ಕಾರವಾರ :- ಚುನಾವಣೆಗೆ ಸ್ಪರ್ಧಿಸಲು ( Loksabha election contest )ಯಾರಾದ್ರೂ ಯುವಕರು ತುಂಬ ಸಶಕ್ತರಾಗಿದ್ದರೆ ಬನ್ನಿ ,ಇಂದೆ ಖುರ್ಚಿ ಮುಂದೆ ಇಟ್ಟು ಹೊಗ್ತೆನಿ ಧಮ್ ಇದ್ರೆ ಮುಂದೆ ಬನ್ನಿ ಎಂದು ಸಭೆಯಲ್ಲಿ ಟೆಬಲ್ ಮೇಲೆ ಖುರ್ಚಿ ಇಟ್ಟು ಯುವಕರಿಗೆ ಹಾಗೂ ಆಕಾಂಕ್ಷಿಗಳಿಗೆ ಸಂಸದ ಅನಂತಕುಮಾರ್ ಹೆಗಡೆ ಸವಾಲು ಹಾಕಿದ್ರು.
ಉತ್ತರ ಕನ್ನಡ ಜಿಲ್ಲೆಯ ಭಟ್ಕಳ (Bhatkal) ತಾಲೂಕಿನ ಬೆಳಕೆ ಶಕ್ತಿ ಕೇಂದ್ರದ ಕಾರ್ಯರ್ತರ ಸಭೆಯಲ್ಲಿ ಅನಂತ ಕುಮಾರ ಹೆಗಡೆ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ಸಂಸತ್ ಚುನಾವಣೆಗೆ (samsath election )ಸ್ಪರ್ಧಿಸಲು ಧಮ್ ಇದ್ರೆ ಮುಂದೆ ಬನ್ನಿ
ಅನಿವಾರ್ಯವಾಗಿ ನಾನು ಈ ಬಾರಿ ಇಲ್ಲಿ ಚುನಾವಣೆಗೆ ಸ್ಪರ್ಧೆ ಮಾಡಬೇಕಿದೆ.
ನಂಗೆ ರಾಜಕೀಯ ಬೇಡ, ಚುನಾವಣೆಗೆ ಸ್ಪರ್ದೆ ಮಾಡಲ್ಲ ಅಂತಾ ನೇರವಾಗಿ ಹೇಳಿದ್ದೆ,ಆದ್ರೂ ಕೇಲವರು ನನ್ನ ಬಳಿ ಬಂದೂ ಸ್ಪರ್ಧೆ ಮಾಡಲು ಒತ್ತಾಯ ಮಾಡಿದ್ರು,ಹೇಗೋ ಯು ಟರ್ನ್ ಮಾಡ್ಕೊಂಡ ಮತ್ತೆ ರಾಜಕೀಯದಲ್ಲಿ ಮುಂದುವರೆಯುತ್ತಿದ್ದೇನೆ.ನಾನು ರಾಜಕಾರಣಿಯಾಗಿ ಹುಟ್ಟಿಲ್ಲ, ನಾನು ರಾಜಕಾರಣಿಯಾಗಿ ಸಾಯುವುದಿಲ್ಲ,ರಾಜಕಾರಣದಲ್ಲಿ ಮುಂದುವರೆಯುವ ಅನಿವಾರ್ಯತೆಯೂ ನಮಗಿಲ್ಲ.
ಇದನ್ನೂ ಓದಿ:-ಗೀತ ಶಿವರಾಜ್ ಕುಮಾರ್ , ಬಿಕೆ ಹರಿಪ್ರಸಾದ್ ವಿರುದ್ಧ ಸಿಡಿದ ನಾಮಧಾರಿ ಸ್ವಾಮೀಜಿ! ಏನಂದ್ರು ?
ರಾಜಕಾರಣ ಮಾಡುವುದು ಅಷ್ಟು ಸುಲಭದ ಕೆಲಸ ಅಲ್ಲ,ಹಾಗಾಗಿದ್ರೆ ಎಲ್ರೂ ರಾಜಕಾರಣ ಮಾಡುತ್ತಿದ್ರು.ನಾನು ಚಾಲೆಂಜ್ ಮಾಡುತ್ತೆನೆ ಯಾರಾದ್ರೂ ಉತ್ತರ ಕುಮಾರರು ಸ್ಪರ್ಧೆಗೆ ರೆಡಿ ಇದ್ರೆ ಬನ್ನಿ.ಈ ಕ್ಷೇತ್ರದ ಅರಿವೇ ಇಲ್ಲದವರು ಪಾರ್ಲಿಮೆಂಟ್ ಚುನಾವಣೆ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ.ಎಷ್ಟೊ ಜನರಿಗೆ ಕಿತ್ತೂರು, ಖಾನಾಪೂರ ನಕ್ಷೆಯಲ್ಲಿ ಎಲ್ಲಿ ಬರುತ್ತೆ ಅನ್ನೊದೆ ಗೊತ್ತಿಲ್ಲ,ಚುನಾವಣೆಗೆ ಸ್ಪರ್ಧಿಸಲು ಯಾರಾದ್ರೂ ಯುವಕರು ತುಂಬ ಸಶಕ್ತರಾಗಿದ್ದರೆ ಬನ್ನಿ ಇಂದೆ ಖುರ್ಚಿ ಮುಂದೆ ಇಟ್ಟು ಹೊಗ್ತೆನಿ ಧಮ್ ಇದ್ರೆ ಮುಂದೆ ಬನ್ನಿ, ಭಟ್ಕಳದ ಇವತ್ತಿನ ರಾಜಕೀಯ ಪರಿಸ್ಥಿತಿ ಕಪ್ಪೆ ತುಲಾಭಾರ ಆಗಿದೆ
ಯಾರಾದ್ರೂ ಮುಂದೆ ಹೊರಟ್ರೆ ಕಾಲು ಹಿಡಿದು ಎಳೆಯುವುದು,ಆಷಾಡ ಭೂತದಿಂದ ನಾವೆಲ್ಲರೂ ಹೋರಬರಬೇಕಿದೆ.ಚುನಾವಣೆ ಎಂಬುವುದು ಪ್ರಜಾಪ್ರಭುತ್ವದ ಯುದ್ದ ಇದ್ದಂಗೆ.
ನಾನು ಸೋಲಲು ಒಂದೇ ಒಂದು ಮತ ಸಾಕು ಕಣ್ರಿ,ಅವನ್ಯಾರು ಅವನ ಬಳಿ ಎಷ್ಟು ಮತ ಇದೆ ಅಂತಾ ಮನಸಿನಲ್ಲಿಟ್ಟು ಚುನಾವಣೆ ಮಾಡಿದ್ರೆ ಕಷ್ಟ ಎಲ್ಲರೂ ಒಂದಾಗಬೇಕಿದೆ ಮುಂದಿನ ಲೋಕಸಭಾ ಚುನಾವಣೆಗೆ ಬಿಜೆಪಿ ಗೆಲ್ಲಿಸಬೇಕಿದೆ ಎಂದರು.






