ಕಾರವಾರ :- ನಾನು ನನ್ನ ವಿಚಾರವನ್ನ ಎಲ್ಲಿ ಪ್ರಸ್ತಾಪ ಮಾಡಬೆಕೊ ಅಲ್ಲಿ ಹೇಳಿದ್ದೆನೆ,ನಾನು ಕೂಡ ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ, ಸಚಿವನಾಗಿ, ಸಭಾಧ್ಯಕ್ಷನಾಗಿ ಪ್ರಾಮಾಣಿಕ ಸೇವೆಸಲ್ಲಿಸಿದ್ದೇನೆ,ನಾವು ಪಕ್ಷದ ಶಿಸ್ತಿನಿ ಸಿಪಾಯಿ ಆಗಿ ಕೆಲಸ ಮಾಡಿ ಬಂದವರು ಎನ್ನುವ ಮೂಲಕ ಲೋಕಸಭಾ ಚುನಾವಣೆಯಲ್ಲಿ ಉತ್ತರ ಕನ್ನಡ ಕ್ಷೇತ್ರದ ಟಿಕೆಟ್ ಅಕಾಂಕ್ಷಿ ಎಂದು ಪರೋಕ್ಷವಾಗಿ ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದ್ದಾರೆ.
ಕ್ಷೇತ್ರಕ್ಕೆ ಯಾರು ಅಭ್ಯರ್ಥಿ ಆಡುತ್ತಾರೆ ಎಂದು ಪಕ್ಷದ ಕಾರ್ಯಕರ್ತರಿಗೆ ತಿಳಿದಿದೆ.
ಕೆಲವು ವಿಚಾರಗಳನ್ನು ಮಾಧ್ಯಮಗಳ ಮುಂದೆ ಹೇಳುವುದು ಸೂಕ್ತವಲ್ಲ,ಪಕ್ಷ ಯಾರನ್ನ ಅಭ್ಯರ್ಥಿ ಆಯ್ಕೆ ಮಾಡುತ್ತೊ ಅವರ ಪರವಾಗಿ ಎಲ್ಲರೂ ಕೆಲಸ ಮಾಡ್ತಾರೆ.ವರಿಷ್ಠರು ನಿರ್ಧಾರಕ್ಕೆ ನಾನು ಬದ್ಧನಾಗಿದ್ದೆನೆ ಎಂದರು.
ಇದನ್ನೂ ಓದಿ:-ಆಟವಾಡುತ್ತ ನದಿಗೆ ಬಿದ್ದ ಮಗು- ರಕ್ಷಣೆಗಾಗಿ ನದಿಗೆ ದುಮುಕಿದ ಐವರು ಸಾವು
ಇನ್ನು ಸಿದ್ದರಾಮಯ್ಯ ನವರ ಅಲ್ಪಸಂಖ್ಯಾತರ ಓಲೈಕೆ ವಿಚಾರ ವನ್ನು ಖಂಡಿಸಿದ ಅವರು ರಾಜ್ಯದ ಕಾಂಗ್ರೆಸ್ ಸರ್ಕಾರ ಅಲ್ಪಸಂಖ್ಯಾತರ ಓಲೈಕೆ ಮಾಡುವ ರಾಜಕಾರಣ ಮಾಡುತ್ತಿದೆ,ರಾಜಕೀಯ ಮಾಡಲು ಬೇಕಿರುವ ಮತಕ್ಕಾಗಿ ಓಲೈಕೆಯ ರಾಜಕಾರಣ ಮಾಡುತ್ತಿದೆ.
ಅಲ್ಪಸಂಖ್ಯಾತರ ಓಲೈಕೆ ಇವತ್ತಿನಂದಲ್ಲ, ಸ್ವಾತಂತ್ರ್ಯ ಬಂದ ಬಳಿಕನಿಂದಲೂ ಇದನ್ನೆ ಮಾಡುತ್ತಾ ಕಾಂಗ್ರೆಸ್ ಬಂದಿದೆ ,ಓಲೈಕೆ ಹಾಗೂ ತುಷ್ಟಿಕರಣದ ರಾಜಕಾರಣ ಮಾಡಿ ಈ ದೇಶದ ಸ್ಥಿತಿ ಹೀಗೆ ಆಗಿತ್ತು ಮೊದಿಯವರು ಬಂದು ದೇಶದ ಚಿತ್ರಿಕರಣ ಬದಲಾಗಿದೆ.ಸರ್ಕಾರ ಹಿಂದೂ ದೇವಸ್ಥಾನಗಳ ಹಿತರಕ್ಷಣೆ ಮಾಡಬೇಕೆಂದು ಆಗ್ರಹಿಸುತ್ತೆನೆ ಎಂದರು






