ಬೆಂಗಳೂರಿನಿಂದ ಕಾರವಾರಕ್ಕೆ ಬಂದ ಅರ್ಚಕರು ಕಾಳಿ ಸಂಗಮದಲ್ಲಿ ವಿಶೇಷ ಪೂಜೆ! ಕಾರಣ ಗೊತ್ತಾ?

Bangalur Special puja offering for rain in Kali Sangam at Karwar Bangalur Special puja offering for rain in Kali Sangam at Karwar
GILANI super market karwar KSRTC bus stand near Karwar

ಕಾರವಾರ :- ಬೆಂಗಳೂರಿನ (Bangalore )ಮುನೇಶ್ವರ ದೇವಸ್ಥಾನದ ಶಿವಶಂಕರ ಗುರುಗಳ ನೇತೃತ್ವದಲ್ಲಿ ಉತ್ತರ ಕನ್ನಡ ಜಿಲ್ಲೆಯ ಕಾರವಾರದ (Karwar) ಕಾಳಿನದಿ kali river) ಸಂಗಮದಲ್ಲಿ ಜೋಡಿ ಈಶ್ವರ ಲಿಂಗವನ್ನು ತಂದು ನದಿ ಹಾಗೂ ಸಮುದ್ರ ಸೇರುವ ಸಂಗಮದ ಮಧ್ಯದಲ್ಲಿ ದೋಣಿಯಲ್ಲಿ ಕುಳಿತು ಜಲಾಭಿಷೇಕ ನಡೆಸಿ ಸಂಗಮದ ತೀರದಲ್ಲಿ ಮರಳಿನ ಮೂಲಕ ಈಶ್ವರ ಲಿಂಗ ನಿರ್ಮಿಸಿ ಪೂಜೆ ಸಲ್ಲಿಸಿ ಅರಬ್ಬಿ ಸಮುದ್ರ ಹಾಗೂ ಕಾಳಿ ನದಿಗೆ ಬಾಗಿನ ಅರ್ಪಣೆ ಮಾಡಿದ್ದಾರೆ.

ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಉತ್ತಮ ಮಳೆಯಾಗಬೇಕು ಎಂಬ ಕಾರಣದಿಂದ ಮಾರ್ಚ ನಲ್ಲಿ ಕಾಳಿ ಸಂಗಮಕ್ಕೆ ಆಗಮಿಸಿದ್ದ ಬೆಂಗಳೂರಿನ ಮುನೇಶ್ವರ ದೇವಸ್ಥಾನದ ಶಿವಶಂಕರ ಗುರುಗಳ ಪುರೋಹಿತರ ತಂಡ ಕಾಳಿ ನದಿ ನೀರಿನ ಮಧ್ಯದಲ್ಲಿ ಹೋಮ ಹವನ ನೆರವೇರಿಸಿದ್ದರು. ಇದರ ತರುವಾಯ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಭಾಗದಲ್ಲಿ ಉತ್ತಮ ಮಳೆಯಾದ ಕಾರಣ ಇದೀಗ ಶುಕ್ರವಾರ 25 ಅರ್ಚಕರೊಂದಿಗೆ ಆಗಮುಸಿದ ಅವರು ಉತ್ತಮ ಮಳೆಯಾಗಿದ್ದಕ್ಕೆ ಜೋಡಿ ಲಿಂಗ ತಂದು ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದರು.

Advertisement

ಇನ್ನು ಈ ಕುರಿತು ಮಾತನಾಡಿದ ಮುನೇಶ್ವರ ದೇವಸ್ಥಾನದ ಶಿವಶಂಕರ ಗುರುಗಳು ಈ ಹಿಂದೆ ಸಹ ಇದೇ ರೀತಿಯಲ್ಲಿ ಪೂಜೆ ಸಲ್ಲಿಸಿದ್ದು ,ಉತ್ತಮ ಮಳೆಯಾಗಿದೆ .ಈ ವರ್ಷವೂ ಸಹ ಉತ್ತಮ ಮಳೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement