Lokayukta Ride: ಶಿರಸಿಯಲ್ಲಿ ದಾನ ಜಮೀನಿಗೆ ಲಂಚ ಕೇಳಿದ ರಿಜಿಸ್ಟರ್ ಲೋಕಾಯುಕ್ತ ಬಲೆಗೆ.

253

ಕಾರವಾರ:- ದಾನ ನೀಡಿದ ಜಮೀನನ್ನು ನೊಂದಣಿ ಮಾಡಿಕೊಡಲು ಮೂರು ಸಾವಿರ ಲಂಚ ಕೇಳಿದ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ(Sirsi) ಸಬ್ ರಿಜಿಸ್ಟರ್ (Sab register )ರಾಧಮ್ಮ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ಶಿರಸಿಯ ದಾಸನಕೊಪ್ಪದ ಬಸವರಾಜ್ ನಂದಿಕೇಶ್ವರ್ ಮಠ ರವರ ದೂರಿನ ಆಧಾರದಲ್ಲಿ ಲೋಕಾಯುಕ್ತ ಎಸ್ .ಪಿ ಕುಮಾರ್ ಚಂದ್ರ ನೇತ್ರತ್ವದಲ್ಲಿ ದಾಳಿ ನಡೆದಿದೆ.
ಮೂರುಗುಂಟೆ ಜಮೀನನ್ನು ದಾನ ನೀಡಿದ್ದು ಇದನ್ನು ನೊಂದಣಿ ಮಾಡಿಕೊಡಲು ಮೂರು ಸಾವಿರ ಲಂಚ ವನ್ನು ಸಬ್ ರಿಜಿಸ್ಟರ್ ರಾಧಮ್ಮ ಕೇಳಿದ್ದು ಲಂಚದ ಹಣದ ಸಮೇತ ಸಿಕ್ಕಿಬಿದ್ದಿದ್ದಾರೆ. ಘಟನೆ ಸಂಬಂಧ ಕಾರವಾರ ಲೋಕಾಯುಕ್ತ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ರಾಧಮ್ಮನನ್ನು ಹೆಚ್ಚಿನ ತನಿಖೆಗೆ ವಶಕ್ಕೆ ಪಡೆಯಲಾಗಿದೆ.ಕಾರ್ಯಾಚರಣೆಯಲ್ಲಿ ಲೋಕಾಯುಕ್ತ ಸಿಬ್ಬಂದಿಗಳಾದ ಸಂಜುಕುಮಾರ್ ,ಅಲಿ ಮುಂತಾದವರು ಭಾಗಿಯಾಗಿದ್ದರು.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!