TSS ಆಡಳಿತಾಧಿಕಾರಿ ನೇಮಕಕ್ಕೆ ತಡೆ- ಮತ್ತೆ ಗೊಂದಲದಲ್ಲಿ TSS?

Cancellation of appointment order of TSS Administrator Cancellation of appointment order of TSS Administrator

ಕಾರವಾರ :-ರಾಜ್ಯದ ಪ್ರತಿಷ್ಟಿತ ಸಜಕಾರಿ ಸಂಘವಾಗಿರುವ ಉತ್ತರ ಕನ್ನಡ ಜಿಲ್ಲೆಯ ಶಿರಸಿ (sirsi)ಟಿ.ಎಸ್.ಎಸ್ (TSS)ಆಡಳಿತಾಧಿಕಾರ ನೇಮಕಕ್ಕೆ ತಡೆಯಾಜ್ಞೆ ಸಿಕ್ಕಿದ್ದು ಹಿಂದಿನ ಆಡಳಿತ ಮಂಡಳಿಯ ಗೋಪಾಲಕೃಷ್ಣ ವೈದ್ಯ ತಂಡಕ್ಕೆ ಅಲ್ಪಾವಧಿಯ ಜಯ ಸಿಕ್ಕಿದೆ.

ನಿಯಮಾವಳಿ ಪ್ರಕಾರ ಟಿ.ಎಸ್.ಎಸ್ ಆಡಳಿತ ಮಂಡಳಿಯ ಚುನಾವಣೆ ನಡೆದಿಲ್ಲ ಎಂದು ಕೆಲವು ದಿನದ ಹಿಂದೆ ಆಡಳಿತ ಮಂಡಳಿ ಅಸಿಂಧು ಎಂದು ಜಿಲ್ಲಾ ಸಹಕಾರಿ ನಿಬಂಧಕರು ತೀರ್ಪು ನೀಡಿದ್ದರು.

Advertisement

ತೀರ್ಪು ಪ್ರಶ್ನಿಸಿ, ಬೆಳಗಾವಿಯ ಸಹಕಾರಿ ಜಂಟಿ ನಿಬಂಧಕರಲ್ಲಿ ದೂರಿನ ಅರ್ಜಿ ವಿಚಾರಣೆ ನಡೆದಿದ್ದು
ಆಡಳಿತಾಧಿಕಾರಿ ನೇಮಕಕ್ಕೆ ಸಹಕಾರಿ ನಿಬಂಧಕರು ತಡೆಯಾಜ್ಞೆ ನೀಡಿದ್ದಾರೆ.

ಈ ಹಿನ್ನಲೆಯಲ್ಲಿ ಆಡಳಿತಾಧಿಕಾರಿ ನಾಯ್ಕ ರಿಂದ ಗೋಪಾಲಕೃಷ್ಣ ವೈದ್ಯ ರವರು ಅಧಿಕರಾರ ಹಸ್ತಾಂತರ ಪಡೆದರು.

ಇನ್ನು ಸಹಕಾರಿ ಸಂಘಗಳಲ್ಲಿ ಸರ್ಕಾರದ ಹಸ್ತಕ್ಷೇಪ ವಿರೋಧಿಸಿ, ನಗರದಲ್ಲಿ ಬೃಹತ್ ರ್ಯಾಲಿಯನ್ನು ಸಹ ಆಯೋಜಿಸಲಾಗಿದ್ದು ,ಟಿ.ಎಸ್.ಎಸ್ ಆವರಣ ದಿಂದ ಸಹಾಯಕ ಆಯುಕ್ತರ ಕಚೇರಿ ವರೆಗೆ ಬೃಹತ್ ಪ್ರತಿಭಟನೆ ನಡೆಸಲಾಯಿತು.

ಸದ್ಯ ಆಡಳಿತ ವರ್ಗ ಹಾಗೂ ದಾವೆ ಹೂಡಿದ ಸದಸ್ಯರ ನಡುವೆ ಕಾನೂನು ಹೋರಾಟ ಮುಂದುವರೆದಿದ್ದು ಇದರ ಪರಿಣಾಮ ಕೋಟ್ಯಾಂತರ ವಹಿವಾಟು ಮಾಡುವ ಸಹಕಾರಿ ಸಂಸ್ಥೆಯೊಂದು ಇದೀಗ ಜನರ ನಂಬಿಕೆಯಿಂದ ವಿಮುಖವಾಗುವಂತಾಗಿದೆ.

ಈಗಲೂ ಮುಂದೆ ವ್ಯತಿರಿಕ್ತ ಆದೇಶ ಬರುವ ಸಾಧ್ಯತೆಗಳಿದ್ದು ಮುಂದೆ ಏನಾಗಲಿದೆ ಎಂಬುದು ಸದಸ್ಯರ ಆತಂಕಕ್ಕೆ ಕಾರಣವಾಗಿದೆ.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement