ಕಾರವಾರ:- ಆರ್ಥಿಕವಾಗಿ (finances problem )ಸಮಸ್ಯೆ ಇರುವ ಕುಟುಂಬಗಳನ್ನು(family) ಗುರಿಯಾಗಿಸಿಟ್ಟುಕೊಂಡು ಮತಾಂತರಕ್ಕೆ ಯತ್ನ ಮಾಡಿದ ಆರು ಜನರನ್ನು ಉತ್ತರ ಕನ್ನಡ ಜಿಲ್ಲೆಯ ಶಿರಸಿ ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ:-Karnataka Dam Water level:ಜನವರಿ ಅಂತ್ಯದಲ್ಲಿ ರಾಜ್ಯದ ಜಲಾಶಯದ ನೀರಿನ ಮಟ್ಟ ಹೀಗಿದೆ ನೋಡಿ.

ಶಿರಸಿಯ (sirsi)ಜಗಳಮನೆ ಗ್ರಾಮದ ಆದರ್ಶ ನಾಯ್ಕ ಮನೆಗೆ ಬಂದಿದ್ದ ತಂಡ ಆರ್ಥಿಕ ಪರಿಸ್ಥಿತಿ ಹಾಗೂ ಆರೋಗ್ಯ ಸರಿ ಆಗಬೇಕಾದ್ರೆ ಕ್ರೈಸ್ತ ಧರ್ಮ ಸ್ವೀಕಾರ ಮಾಡಿ ,ಏಸು ಕ್ರಿಸ್ತ ನಿಮಗೆ ಎಲ್ಲವನ್ನೂ ಕೊಡುತ್ತಾನೆ
ನಿಮ್ಮ ಎಲ್ಲಾ ಕಷ್ಟಗಳು ದೂರ ಆಗುತ್ತದೆ ನಾವು ಕೂಡ ಮತಾಂತರ ಆಗಿದ್ದೇವೆ ಎಂದು ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡಲು ಪ್ರಯತ್ನ ಪಟ್ಟಿದ್ದರು.
ಈ ವೇಳೆ ಆದರ್ಶ ನಾಯ್ಕ ಎಂಬುವವರು ಶಿರಸಿ ಗ್ರಾಮೀಣ ಠಾಣೆ ಪೊಲೀಸರಿಗೆ ಮಾಹಿತಿ ನೀಡಿ ಸ್ಥಳಕ್ಕೆ ಕರೆಸಿದ್ದಾರೆ.
ಇದನ್ನೂ ಓದಿ:-ಶಿರಸಿ ಮಹಿಳೆ ಗ್ಯಾಂಗರೇಪ್ ಪ್ರಕರಣ. ಹಾನಗಲ್ ಸಿಪಿಐ ಶ್ರೀಧರ್ ಕಾನೇಸ್ಟಬಲ್ ಅಮಾನತ್ತು.
ಸ್ಥಳಕ್ಕೆ ಬಂದ ಪೊಲೀಸರು(police) ಆರು ಜನರನ್ನು ಬಂಧಿಸಿದ್ದಾರೆ.ಆರು ಜನರಲ್ಲಿ ನಾಲ್ವರು ಹಾವೇರಿ ,ಇಬ್ಬರು ಉತ್ತರ ಕನ್ನಡ ಜಿಲ್ಲೆಯವರಾಗಿದ್ದು
ಪರಮೇಶ್ವ ನಾಯ್ಕ್, ಸುನೀತಾ ನಾಯ್ಕ್, ಧನಂಜಯ್ ಶಿವಣ್ಣ, ಶಾಲಿನಿ ರಾಣಿ ,ಕುಮಾರ ಲಮ್ಮಾಣಿ, ತಾರಾ ಲಮ್ಮಾಣಿ ಬಂಧಿತರಾದವರಾಗಿದ್ದಾರೆ. ಘಟನೆ ಸಂಬಂಧ ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






