ಕಾರವಾರ:- ಉತ್ತರ ಕನ್ನಡ ಜಿಲ್ಲೆಯ ಸಂಸದ ಅನಂತಕುಮಾರ್ ಹೆಗಡೆ( Ananthkumar Hegde) ಕಾಂಗ್ರೆಸ್ ನಾಯಕ ,ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಏಕವಚನ ಸಙಭೋಧನೆಯನ್ನ ಬಿಜೆಪಿಗರೇ ಖಂಡಿಸಿದ್ರು.ಆದ್ರೆ ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ಮಾತ್ರ ಖಂಡಿಸುವುದಿರಲಿ ಸಂಸದರ ಎದರು ತುಟಿ ಬಿಚ್ವಲು ಸಹ ಹೆದರುತ್ತಿದೆ.

ಹೌದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ. ಸಾಯಿಗಾವಂಕರ್ ಇರಲಿ, ಹಾಲಿ ಶಾಸಕ ಭೀಮಣ್ಣ ನಾಯ್ಕ ಹೊರೆತುಪಡುಸಿ ಯಾವ ಜಿಲ್ಲೆಯ ಜನಪ್ರತಿನಿಧಿಯೂ ಸಹ ಖಂಡಿಸುವ ದೈರ್ಯ ಮಾಡದೇ ಇರುವುದು ಜಿಲ್ಲೆಯಲ್ಲಿ ಕಾಂಗ್ರೆಸ್ ಎಷ್ಟು ಅಶಕ್ತವಾಗಿದೆ ಎನ್ನುವುದಕ್ಕೆ ಕೈಗನ್ನಡಿಯಾಗಿದೆ.ಇದನ್ನೂ ಓದಿ:-ರಾಮ ಮಂದಿರವನ್ನು ರಾಜಕೀಯ ವಿಚಾರದ ರೂಪದಲ್ಲಿ ನಾನು ಸ್ವೀಕಾರ ಮಾಡುವುದಿಲ್ಲ- ರಾಘವೇಶ್ವರ ಶ್ರೀ
ಸಿ.ಎಂ ವಿರುದ್ಧ ಅವಹೇಳನಕಾರಿ ಹೇಳಿಕೆ ಸವಾಲ್ ಗೆ ಇತರೆ ಜಿಲ್ಲೆಯಲ್ಲಿ ಕಾಂಗ್ರೆಸ್ ನಾಯಕರು,ಕಾರ್ಯಕರ್ತರು ಪ್ರತಿಭಟನೆ ಮಾಡಿದ್ರು,ಆದ್ರೆ ಜಿಲ್ಲಾ ಕಾಂಗ್ರೆಸ್ ಮಾತ್ರ ಸಿ.ಎಂ ಸಿದ್ದರಾಮಯ್ಯನವರು ಮಾತ್ರ ತಮ್ಮವರಲ್ಲ ಎಂಬುವಂತೆ ಖಂಡಿಸುವ ದೈರ್ಯ ಸಹ ಮಾಡದಿರುವುದು ಜಿಲ್ಲೆಯ ಕಾಂಗ್ರೆಸ್ ನ ದೌರ್ಭಾಗ್ಯವೇ ಎಂಬ ಪ್ರಶ್ನೆ ಏಳುವಂತೆ ಮಾಡಿದೆ.
ಇದನ್ನೂ ಓದಿ:-ರಾಮಮಂದಿರ ಉದ್ಘಾಟನೆ ವೇಳೆ ಡಾ.ಗಜಾನನ ಶರ್ಮಾ ವಿರಚಿತ ಗೀತೆ “ಇನ್ನಷ್ಟುಬೇಕೆನ್ನ ಹೃದಯಕ್ಕೆ ರಾಮ” ಹಾಡು ಪ್ರಸಾರ
ಇನ್ನು ಜಿಲ್ಲಾಧ್ಯಕ್ಷರಿಂದ ಹಿಡಿದು ಹಿರಿಯ ನಾಯಕರು ಸಹ ಸಂಸದ ಹೆಗಡೆ ರವರನ್ನು ಎದುರುಹಾಕಿಕೊಂಡು ಖಂಡಿಸುವ ,ಪ್ರತಿಭಟನೆ ಮಾಡುವ ದೈರ್ಯ ಮಾಡಲಿಲ್ಲ.
ಇನ್ನು ಕೆಲವು ಮೂಲಗಳ ಪ್ರಕಾರ ಸಂಸದರ ಉಪ್ಪಿನ ಋಣ ಈ ನಾಯಕರಿಗೆ ಕಾಡುತ್ತಿದೆ ಹೀಗಾಗಿ ಮೌನ ವಹಿಸಿದ್ದಾರೆ ಎಂದು ಹೇಳುತಿದ್ದಾರೆ. ಇದರ ಜೊತೆಗೆ ಜಿಲ್ಲೆಯಲ್ಲಿ ಕಾಂಗ್ರೆಸ್ ಎಷ್ಟು ಅಶಕ್ತವಾಗಿದೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.
ಇದನ್ನೂ ಓದಿ:- ಜೋಯಿಡಾ|ಮೂಲಭೂತ ಸೌಕರ್ಯದಿಂದ ವಂಚನೆ ಚುನಾವಣೆ ಬಹಿಷ್ಕಾರದ ಎಚ್ಚರಿಕೆ
ಸದ್ಯ ಖಂಡಿಸಿದವರು ಎಂದರೇ ಜಿಲ್ಲಾ ಕಾಂಗ್ರೆಸ್ ನಲ್ಲಿ ಯಾವ ಹುದ್ದೆಯೂ ಇಲ್ಲದೇ ಇರುವ ಜಿಲ್ಲೆಯ , ದೀಪಕ್ ದೊಡ್ಡೂರು , ಶುಂಭು ಶಟ್ಟಿ, ಭಾಸ್ಕರ್ ಪಟಗಾರ್, ಕುಮಟಾದ ಆರ್.ಎಸ್ ನಾಯಕ್ ಎಂಬುವವರು ಮಾತ್ರವಾಗಿದ್ದು ಜನಪ್ರತಿನಿಧಿಗಳಲ್ಲಿ ಶಿರಸಿ ಶಾಸಕ ಭೀಮಣ್ಣ ನಾಯ್ಕ ಮಾತ್ರ ಆಗಿದ್ದು ಖಂಡಿಸಿ ಪ್ರತಿಭಟನೆ ಸಹ ಮಾಡದಷ್ಟು ಜಿಲ್ಲಾ ಕಾಂಗ್ರೆಸ್ ಬರ್ಬಾದ್ ಆಗಿದ್ದು ಮಾತ್ರ ವಿಪರ್ಯಾಸ!






