Loksabha election:ಪಕ್ಷ ಕಟ್ಟುವಲ್ಲಿ ಕಾಲಿಯಾದ ಸಿಮೆಂಟು ಮರಳು! ಕಾಂಗ್ರೆಸ್ ಜಿಲ್ಲಾಧ್ಯಕ್ಷರ ವಿರುದ್ಧವೇ ಮೂಡಿದ ಅಸಮಧಾನ?

TextMaster 10 28 02.57.17 TextMaster 10 28 02.57.17

ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಚುನಾವಣಾ ಪೂರ್ವಭಾವಿ ಸಭೆಯನ್ನು ಅಂಕೋಲದ ನಾಡವರ ಸಭಾ ಭವನದಲ್ಲಿ ಭಾನುವಾರ ಆಯೋಜನೆ ಮಾಡಲಾಗಿದೆ. ಈ ಸಭೆಗೆ ಲೋಕಸಭಾ ಚುನಾವಣೆಯ( Loksabha election) ವೀಕ್ಷಕರಾಗಿ ನೇಮಕ ಮಾಡಿರುವ ಸಚಿವ ಹೆಚ್.ಕೆ ಪಾಟೀಲ್ ಹಾಗೂ ಸಚಿವ ಜಾರಿಕಿಹೊಳಿ ಸಹ ಬರಲಿದ್ದಾರೆ ಎಂಬ ಮಾಹಿತಿ ಕಾಂಗ್ರೆಸ್ (congress)ಮೂಲಗಳಿಂದ ತಿಳಿದುಬಂದಿದೆ.

ಇನ್ನು ಪೂರ್ವಭಾವಿ ಸಭೆ ಆಯೋಜನೆ ಬೆನ್ನಲ್ಲೇ ಕಾಂಗ್ರೆಸ್ ಪಕ್ಷದ ಮುಖಂಡರಲ್ಲಿ ಅಸಮಾಧಾನ ಹೊರಬಂದಿದ್ದು ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಸಂಘಟನೆ ಶೂನ್ಯವಾಗಿದ್ದು ಜಿಲ್ಲಾಧ್ಯಕ್ಷರ (Congress President )ವಿರುದ್ಧವೇ ಅಸಮಧಾನ ಕೇಳಿಬಂದಿದೆ.

Advertisement

ಪಕ್ಷದ ಸಂಘಟನೆಯಲ್ಲಿ ಜಿಲ್ಲಾಧ್ಯಕ್ಷರು ಸಕ್ರಿಯವಾಗಿ ಇಲ್ಲ, ಎಲ್ಲರನ್ನೂ ಒಗ್ಗೂಡಿಸುವ ಕೆಲಸ ಆಗುತ್ತಿಲ್ಲ, ಅಧ್ಯಕ್ಷರು ಅವರ ಸ್ಥಾನಕ್ಕೆ ಮಾತ್ರ ಅಂಟಿಕೊಂಡಿದ್ದಾರೆ,ಪಕ್ಷದ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ತಮಗಿಚ್ಚೆಯಂತೆ ಕಾರ್ಯನಿರ್ವಹಿಸುತಿದ್ದರೆ ಎಂದು ಕಾಂಗ್ರೆಸ್ ನ ಹೆಸರು ಹೇಳದ ಹಿರಿಯ ಮುಖಂಡರೊಬ್ಬರು ದೂರಿದ್ದಾರೆ. ಇನ್ನು ಈ ಸಭೆಗೆ ಹಲವು ಮುಖಂಡರಿಗೆ ಮಾಹಿತಿಯನ್ನು ಸರಿಯಾಗಿ ನೀಡಿಲ್ಲ ಎಂಬ ದೂರು ಸಹ ಇದೆ.

ಇನ್ನು ಹಾಲಿ ಗೆದ್ದ ಶಾಸಕರಲ್ಲೂ ಸಹ ಅಸಮದಾನಗಳಿದ್ದು ಇದೀಗ ಪೂರ್ವಭಾವಿ ಸಭೆಯತ್ತ ಎಲ್ಲರ ಚಿತ್ತವಿದೆ.

ಭಾನುವಾರ ನಡೆಯುವ ಪೂರ್ಭಭಾವಿ ಸಭೆಯಲ್ಲಿ ಸಚಿವರಾದ ಹೆಚ್.ಕೆ ಪಾಟೀಲ್ , (minister.K patil) ಮಂಕಾಳು ವೈದ್ಯರ ಉಪಸ್ಥಿತಿ ಇದ್ದು ಶಾಸಕರಾದ (MLA) ಭೀಮಣ್ಣ ನಾಯ್ಕ, ಮಾಜಿ ಸಚಿವ ಶಾಸಕ ಆರ್.ವಿ ದೇಶಪಾಂಡೆ, ಶಾಸಕ ಸತೀಶ್ ಸೈಲ್ ಉಪಸ್ಥಿತರಿರುತ್ತಾರೆ ಎಂದು ತಿಳಿದುಬಂದಿದ್ದು ಸಚಿವ ಜಾರಕಿಹೊಳೆಯವರು ಗೈರಾಗುವ ಸಾಧ್ಯತೆಗಳಿವೆ.

ಇದನ್ನೂ ಓದಿ:-

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement