡ ಪ್ರಶಸ್ತಿ ಪಡೆದಿದ್ದರು.
ಹಾವೇರಿ ಜಿಲ್ಲೆಯ ( Haveri )ತಿಳವಳ್ಳಿ ಗ್ರಾಮದವರು. ನಾರಾಯಣ ಎಂ.ಎಸ್ ರವರರು ಎಂ.ಎ. ಬಿ.ಇಡಿ, ಡಿ.ಇಡಿ ಹಾಗೂ ‘ನಾಟಕ ಕಲೆ’ಯಲ್ಲಿ ಡಿಪ್ಲೋಮಾ ಪದವಿಗಳನ್ನು ಪಡೆದಿದ್ದು ಸುಮಾರು 5 ವರ್ಷಗಳ ಕಾಲ ಶಿಕ್ಷಕರಾಗಿ ಸೇವೆ ಸಲ್ಲಿಸಿ ಕಳೆದ 6 ವರ್ಷಗಳಿಂದ ಉತ್ತರಕನ್ನಡ ಜಿಲ್ಲೆಯಲ್ಲಿ ಪೊಲೀಸ್ ( police) ಕಾನ್ಸ್ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದು ಸದ್ಯ ಬನವಾಸಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ರಂಗ ಕಲಾವಿದರಾದ ಇವರು ಅನೇಕ ನಾಟಕಗಳಲ್ಲಿ ಅಭಿನಯ, ನಾಟಕಗಳ ನಿರ್ದೇಶನ ಹಾಗೂ ತಂತ್ರಜ್ಞರಾಗಿ ಕಲಾ ಸೇವೆಯಲ್ಲೂ ಸಹ ಸೈ ಎನಿಸಿಕಡಿರುವ ಇವರು ನಾಟಕ ವಿಭಾಗದಲ್ಲಿ ರಾಷ್ಟ್ರಮಟ್ಟ, ದಕ್ಷಿಣಭಾರತ ಮಟ್ಟ, ರಾಜ್ಯಮಟ್ಟಗಳಲ್ಲಿ ಪ್ರಶಸ್ತಿಗಳನ್ನು ಪಡೆದಿದ್ದಾರೆ.
ರಂಗಭೂಮಿಯ ಕಲಾಸೇವೆಯನ್ನು ಗುರುತಿಸಿ, ಅನೇಕ ಸಂಘ-ಸಂಸ್ಥೆಗಳು ಯುವ ರಂಗ ನಿರ್ದೇಶಕ’ ‘ಪ್ರಜ್ವಲಿಸುವ ರಂಗ ಪ್ರತಿಭೆ’, ‘ವಿಶಿಷ್ಟ ಸಾಧಕ’ ಹೀಗೆ ವಿಶೇಷವಾಗಿ ಗೌರವಿಸಿ ಸನ್ಮಾನಿತರಾಗಿದ್ದಾರೆ.
ಇದನ್ನೂ ಓದಿ:- ದ್ವಜಾರೋಹಣಕ್ಕೆ ಹೊರಟ ಶಿಕ್ಷಕ ಸಾವು|ಪಥಸಂಚಲನದ ವೇಳೆ ಕುಸಿದು ಬಿದ್ದ PSI
ಪೊಲೀಸ್ ಇಲಾಖೆಯ ತರಬೇತಿ ಅವಧಿಯಲ್ಲಿ ಮಾನ್ಯ ಗೃಹ ಮಂತ್ರಿಗಳಿಂದ ‘ಸರ್ವೋತ್ತಮ ಪ್ರಶಿಕ್ಷಣಾರ್ಥಿ‘ ಪ್ರಶಸ್ತಿ ಪಡೆದಿದ್ದಾರೆ. ಪೊಲೀಸ್ ಇಲಾಖೆಯಂತಹ ಬಿಡುವಿಲ್ಲದ ಇಲಾಖೆಯಲ್ಲಿ ಇದ್ದುಕೊಂಡು ತಮ್ಮ ಖಾಸಗಿ ಬದುಕಿನ ಕಾರ್ಯಕ್ರಮದಲ್ಲಿಯೂ ಕೂಡ ಸಾಮಾಜಿಕ ಜಾಗೃತಿಯನ್ನು ಮೂಡಿಸಲು ಮುಂದಾದ ನಾರಾಯಣ ಎಮ್.ಎಸ್ ಅವರ ಜನಪರ ಕಾಳಜಿಯನ್ನು ಪೊಲೀಸ್ ಇಲಾಖೆಯ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕ ವಲಯದಲ್ಲಿ ವ್ಯಾಪಕವಾಗಿ ಪ್ರಶಂಸೆ ವ್ಯಕ್ತವಾಗಿದ್ದು ಇವರ ಈ ಪುಟ್ಟ ಪ್ರಯತ್ನ ಇದೀಗ ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ.
ಇದನ್ನೂ ಓದಿ:- ಆದಾರ್ Update ಮಾಡಿಸಿಕೊಳ್ಳುವ ಜನರೇ ಹುಷಾರ್! ನಿಮ್ಮ ಖಾತೆಯಿಂದ ಮಾಯವಾಗಲಿದೆ ಹಣ






