ಕಾರವಾರ:- ಶಿರಸಿ ಟಿಎಸ್‌ಎಸ್ ಆಡಳಿತ ಮಂಡಳಿ ನಿರ್ದೇಶಕರ ಆಯ್ಕೆ ಚುನಾವಣಾ ಪ್ರಕ್ರಿಯೆಯಲ್ಲಿ ಲೋಪದೋಷದ ಹಿನ್ನೆಲೆಯಲ್ಲಿ ಸಹಕಾರ ಸಂಘದ ಆಡಳಿತ ಮಂಡಳಿ ಆಯ್ಕೆಯಾದ 20-8-2023 ರ ಚುನಾವಣಾ ಫಲಿತಾಂಶವನ್ನು ರದ್ದು ಮಾಡಿ ನ್ಯಾಯಾಲಯ ಆದೇಶದ ಮಾಡಿದೆ.
ಈ ಹಿನ್ನೆಲೆಯಲ್ಲಿ ಆಡಳಿತ ಮಂಡಳಿಯ ನಿರ್ದೇಶಕರ ಅಧಿಕಾರ ರದ್ದಾಗಿದೆ.
ಹಿನ್ನೆಲೆ ಏನು?
20-8-2023 ರಂದು ಶಿರಸಿ ತೋಟಗಾರ್ಸ್ ಕೋ-ಆಪರೇಟಿವ್ ಸೇಲ್ ಸೊಸೈಟಿಯಲ್ಲಿ ಚುನಾವಣೆ ನಡೆದಿದ್ದು ,2023-24ರಿಂದ 2027-28 ನೇ ಸಾಲಿನವರೆಗಿನ ಅವಧಿಗೆ ಆಡಳಿತ ಮಂಡಳಿಗೆ ನಿರ್ದೇಶಕರ ಸ್ಥಾನಕ್ಕೆ ಚುನಾವಣೆ ನಡೆಸಲಾಗಿತ್ತು.
ಈ ಚುನಾವಣೆಯಲ್ಲಿ ಆಯ್ಕೆಯಾದ ನಿರ್ದೇಶಕರ ಪಟ್ಟಿಯನ್ನು ರಿಟರ್ನಿಂಗ್ ಅಧಿಕಾರಿಗಳು ಘೋಷಣೆ ಮಾಡಿದ್ದರು. ಆಯ್ಕೆಯ ಚುನಾವಣಾ ಪ್ರಕ್ರಿಯೆಯಲ್ಲಿ ತೀವ್ರ ಲೋಪದೋಷಗಳಾಗಿವೆ ಎಂದು ಸಂಘದ ಸದಸ್ಯರಾದ ಗಣಪತಿ ಶೇಷಗಿರಿ ರಾಯದ್ ಮತ್ತು ವಿನಾಯಕ ದತ್ತಾತ್ರೇಯ ಭಟ್ ರವರು ಚುನಾವಣಾ ದಾವಾ ಅರ್ಜಿಗಳನ್ನು ದಾಖಲಿಸಿದ್ದರು.
ಇದನ್ನೂ ಓದಿ:-ಉತ್ತರ ಕನ್ನಡ ದಲ್ಲಿ ಮಳೆ|ಶಿರಸಿ-ಸಿಡುಲು ಬಡಿದು ಯುವಕ ಸಾವು.
ಈ ದಾವಾ ಅರ್ಜಿಗಳನ್ನು ಇತ್ಯರ್ಥಪಡಿಸಿದ ನ್ಯಾಯಾಲಯ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಗಂಭೀರ ಲೋಪಗಳಾಗಿರುವುದನ್ನು ಮನಗಂಡು ಚುನಾವಣಾ ರಿಟರ್ನಿಂಗ್ ಅಧಿಕಾರಿಯವರು ಈ ಹಿಂದೆ ಹೊರಡಿಸಿದ್ದ ಚುನಾವಣಾ ಫಲಿತಾಂಶವನ್ನು ರದ್ದುಪಡಿಸಿದೆ.
ಇದನ್ನೂ ಓದಿ:-ರಾಜ್ಯಕ್ಕೆ ಎರಡನೇ Rank ನೀಡಿದ ಶಿರಸಿ ಶೈಕ್ಷಣಿಕ ಜಿಲ್ಲೆ |ವಿವರ ನೋಡಿ.
ಇನ್ನು ಆಡಳಿತ ಮಂಡಳಿಯ ರದ್ದತಿಯಿಂದ ಉಂಟಾಗಿರುವ ಖಾಲಿ ಸ್ಥಾನಕ್ಕೆ ವಿಶೇಷ ಅಧಿಕಾರಿ ನೇಮಿಸಲು ಸೂಚನೆ ನೀಡಿದ್ದು , ವಿಶೇಷಾಧಿಕಾರಿಯಾಗಿ ಶಿಕ್ಷಣ ಇಲಾಖೆಯ ಶಿಕ್ಷಣಾಧಿಕಾರಿ ಎಂ. ಹೆಚ್. ನಾಯ್ಕ್ ಅವರನ್ನು 6 ತಿಂಗಳ ಅವಧಿಗೆ ನೇಮಕ ಮಾಡಿದೆ.
ಇದಲ್ಲದೇ ಅಧಿಕಾರಾವಧಿ ಮುಕ್ತಾಯದ ವೇಳೆ ಸಂಘದ ಹೊಸ ಆಡಳಿತ ಮಂಡಳಿಯ ರಚನೆಗೆ ವ್ಯವಸ್ಥೆ ಮಾಡಲು ಸೂಚನೆ ನೀಡಿದೆ.






