Uttrakannada| ಶಿರೂರು ಭೂಕುಸಿತ ದುರಂತ ಈವರೆಗೆ ಆಗಿದ್ದೇನು? ವಿವರ ಇಲ್ಲಿದೆ.

Uttrakannada landslide at Shirur Ankola Taluk Uttrakannada landslide at Shirur Ankola Taluk

Uttrakannada Flood News :- ಉತ್ತರ ಕನ್ನಡ ಜಿಲ್ಲೆಯ ರಣಭೀಕರ ಮಳೆ (Rain)ಇಡೀ ಕರಾವಳಿಯನ್ನ ಅಲುಗಾಡಿಸಿಬಿಟ್ಟಿದೆ.ಅಂಕೋಲ ತಾಲೂಕಿನ ಶಿರೂರಿನಲ್ಲಿ ಭೂ ಕುಸಿತ ಸಾವು ನೋವುಗಳನ್ನು ತಂದೊಡ್ಡಿದ್ದು ಮತ್ತೆ ಭೂ ಕುಸಿತದ ಆತಂಕ ತಂದೊಡ್ಡಿದೆ. ಎಲ್ಲಿ ಏನೆಲ್ಲಾ ಅನಾಹುತವಾಗಿದೆ ಅದರ ಮಾಹಿತಿ ಇಲ್ಲಿದೆ.

ರಾಷ್ಟ್ರೀಯ ಹೆದ್ದಾರಿ 66 ರ ಶಿರೂರಿನಲ್ಲಿ ಭೂ ಕುಸಿತವಾಗಿ ಅಂಗಡಿ ಮನೆಗಳ ಮೇಲೆ ಗುಡ್ಡ ಕುಸಿದು ಏಳು ಜನರು ಸಾವು ಕಂಡಿದ್ದಾರೆ. ಇನ್ನು ಇದೇ ಭಾಗದ ಸಗಳಗೇರಿ ಗ್ರಾಮಪಂಚಾಯ್ತಿಯ ಉಳುವರೆ ಯಲ್ಲಿ ಸಣ್ಣಿ ಗೌಡ ಗಂಗಾವಳಿ ನದಿಯಲ್ಲಿ ಕೊಚ್ಚಿಹೋಗಿದ್ದಾರೆ. ಭೂ ಕುಸಿತ ದುರಂತದಲ್ಲಿ ಒಂದೇ ಕುಟುಂಬದ ಐದು ಜನ ಸಾವು ಕಂಡರೇ ,ಓರ್ವ ಟ್ರಕ್ ಚಾಲಕ ಸಿನ್ನಣ್ಣನ್ ಎಂದು ಗುರುತಿಸಲಾಗಿದೆ.

ಒಂದೇ ಕುಟುಂಬದ ಶಿರೂರಿನ ಸದಸ್ಯರಾದ ಶಾಂತಿ ಲಕ್ಷ್ಮಣ ನಾಯ್ಕ(36), ಲಕ್ಷ್ಮಣ ತಂದೆ ಬೊಮ್ಮಯ್ಯ ನಾಯ್ಕ, (42) ರೋಷನ್ ತಂದೆ ಲಕ್ಷ್ಮಣ ನಾಯ್ಕ (9 ) ಶವ ಪತ್ತೆಯಾಗಿದ್ದರೇ ಅವಂತಿಕ(5) ಹಾಗೂ ಉಪೇಂದ್ರ ನಾಯ್ಕ ಶವ ಪತ್ತೆಯಾಗಬೇಕಿದ್ದು ಉಳುವರೆ ಗ್ರಾಮದ ಸಣ್ಣಿಗೌಡ ಶವ ಸಹ ಸಿಗಬೇಕಿದೆ.

Advertisement

ಇನ್ನು ನಿನ್ನೆ ದೊರೆತ ಲಕ್ಷ್ಮಣ್ ನಾಯ್ಕ ಕುಟುಂಬದ ಶವವನ್ನು ಸಂಬಂಧಿಕರು ಶಿರೂರಿನಲ್ಲಿಶಿರೂರಿನಲ್ಲಿ (Shiruru landslide) ಒಂದೇ ಬಾರಿ ಮೂರು ಜನರ ಅಂತ್ಯ ಸಂಸ್ಕಾರ ನೆರವೇರಿಸಿದ್ದು ಕುಟುಂಬದ ರೋಧನ ಮುಗಿಲು ಮುಟ್ಟಿತ್ತು.

1001000299

ಶಿರೂರಿನಲ್ಲಿ ಕುಸಿದ ಗುಡ್ಡ ಗಂಗಾವಳಿ ನದಿಯಲ್ಲಿ ದೊಡ್ಡ ಪ್ರಮಾಣದ ಕಲ್ಲುಮಣ್ಣುಗಳು ಬಿದ್ದು ನೆರೆ ಸೃಷ್ಟಿಯಾಗಿ ಸಗಡಗೇರಿ ಗ್ರಾಮಪಂಚಾಯ್ತಿ ವ್ಯಾಪ್ತಿಯ ಉಳುವರೆ ಗ್ರಾಮದ ನಾಲ್ಕು ಮನೆಗಳನ್ನು ಸಂಪೂರ್ಣ ನೆಲಸಮ ಮಾಡಿದ್ದು 10 ಕ್ಕೂ ಹೆಚ್ಚು ಮನೆಗೆ ದೊಡ್ಡ ಹಾನಿ ಯಾಗಿ ಅಪಾರ ಪ್ರಮಾಣದ ನಷ್ಟ ತಂದೊಡ್ಡಿದೆ.

ಇದನ್ನೂ ಓದಿ:-Ankola| ಪ್ರಸಿದ್ಧ ವಿಭೂತಿ ಫಾಲ್ಸ್ ಗೆ ಪ್ರವಾಸಿಗರಿಗೆ ನಿಷೇಧ

ಇದಲ್ಲದೇ ಮನೆಯೊಳಗಿದ್ದ ಓರ್ವ ಮಹಿಳೆ ಕೊಚ್ಚಿಹೋದರೇ 14 ಜನರಿಗೆ ದೊಡ್ಡ ಪ್ರಮಾಣದ ಗಾಯಗಳಾಗಿದ್ದು ಕುಮಟಾ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ.

1000998716
ಮೃತ ಸಂತ್ರಸ್ತರ ಕುಟುಂಬಕ್ಕೆ ತಲಾ ಐದು ಲಕ್ಷ ಚಕ್ ವಿತರಣೆ.

ಶಿರೂರಿನಿಂದ ತೇಲಿಬಂದ ಹೆಚ್.ಪಿ ಕಂಪನಿಯ ಗ್ಯಾಸ್ ಟ್ಯಾಂಕರ್ ಸಗಡಗೇರಿ ಗ್ರಾಮದ ಬಳಿಯ ನದಿ ಭಾಗದಲ್ಲಿ ತೇಲಿ ಬಂದಿದ್ದು ಅನಿಲ ಸೋರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ 35 ಮನೆಗಳಿಗೆ ಅಲರ್ಟ ನೀಡಲಾಗಿದ್ದು ಗ್ರಾಮದ ಜನರನ್ನು ಸಹ ಕಾಳಜಿ ಕೇಂದ್ರಕ್ಕೆ ರವಾನೆ ಮಾಡಲಾಗಿದೆ.ಸ್ಥಳದಲ್ಲಿ ಅಗ್ನಿಶಾಮಕ ,ಪೊಲೀಸ್ ಸಿಬ್ಬಂದಿ ಹಾಗೂ ಹೆಚ್.ಪಿ ಕಂಪನಿಯ ತಜ್ಞರು ಮೊಕ್ಕಾಂ ಹೂಡಿದ್ದು ಯಾವುದೇ ಅವಘಡ ಆಗದಂತೆ ಎಚ್ಚರಿಕೆ ವಹಿಸಿದ್ದು ಟ್ಯಾಂಕರ್ ಮೇಲೆತ್ತುವ ಕಾರ್ಯವನ್ನು ಪ್ರಾರಂಭಿಸಬೇಕಿದೆ.

ಸದ್ಯ ಶಿರೂರಿನ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಕುಸಿದ ಗುಡ್ಡದ ಮಣ್ಣನ್ನು ತೆಗೆಯುವ ಕಾರ್ಯ ನಿರಂತರವಾಗಿ ನಡೆಯುತಿದ್ದು ,ನದಿಯಲ್ಲಿ ತೇಲಿ ಹೋದವರ ಶೋಧ ಕಾರ್ಯ ವನ್ನು NDRF ತಂಡ ಮಾಡುತ್ತಿದೆ.ಆದರೇ ನಿರಂತರ ಮಳೆ ಗುಡ್ಡ ತೆರವಿಗೆ ಅಡ್ಡಿಯಾಗುತಿದ್ರೆ, ಕುಸಿದ ಗುಡ್ಡದ ಮಣ್ಣಿನಲ್ಲಿ ಮತ್ತಷ್ಟು ಜನ ಸಿಲುಕಿ ಸಾವು ಕಂಡಿರುವ ಶಂಕೆ ಇದ್ದು ಕಾರ್ಯಾಚರಣೆ ಮುಂದುವರೆದಿದ್ದು ಮತ್ತೆಷ್ಟು ಶವಗಳು ಸಿಗಲಿದೆಯೋ ಎಂಬುದನ್ನು ಕಾದುನೋಡಬೇಕಿದೆ.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement