ಶಿರೂರಿನಲ್ಲಿ ಮುಂದುವರೆದ ಶವ ಶೋಧ ಕಾರ್ಯಾಚರಣೆ|ಸಿಕ್ತು ಮಹತ್ವದ ಮಾಹಿತಿ!

Shirur ankola landslide operation Shirur ankola landslide operation

Landslide News:- Ankola ತಾಲೂಕಿನ ಶಿರೂರಿನಲ್ಲಿ ಭೂಕುಸಿತವಾಗಿ ಒಂದು ತಿಂಗಳು ಕಳೆದಿದ್ದು ಇಂದು ಸಹ ಕಾಣೆಯಾದವರ ಶೋಧ ಕಾರ್ಯವನ್ನು ಈಶ್ವರ ಮಲ್ಪೆ ನೇತ್ರತ್ವದಲ್ಲಿ ಮುಂದುವರೆಸಿದ್ದಾರೆ.

ಆದರೇ ಘಟ್ಟ ಪ್ರದೇಶದಲ್ಲಿ ಮಳೆಯಿಂದ(Rain) ನದಿ ನೀರು ಮಣ್ಣು ಮಿಶ್ರಿತವಾಗಿದ್ದು ಶೋಧ ಕಾರ್ಯಕ್ಕೆ ಅಡ್ಡಿಯಾಗಿದೆ.ಈ ಹಿನ್ನಲೆಯಲ್ಲಿ ಇಂದು ಗಂಗಾವಳಿ ನದಿಯಲ್ಲಿ ಬಿದ್ದಿರುವ ಎರಡು ಆಲದ ಮರವನ್ನು ಹೊರೆತೆಗೆಯಲು ಸಿದ್ದತೆ ಮಾಡಿಕೊಂಡಿದ್ದು ನೌಕಾದಳ,NDRF,SDRF ತಂಡ ಭಾಗಿಯಾಗಿದೆ.

Advertisement

ಇಂದು ಏನೆಲ್ಲಾ ಕಾರ್ಯಾಚರಣೆ?

ಇಂದು ಬೆಳಗ್ಗಿನಿಂದ ಮೊದಲು ಶವ ಶೋಧಕ್ಕಾಗಿ ಕಾರ್ಯಾಚರಣೆ ಮಾಡಲಾಯಿತು. ಆದರೇ ಯಲ್ಲಾಪುರ ಭಾಗದಲ್ಲಿ ಮಳೆಯಿಂದ ಗಂಗಾವಳಿ ನದಿ ನೀರಿಗೆ ಮಣ್ಣು ಮಿಶ್ರಣವಾಗಿ ಕೆಂಪಾಗಿದೆ. ಹೀಗಾಗಿ ಶವ ಶೋಧಕ್ಕೆ ಅಡ್ಡಿಯಾಗಿದೆ.
ಇನ್ನು ನದಿ ನೀರಿನ ಪ್ರಮಾಣ ಕಮ್ಮಿ ಇದ್ದು ಈ ಕಾರಣ ಗಂಗಾವಳಿ ನದಿಯಲ್ಲಿ ಬಿದ್ದಿರುವ ಎರಡು ಆಲದ ಮರವನ್ನು ಮೇಲೆತ್ತಲು ರೋಪ್ ಅಳವಡಿಸಿ ಕ್ರೇನ್ ಮೂಲಕ ಎಳೆಯಲು ವ್ಯವಸ್ಥೆ ಮಾಡಲಾಗುತ್ತಿದೆ. ಇನ್ನು ಈಶ್ವರ್ ಮಲ್ಪೆ ತಂಡ ನೀರಿನಲ್ಲಿ ಮುಳುಗಿರುವ ಲಾರಿಭಾಗದಲ್ಲಿ ರೋಪ್ ಕಟ್ಟಿ ಎಳೆಯಲು ವ್ಯವಸ್ಥೆ ಮಾಡುತಿದ್ದಾರೆ.

ಜೊತೆಗೆ ಭೂ ಕುಸಿತವಾದ ಪ್ರದೇಶದಲ್ಲಿ ಇದ್ದ ಅಂಗಡಿ ಬಳಿ ಮೆಟಲ್ ಡಿಟೆಕ್ಟರ್ ಮೂಲಕ ಸರ್ಚ ಮಾಡಲಾಗುತ್ತಿದೆ.ಜೊತೆಗೆ ಇದೇ ಭಾಗದಲ್ಲಿ ಹೆಸ್ಕಾಂ ನಿಂದ ವಿದ್ಯುತ್ ತಂತಿ ಹಾಗೂ ಕಂಬ ಅಳವಡಿಸುವ ಕಾರ್ಯ ನಡೆಯುತ್ತಿದೆ.

ನದಿ ತೀರ ಪ್ರದೇಶದಲ್ಲಿ ಎರಡು ಭಾಗ ಮೆಟಲ್ ಡಿಟೆಕ್ಟ್.

ಇನ್ನು ರಾಡರ್ ಮೂಲಕ ನದಿ ಭಾಗದಲ್ಲಿ ಸರ್ಚ್ ಮಾಡಿದ್ದು ಎರಡು ಭಾಗದಲ್ಲಿ ಭಾರವಾದ ಕಬ್ಬಿಣಗಳು ಇರುವುದು ಪತ್ತೆಯಾಗಿದೆ.ಇದನ್ನು ಸಹ ಇಂದು ಕಾರ್ಯಾಚರಣೆ ನಡೆಸಿ ತೆಗೆಯಲಾಗುತ್ತಿದೆ.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement