ಕಾರವಾರ :- ನಾನು ಸೋತಿದ್ದಕ್ಕೆ ನೋವಾಗಲಿಲ್ಲ , ಸಂಸದ ಅನಂತಕುಮಾರ್ ಹೆಗಡೆ ಪ್ರಚಾರಕ್ಕೆ ಬಾರದೇ ಇರುವುದಕ್ಕೆ ನೋವಾಗಿದೆ ಎಂದು ಕಾರವಾರದ ಮಾಜಿ ಶಾಸಕಿ ಬಿಜೆಪಿ ರಾಜ್ಯ ಉಪಾಧ್ಯಕ್ಷೆ ರೂಪಾಲಿ ನಾಯ್ಕ ಸಂಸದ ಅನಂತಕುಮಾರ್ ಹೆಗಡೆ ವಿರುದ್ಧ ಅಸಮಧಾನದ ನೋವನ್ನ ಬಹಿರಂಗವಾಗಿ ಸಂಸದರ ಮುಂದೆ ಹೇಳಿಕೊಂಡರು.
ಮಂಗಳವಾರ ಕಾರವಾರದ ಬಿಜೆಪಿ ಕಚೇರಿಯಲ್ಲಿ ಕಾರ್ಯಕರ್ತರ ಸಭೆ ಯಲ್ಲಿ ಮಾತನಾಡಿದ ಅವರು
ವಿಧಾನಸಭೆ ಚುನಾವಣೆ ವೇಳೆ ಒಂದು ಬಾರಿ ಸಂಸದರು ಬಂದ ಹೋಗಿದ್ರೆ ಕಾರವಾರದಲ್ಲಿ (karwar) ಬಿಜೆಪಿ ಗೆಲ್ಲುತ್ತಿತ್ತು,ಈ ಮಾತನ್ನ ನಾನು ಹೇಳುತ್ತಿಲ್ಲ ಇಡೀ ಕಾರವಾರದ ಜನ ಹೇಳುತ್ತಿದ್ದಾರೆ.ಅನಂತ ಕುಮಾರ್ ಹೆಗಡೆ ಹಿಂದೆ ಅವರದ್ದೆ ಆದ ಕಾರ್ಯಕರ್ತರ ಪಡೆ ಇದೆ.
ಇದನ್ನೂ ಓದಿ:-ಅಪರೂಪದ ಬೃಹತ್ ಹಿಮಾಲಯನ್ ಗ್ರಿಫನ್ ಓಲ್ಚರ್ ರಣಹದ್ದು ಕಾರವಾರದಲ್ಲಿ ಪ್ರತ್ಯಕ್ಷ|ವಿಶೇಷ ಏನು ಗೊತ್ತಾ?
ವಿಧಾನ ಸಭೆ ಚುನಾವಣೆಯಲ್ಲಿ ಅವರ ಬರದಕ್ಕೆ ನಮಗೆ ಹಿನ್ನಡೆ ಆಯ್ತು.ಈಗ್ಲಾದ್ರೂ ನಮ್ಮ ಪಕ್ಷಕ್ಕೆ ಕಚೇರಿ ಬಂದು ಕಾರ್ಯಕರ್ತರ ಸಭೆಗೆ ಕರೆದಿದಕ್ಕೆ ಅಭಿನಂದನೆ ಎಂದರು.
ಅನಂತಕುಮಾರ್ ಹೆಗಡೆ (annanthkumar hegde) ಸಕ್ರಿಯವಾಗಿರದಿದ್ದಕ್ಕೆ ನಾವು ಆಕಾಂಕ್ಷಿ ಆಗಿದ್ದೆ, ಆದ್ರೆ ಈಗ ಅವರು ಸಕ್ರಿಯವಾಗಿ ಕೇಲಸ ಮಾಡುತ್ತಿದ್ದಾರೆ, ನಾನು ಆಕಾಂಕ್ಷಿ ಅಲ್ಲ,ನಾನು ಯಾವತ್ತೂ ಅನಂತ ಕುಮಾರ್ ಹೆಗಡೆ ಗೆ ಟಿಕೆಟ್ ತಪ್ಪಿಸುವ ಪ್ರಯತ್ನ ಮಾಡಿಲ್ಲ,ಅನಂತ ಕುಮಾರ್ ಹೆಗಡೆ ಮತ್ತೆ ಸಕ್ರಿಯ ರಾಜಕಾರಣಕ್ಕೆ ಬಂದಿದಕ್ಕೆ ಖುಷಿಯಾಗಿದೆ ಎಂದರು.






