Uttrakannada News Rainy days flood damage

Uttrakannada Rain| ಮಳೆಯಿಂದ ಎಲ್ಲೆಲ್ಲಿ ಹಾನಿ ವಿವರ ನೋಡಿ.

58

RAIN NEWS:- ಉತ್ತರ ಕನ್ನಡ (Uttra kannda ) ಜಿಲ್ಲೆಯಾಧ್ಯಾಂತ ಜುಲೈ 07 ರಂದು ಉತ್ತಮ ಮಳೆಯಾಗುತ್ತಿದೆ. ಹವಾಮಾನ ಇಲಾಖೆ ( weather department) ಯಲ್ಲೋ ಅಲರ್ಟ ನೀಡಿದೆ.ಜೊತೆಗೆ ಮೀನುಗಾರರಿಗೆ ಜುಲೈ 09 ರ ವರೆಗೆ ಸಮುದ್ರಕ್ಕಿಳಿಯದಂತೆ ಸೂಚಿಸಲಾಗಿದೆ.

ಈಗಾಗಲೇ ಕಡಲ ಭಾಗದಲ್ಲಿ 5.5 mm ನಷ್ಟು ಎತ್ತರದ ಅಲೆಗಳು ಏಳುತಿದ್ದು 55 ರಿಂದ 65 ಕಿಲೋ ಮೀಟರ್ ವೇಗದಲ್ಲಿ ಗಾಳಿ ಬೀಸುವ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ.

ಇಂದು ಎಲ್ಲಿ ಸಮಸ್ಯೆ.

ಜಿಲ್ಲೆಯ ಕಾರವಾರ ದಲ್ಲಿ ಅತೀ ಹೆಚ್ಚು ಮಳೆ (Rain) ಬೀಳುತಿದ್ದು ಚಂಡಿಯಾ ಗ್ರಾಮ ಇಡೂರು ಭಾಗದಲ್ಲಿ ರಸ್ತೆ ,ಕೃಷಿ ಭೂಮಿ ಜಲಾವೃತವಾಗಿದೆ. ಇನ್ನು ಇಲ್ಲಿನ 20 ಮನೆಗಳು ಜಲಾವೃತದ ಭೀತಿಯಲ್ಲಿದೆ.

ಹೊನ್ನಾವರ ಠಾಣಾ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಕರ್ನಲ್ ಹಿಲ್ ಗುಡ್ಡ ಕುಸಿದಿದ್ದು ರಸ್ತೆಯ ಮೇಲೆ ಮಣ್ಣು ಬಿದ್ದು ಒಂದು ಕಡೆಯಿಂದ ಮಾತ್ರ ಸಂಚಾರ ವ್ಯವಸ್ಥೆ ಮಾಡಲಾಗಿದೆ. ಐಆರ್‌ಬಿ ಸಿಬ್ಬಂದಿಗಳು ಕೆಲಸ ನಿರ್ವಹಿಸುತ್ತಿದ್ದಾರೆ. ಇನ್ನೊಂದು ಗಂಟೆಯಲ್ಲಿ ರಸ್ತೆ ಸಂಚಾರ ಸುಗಮವಾಗಲಿದೆ.

ಇನ್ನು ಯಲ್ಲಾಪುರ ಭಾಗದ ರಾಷ್ಟ್ರೀಯ ಹೆದ್ದಾರಿ 63 ರ ಅರೆಬೈಲ್ ಘಟ್ಟದಲ್ಲಿ ಹೆದ್ದಾರಿ ಮೇಲೆ ಮರ ಬಿದ್ದು ಸಂಚಾರಕ್ಕೆ ಸಮಸ್ಯೆಯಾಗಿದ್ದು ಇದೀಗ ಹೆದ್ದಾರಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ.

ಜಿಲ್ಲೆಯಲ್ಲಿ ಒಟ್ಟು 9 ಕಾಳಜಿ ಕೇಂದ್ರ ತೆರೆಯಲಾಗಿದ್ದು ಸದ್ಯ ನದಿ ಪಾತ್ರದ ಭಾಗದಲ್ಲಿ ಮಳೆಯ ನೀರು ಕಮ್ಮಿಯಾಗಿದ್ದರಿಂದ ಕಾಳಜಿ ಕೇಂದ್ರದಲ್ಲಿ 25 ಜನ ಮಾತ್ರ ಆಶ್ರಯ ಪಡೆದಿದ್ದಾರೆ.

ಸದ್ಯ ಮಲೆನಾಡು ಭಾಗದ ಶಿರಸಿ,ಸಿದ್ದಾಪುರ, ಯಲ್ಲಾಪುರ ಭಾಗದಲ್ಲಿ ಸಹ ಉತ್ತಮ ಮಳೆಯಾಗುತಿದ್ದು ಯಾವುದೇ ಅನಾಹುತ ಸಂಭವಿಸಿಲ್ಲ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!