BREAKING NEWS
Search

ಶಿರಸಿ ಮಹಿಳೆ ಗ್ಯಾಂಗರೇಪ್ ಪ್ರಕರಣ. ಹಾನಗಲ್ ಸಿಪಿಐ ಶ್ರೀಧರ್ ಕಾನೇಸ್ಟಬಲ್ ಅಮಾನತ್ತು.

136

ಹಾವೇರಿ ,ಜನವರಿ 16- ಹಾನಗಲ್ ಮಹಿಳಾ ದೌರ್ಜನ್ಯ ,ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯಲೋಪ ಮತ್ತು ವಿಳಂಬ ಧೋರಣೆ ತೋರಿದ ಹಿನ್ನಲೆಯಲ್ಲಿ ಹಾನಗಲ್‌ ಪೊಲೀಸ್‌ ಠಾಣೆ ಇನ್‌ಸ್ಪೆಕ್ಟರ್‌ ಶ್ರೀಧರ್‌ ಎಸ್‌.ಆರ್‌. ಮತ್ತು ಕಾನ್‌ಸ್ಟೆಬಲ್‌ ಇಲಿಯಾಜ್‌ ಶೇತಸನದಿ ಅಮಾನತ್ತು ಮಾಡಿ ಎಸ್ಪಿ ಅಂಶುಕುಮಾರ್‌ ಆದೇಶ ಮಾಡಿದ್ದಾರೆ.

ಜನವರಿ 10 ರಂದು ರೂಂ ಬಾಯ್ ನೀಡಿದ ದೂರಿನ ನೈತಿಕ ಪೊಲೀಸಗಿರಿ ಪ್ರಕರಣ ದಾಖಲಾಗಿತ್ತು. ಅದರೆ
ಜನವರಿ 11 ರಂದು ನ್ಯಾಯಾದೀಶರ ಮುಂದೆ ಹೇಳಿದ ಹೇಳಿಕೆ ಆಧರಿಸಿ,7 ಜನರು ಸಾಮೂಹಿಕ ಅತ್ಯಾಚಾರ ಕೇಸ್ ದಾಖಲಾಗಿತ್ತು. ಪ್ರಕರಣ ಮಾಹಿತಿ ಸಂಗ್ರಹಿಸುವಲ್ಲಿ ವೈಫಲ್ಯ, ಮತ್ತು FIR ದಾಖಲಿಸುವಲ್ಲಿ ನಿರ್ಲಕ್ಷ್ಯ ಮತ್ತು ಆರೋಪಿಗಳನ್ನ ಬಂಧಿಸುವಲ್ಲಿ ವಿಳಂಬ ಆರೋಪದಡಿ ಅಮಾನತು ಮಾಡಿ ಆದೇಶ ಮಾಡಿದ್ದಾರೆ.

ಇದನ್ನೂ ಓದಿ:-ರಾಮಮಂದಿರ ಉದ್ಘಾಟನೆ ವೇಳೆ ಡಾ.ಗಜಾನನ ಶರ್ಮಾ ವಿರಚಿತ ಗೀತೆ “ಇನ್ನಷ್ಟುಬೇಕೆನ್ನ ಹೃದಯಕ್ಕೆ ರಾಮ” ಹಾಡು ಪ್ರಸಾರ

ಅಲ್ಲದೆ ಹಾನಗಲ್ ಗ್ಯಾಂಗ್ ರೇಪ್ ಪ್ರಕರಣದ 8ನೇ ಆರೋಪಿ‌ಯನ್ನ ಹಾನಗಲ್ ಪೊಲೀಸರು ಬಂದಿದ್ದಾರೆ. 8ನೇ ಆರೋಪಿ ಅಕ್ಕಿಆಲೂರಿನ ಮಫೀದ್‌ ಓಣಿಕೇರಿ 23 ವರ್ಷದ ಯುವಕನ್ನ ಬಂಧಿಸಲಾಗಿದೆ. ಅಮಾನತ್ತು ಆದ ಸಿಪಿಐ ಈ ಹಿಂದೆ ಉತ್ತರ ಕನ್ನಡ ಜಿಲ್ಲೆಯ ವಿವಿಧ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಉತ್ತಮ ಕಾರ್ಯದ ಮೂಲಕ ಹೆಸರು ಮಾಡಿದ್ದ ಸಿಪಿಐ ಇದೀಗ ಕರ್ತವ್ಯ ಲೋಪದಡಿ ಅಮಾನತ್ತುಆಗಿದ್ದಾರೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!